ಐಬಾಲ್‌ನಿಂದ ಎರಡು 3ಜಿ ಸಿಮ್‌ ಹಾಕಬಹುದಾದ ಟ್ಯಾಬ್ಲೆಟ್‌ ಬಿಡುಗಡೆ

Written By:

ಐಬಾಲ್‌ ಕಂಪೆನಿ ಮಾರುಕಟ್ಟೆಗೆ ಹೊಸ ಡ್ಯುಯಲ್‌ ಸಿಮ್‌ ಟ್ಯಾಬ್ಲೆಟ್‌ ಬಿಡುಗಡೆ ಮಾಡಿದೆ. ಐಬಾಲ್‌ ಸ್ಲೈಡ್‌ 3ಜಿ,7334 ಕ್ಯೂ ಹೆಸರಿನ ಟ್ಯಾಬ್ಲೆಟ್‌ ಬಿಡುಗಡೆ ಮಾಡಿದ್ದು 11,499 ಬೆಲೆಯನ್ನು ನಿಗದಿ ಮಾಡಿದೆ.

ಹೊಸದಾಗಿ ಬಿಡುಗಡೆಯಾಗುವ ಡ್ಯುಯಲ್‌ ಸಿಮ್‌ ಟ್ಯಾಬ್ಲೆಟ್‌ನಲ್ಲಿ ಹೆಚ್ಚಾಗಿ ಒಂದು ಸಿಮ್‌ ಮಾತ್ರ 3ಜಿ ಸಪೋರ್ಟ್ ಮಾಡುತ್ತದೆ. ಆದರೆ ಈ ಟ್ಯಾಬ್ಲೆಟ್‌ನಲ್ಲಿ ಎರಡೂ ಸ್ಲಾಟ್‌ 3ಜಿ ಸಿಮ್‌ಗೆ ಸಪೋರ್ಟ್‌ ಮಾಡುತ್ತದೆ.1.3GHz ARM Cortex ಎ 7 ಕ್ವಾಡ್ ಕೋರ್‍ ಪ್ರೊಸೆಸರ್‌, 1GB DDR3 RAM,8GB ಆಂತರಿಕ ಮೆಮೊರಿ ಸಹ ಹೊಂದಿದೆ. ಹಿಂದುಗಡೆ 2 ಎಂಪಿ ಕ್ಯಾಮೆರಾವಿದ್ದರೆ, ಮುಂದುಗಡೆ ವಿಡಿಯೋ ಕಾಲಿಂಗ್‌ಗಾಗಿ ವಿಜಿಎ ಕ್ಯಾಮೆರಾವನ್ನು ಸಹ ನೀಡಿದ್ದಾರೆ. 8GB ಆಂತರಿಕ ಮೆಮೊರಿಯಲ್ಲಿ 6GB ಬಳಕೆದಾರರು ಡೇಟಾವನ್ನು ಸಂಗ್ರಹ ಮಾಡಬಹುದು ಎಂದು ಕಂಪೆನಿ ತಿಳಿಸಿದೆ.

 ಐಬಾಲ್‌ನಿಂದ ಎರಡು 3ಜಿ ಸಿಮ್‌ ಹಾಕಬಹುದಾದ ಟ್ಯಾಬ್ಲೆಟ್‌ ಬಿಡುಗಡೆ

ಐಬಾಲ್‌ ಸ್ಲೈಡ್‌ 3ಜಿ,7334 ಕ್ಯೂ
ಡ್ಯುಯಲ್‌ ಸಿಮ್‌(3ಜಿ+3ಜಿ)
7 ಇಂಚಿನ ಐಪಿಎಸ್‌ ಡಿಸ್ಪ್ಲೇ(600x1024 ಪಿಕ್ಸೆಲ್‌)
ಆಂಡ್ರಾಯ್ಡ್‌ 4.2 ಜೆಲ್ಲಿ ಬೀನ್‌ ಓಎಸ್‌
1.3GHz ARM Cortex ಎ 7 ಕ್ವಾಡ್ ಕೋರ್‍ ಪ್ರೊಸೆಸರ್‌
1GB DDR3 RAM
8GB ಆಂತರಿಕ ಮೆಮೊರಿ
2 ಎಂಪಿ ಹಿಂದುಗಡೆ ಕ್ಯಾಮೆರಾ
ಮುಂದುಗಡೆ ವಿಜಿಎ ಕ್ಯಾಮೆರಾ
32GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
3ಜಿ,ವೈಫೈ,ಬ್ಲೂಟೂತ್‌,ಜಿಪಿಎಸ್‌,ಮೈಕ್ರೋ ಯುಎಸ್‌ಬಿ
3000mAh ಬ್ಯಾಟರಿ

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot