Just In
- 16 min ago
ಸ್ಮಾರ್ಟ್ಫೋನ್ಗಳಲ್ಲಿನ ಸೆನ್ಸರ್ಗಳ ಬಗ್ಗೆ ನಿಮಗೆ ಗೊತ್ತಾ?..ಇವುಗಳಿಂದ ಲಾಭವೇನು?
- 55 min ago
ಏರ್ಟೆಲ್ ಗ್ರಾಹಕರೇ, ಅವಸರವಾಗಿ ರೀಚಾರ್ಜ್ ಮಾಡಬೇಡಿ, ಈ ಪ್ಲ್ಯಾನ್ ಗಮನಿಸಿ!
- 1 hr ago
ಲೆನೊವೊದಿಂದ ಭಾರತದಲ್ಲಿ ಹೊಸ ಲ್ಯಾಪ್ಟಾಪ್ ಬಿಡುಗಡೆ! ಇದರ ಕಾರ್ಯದಕ್ಷತೆ ಹೇಗಿದೆ?
- 2 hrs ago
ಟೆಲಿಗ್ರಾಮ್ನಲ್ಲಿ ವಾಟ್ಸಾಪ್ ಅನ್ನೇ ಮೀರಿಸುವ ಫೀಚರ್ಸ್!; ಬಳಕೆದಾರರಿಗೆ ಸಾಕಷ್ಟು ಅನುಕೂಲ
Don't Miss
- News
ಯಡಿಯೂರಪ್ಪ ಅವರ ಮಗನ್ನ ಮಂತ್ರಿ ಮಾಡಬೇಕಾಗುತ್ತೆ ಅಂತಲೇ ಮಂತ್ರಿಮಂಡಲ ವಿಸ್ತರಣೆ ಮಾಡುತ್ತಿಲ್ಲ:ಸಿದ್ದರಾಮಯ್ಯ
- Automobiles
ಭಾರತದಲ್ಲಿ ಗ್ಲಾಂಝಾ ಪ್ರೀಮಿಯಂ ಹ್ಯಾಚ್ಬ್ಯಾಕ್ನ ಬೆಲೆ ಹೆಚ್ಚಿಸಿದ ಟೊಯೊಟಾ
- Sports
Border-Gavaskar Trophy: ಭಾರತ vs ಆಸ್ಟ್ರೇಲಿಯಾ ಅತಿ ಹೆಚ್ಚು ರನ್, ಹೆಚ್ಚು ವಿಕೆಟ್ ಗಳಿಸಿದ ಆಟಗಾರರ ಪಟ್ಟಿ
- Movies
"ನನ್ನ ಕೋರಿಕೆಯನ್ನು ನಡೆಸಿಕೊಡುವಿರಿ ಎಂದು ನಂಬಿರುತ್ತೇನೆ": ಅಭಿಮಾನಿಗಳಲ್ಲಿ ದರ್ಶನ್ ವಿಶೇಷ ಮನವಿ
- Finance
Real Estate Deal: ದೇಶದ ಅತೀ ದೊಡ್ಡ ರಿಯಲ್ ಎಸ್ಟೇಟ್ ಡೀಲ್ಗೆ ಹೂಡಿಕೆ ಮಾಡಿದ ವ್ಯಕ್ತಿ ಬಗ್ಗೆ ತಿಳಿಯಿರಿ
- Lifestyle
ಕ್ಯಾನ್ಸರ್ ಚಿಕಿತ್ಸೆ ಬಳಿಕ ಮಗು ಪಡೆಯಲು ಸುರಕ್ಷಿತ ವಿಧಾನ ಇದೇ ನೋಡಿ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಕಂಪ್ಯೂಟರ್ ನಾಶ..! ಭಾರತೀಯ ವಿದ್ಯಾರ್ಥಿಗೆ 1 ವರ್ಷ ಸೆರೆವಾಸ..!
ಜಾಗತಿಕ ಮಟ್ಟದಲ್ಲಿ ಸೈಬರ್ ಅಪರಾಧಗಳು ಹೆಚ್ಚುತ್ತಿದ್ದು, ಅನೇಕ ಸಂಸ್ಥೆಗಳು ಸೈಬರ್ ಕ್ರೈಂನಿಂದ ಹಾನಿಗೊಳಗಾಗುತ್ತಿವೆ. ಅಂತಹದ್ದೇ ಒಂದು ಪ್ರಕರಣದಲ್ಲಿ ಭಾರತದ ಮಾಜಿ ವಿದ್ಯಾರ್ಥಿ ಅಮೆರಿಕದಲ್ಲಿ 12 ತಿಂಗಳ ಜೈಲು, ನಂತರ ಒಂದು ವರ್ಷದ ಮೇಲ್ವಿಚಾರಣೆಯ ಬಿಡುಗಡೆ ಶಿಕ್ಷೆಗೆ ಗುರಿಯಾಗಿದ್ದಾನೆ. 27 ವರ್ಷದ ವಿಶ್ವನಾಥ್ ಅಕುತೋಟಾ ಎಂಬಾತ ಉದ್ದೇಶಪೂರ್ವಕವಾಗಿ ಕಂಪ್ಯೂಟರ್ ಉಪಕರಣಗಳಿಗೆ ಹಾನಿ ಮಾಡಿದ ಆರೋಪ ಸಾಬೀತಾಗಿದ್ದು, ಭಾರಿ ಪ್ರಮಾಣದ ದಂಡ ವಿಧಿಸಿದೆ.

ಭಾರೀ ಪ್ರಮಾಣದ ದಂಡ
ಮೂಲತಃ ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ವಿಶ್ವನಾಥ್ ಅಕುಥೋಟಾ ಅಮೆರಿಕದ ನ್ಯೂಯಾರ್ಕ್‌ನ ಸೇಂಟ್ ರೋಸ್ ಕಾಲೇಜಿನಲ್ಲಿ ವ್ಯಾಸಂಗ ಮಾಡಿದ್ದರು. ಸಂಸ್ಥೆಯ ಒಡೆತನದ ಕಂಪ್ಯೂಟರ್ ಉಪಕರಣಗಳಿಗೆ ಹಾನಿಯಾಗಿರುವುದರಿಂದ ಸುಮಾರು 41,74,975 ರೂ. ಮೊತ್ತ ಪಾವತಿಸಲು ಕೋರ್ಟ್ ಆದೇಶ ನೀಡಿದೆ. ಅಕುಥೋಟಾ ಭಾರತದ ಪ್ರಜೆಯಾಗಿದ್ದು, ವಿದ್ಯಾರ್ಥಿ ವೀಸಾದಲ್ಲಿ ಯುನೈಟೆಡ್ ಸ್ಟೇಟ್ಸ್‌ನಲ್ಲಿ ವಾಸಿಸುತ್ತಿದ್ದಾರೆ. ಅವರನ್ನು ಫೆಬ್ರವರಿ 22, 2019 ರಂದು ಉತ್ತರ ಕೆರೊಲಿನಾದಲ್ಲಿ ಬಂಧಿಸಿದಾಗಿನಿಂದ ಅವರು ಬಂಧನದಲ್ಲಿದ್ದಾರೆ ಎಂದು ಯುಎಸ್ ಅಟಾರ್ನಿ ಕಚೇರಿ ತಿಳಿಸಿದೆ.

ಏನೀದು ಪ್ರಕರಣ..?
ದಿ ನ್ಯೂಸ್ ಮಿನಿಟ್ ಪ್ರಕಾರ, ವಿಶ್ವನಾಥ್ ವಿಶ್ವವಿದ್ಯಾಲಯದಲ್ಲಿ ಮಾಸ್ಟರ್ ಆಫ್ ಬ್ಯುಸಿನೆಸ್ ಅಡ್ಮಿನಿಸ್ಟ್ರೇಷನ್ (ಎಂಬಿಎ) ಮತ್ತು ಕಂಪ್ಯೂಟರ್ ಇನ್ಫಾರ್ಮೇಶನ್ ಸಿಸ್ಟಮ್ಸ್ (ಸಿಐಎಸ್)ನಲ್ಲಿ ವ್ಯಾಸಂಗ ಮಾಡಿದ್ದಾರೆ. ಫೆಬ್ರವರಿ 14, 2019 ರಂದು 66 ಕಂಪ್ಯೂಟರ್‌ಗಳಿಗೆ "ಯುಎಸ್‌ಬಿ ಕಿಲ್ಲರ್" ಸಾಧನ ಜೋಡಿಸಿದ್ದನ್ನು ವಿಶ್ವನಾಥ್ ಒಪ್ಪಿಕೊಂಡಿದ್ದಾರೆ. ಹಲವಾರು ಕಂಪ್ಯೂಟರ್ ಮಾನಿಟರ್‌ಗಳು ಮತ್ತು ಆಲ್ಬನಿ ಕಾಲೇಜಿನ ಒಡೆತನದ ಕಂಪ್ಯೂಟರ್ ವರ್ಧಿತ ಪೋಡಿಯಂಗಳಿಗೆ ಯುಎಸ್‌ಬಿ ಕಿಲ್ಲರ್ ಜೋಡಿಸಿದ್ದಾರೆ. ಯುಎಸ್‌ಬಿ ಕಿಲ್ಲರ್ ಸಾಧನವನ್ನು ಯುಎಸ್‌ಬಿ ಪೋರ್ಟ್‌ಗೆ ಸೇರಿಸಿದಾಗ, ಆನ್-ಬೋರ್ಡ್ ಕೆಪಾಸಿಟರ್ ವೇಗವಾಗಿ ಚಾರ್ಜ್ ಆಗುತ್ತದೆ ಮತ್ತು ನಂತರ ಪದೇ ಪದೇ ಡಿಸ್ಚಾರ್ಜ್ ಆಗುವ ಸಮಸ್ಯೆ ಕಂಡುಬಂತು. ಇದರಿಂದ ಕಂಪ್ಯೂಟರ್‌ನ ಯುಎಸ್‌ಬಿ ಪೋರ್ಟ್ ಮತ್ತು ವಿದ್ಯುತ್ ವ್ಯವಸ್ಥೆ ಓವರ್‌ಲೋಡ್ ಆಗಿದ್ದಲ್ಲದೇ, ಹಾರ್ಡ್‌ವೇರ್ ಕೂಡ ನಾಶವಾಗಿದೆ ಎಂದು ಯುಎಸ್ ಅಟಾರ್ನಿ ಕಚೇರಿ ಹೇಳಿದೆ.

ವಿಡಿಯೋ ಸಾಕ್ಷ್ಯ
ಪ್ರಕರಣದ ತನಿಖೆ ನಡೆಸುತ್ತಿರುವ ಅಧಿಕಾರಿಗಳು ಸಾಕಷ್ಟು ಸಾಕ್ಷ್ಯಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಇಡೀ ಘಟನೆಯ ಸಿಸಿಟಿವಿ ದೃಶ್ಯಾವಳಿಗಳೂ ಇದರಲ್ಲಿ ಸೇರಿವೆ. ಕಂಪ್ಯೂಟರ್‌ಗಳನ್ನು ನಾಶಪಡಿಸಲು ವಿಶ್ವನಾಥ್ ಯುಎಸ್‌ಬಿ ಕಿಲ್ಲರ್ ಸಾಧನ ಬಳಸಿದ್ದನ್ನು ಸ್ವತಃ ರೆಕಾರ್ಡ್ ಮಾಡಿದ್ದಾರೆ ಎಂದು ಅಧಿಕಾರಿಗಳು ನ್ಯಾಯಾಲಯಕ್ಕೆ ತಿಳಿಸಿದ್ದು, ಅದರ ವಿಡಿಯೋಗಳನ್ನು ಸಹ ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ.

ಎಫ್‌ಬಿಐನಿಂದ ತನಿಖೆ
ಪ್ರಕರಣದ ತನಿಖೆಯನ್ನು ಎಫ್‌ಬಿಐನ ಆಲ್ಬನಿ ಫೀಲ್ಡ್ ಆಫೀಸ್‌ನ ವಿಶೇಷ ಏಜೆಂಟ್ ಜೇಮ್ಸ್ ಎನ್.ಹೆಂಡ್ರಿಕ್ಸ್ ನಡೆಸಿದ್ದಾರೆ ಎಂದು ವರದಿಯಾಗಿದೆ. ಆಲ್ಬನಿ ಪೊಲೀಸ್ ಇಲಾಖೆಯ (ಎಪಿಡಿ) ಮುಖ್ಯಸ್ಥ ಎರಿಕ್ ಹಾಕಿನ್ಸ್ ಈ ಪ್ರಕರಣದಲ್ಲಿ ಎಫ್‌ಬಿಐಗೆ ಸಹಾಯ ಮಾಡಿದ್ದು, ಅಕುಥೋಟಾ ವಿರುದ್ಧದ ಪ್ರಕರಣವನ್ನು ಸಹಾಯಕ ಯುಎಸ್ ಅಟಾರ್ನಿ ವೇಯ್ನ್ ಎ ಮೈಯರ್ಸ್ ವಿಚಾರಣೆ ನಡೆಸಿದ್ದಾರೆ. ಇನ್ನು, ಅಕುಥೋಟಾರ ಈ ಕಾರ್ಯಕ್ಕೆ ಕಾರಣವೇನು ಎಂಬುದು ಬಹಿರಂಗಗೊಂಡಿಲ್ಲ.
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470