Infinix: ಅ.17ಕ್ಕೆ ಬರುತ್ತೆ ಹೊಸ ಲ್ಯಾಪ್‌ಟಾಪ್; ಅಚ್ಚರಿ ಫೀಚರ್ಸ್, ಆಕರ್ಷಕ ಬೆಲೆ!
ಇನ್ಫಿನಿಕ್ಸ್ (Infinix) ಕಂಪನಿಯು ಭಾರತದಲ್ಲಿ ಮತ್ತೊಂದು ಹೊಸ ಲ್ಯಾಪ್‌ಟಾಪ್ ಬಿಡುಗಡೆ ಮಾಡಲು ಸಜ್ಜಾಗಿದೆ. ಇದು ಇನ್ಫಿನಿಕ್ಸ್ ಇನ್‌ಬುಕ್ ಏರ್ ಪ್ರೊ ಪ್ಲಸ್ (Infinix Inbook Air Pro+) ಎಂಬ ಹೆಸರಿನೊಂದಿಗೆ ಭಾರತೀಯ ಮಾರುಕಟ್ಟೆಗೆ ಎಂಟ್ರಿ ಕೊಡಲಿದೆ. ಈಗಾಗಲೇ, ಕಂಪನಿಯು ಬಿಡುಗಡೆ ದಿನಾಂಕವನ್ನು ಘೋಷಿಸಿದೆ. ಅದರಂತೆ, ಇದೇ ಅಕ್ಟೋಬರ್ 17 ರಂದು ನೂತನ ಲ್ಯಾಪ್‌ಟಾಪ್ ಲೋಕಾರ್ಪಣೆಗೊಳ್ಳಲಿದೆ. ವಿಶೇಷವೆಂದರೆ, ಕಂಪನಿಯ ಮೊದಲ ಫ್ಲಿಪ್ ಫೋನ್ ಕೂಡ ಅಂದೇ ಲಾಂಚ್ ಆಗಲಿದೆ. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.
ಇನ್ಫಿನಿಕ್ಸ್ ಇನ್‌ಬುಕ್ ಏರ್ ಪ್ರೊ ಪ್ಲಸ್ ಲ್ಯಾಪ್‌ಟಾಪ್ ಸ್ಲಿಮ್ ವಿನ್ಯಾಸವನ್ನು ಹೊಂದಿದೆ. ಇದು ಅಲ್ಯೂಮಿನಿಯಂ ಮತ್ತು ಮೆಗ್ನೀಸಿಯಮ್ ಮಿಶ್ರಲೋಹದ ಲೋಹದ ಕ್ಲೋಸಿಂಗ್ ಒಳಗೊಂಡಿದೆ. ಇದಲ್ಲದೆ, ಈ ಲ್ಯಾಪ್‌ಟಾಪ್ ಪ್ರೀಮಿಯಂ AG ಗ್ಲಾಸ್ ಟಚ್ ಪ್ಯಾಡ್ ಮತ್ತು ಟಚ್‌ಲಿಟ್ ಕೀಬೋರ್ಡ್‌ನೊಂದಿಗೆ ಬರುತ್ತದೆ. ಇದು ವಿಂಡೋಸ್ 11 ಓಎಸ್‌ನೊಂದಿಗೆ ಕೆಲಸ ನಿರ್ವಹಿಸುತ್ತದೆ. 3.64 ಇಂಚಿನ ಕವರ್ ಡಿಸ್ಪ್ಲೇ ಸೇರಿದಂತೆ ಹಲವು ವೈಶಿಷ್ಟ್ಯಗಳೊಂದಿಗೆ ಬಿಡುಗಡೆಯಾಗಲಿದೆ.

ಇನ್ಫಿನಿಕ್ಸ್ ಇನ್‌ಬುಕ್ ಏರ್ ಪ್ರೊ ಪ್ಲಸ್ ವೈಶಿಷ್ಟ್ಯಗಳು
ಇನ್ಫಿನಿಕ್ಸ್ ಇನ್‌ಬುಕ್ ಏರ್ ಪ್ರೊ ಪ್ಲಸ್ ಲ್ಯಾಪ್‌ಟಾಪ್ (Infinix Inbook Air Pro+) Copilot AI ಬಟನ್‌ನೊಂದಿಗೆ ಬಿಡುಗಡೆಯಾಗಲಿದೆ. ವರದಿಯ ಪ್ರಕಾರ, ಈ ಲ್ಯಾಪ್‌ಟಾಪ್ ಅನ್ನು 14 ಇಂಚಿನ ಅಮೋಲೆಡ್ ಡಿಸ್ಪ್ಲೇಯೊಂದಿಗೆ ಪರಿಚಯಿಸಲಾಗುವುದು. ಇ ಡಿಸ್ಪ್ಲೇಯು 2880 x 1800 ಪಿಕ್ಸೆಲ್‌ಗಳ ರೆಸಲ್ಯೂಶನ್ ಮತ್ತು 120Hz ನ ರಿಫ್ರೆಶ್ ದರವನ್ನು ಹೊಂದಿದೆ ಎಂದು ಹೇಳಲಾಗುತ್ತಿದೆ.
ಪ್ರೊಸೆಸರ್, ಸಾಫ್ಟ್‌ವೇರ್ ವಿವರ
ಮುಂಬರುವ ಇನ್ಫಿನಿಕ್ಸ್ ಲ್ಯಾಪ್‌ಟಾಪ್ ಇಂಟೆಲ್ ಕೋರ್ ಐ5 1334 ಯು ಪ್ರೊಸೆಸರ್‌ನೊಂದಿಗೆ ಕೆಲಸ ನಿರ್ವಹಿಸುತ್ತದೆ. ಈ ಪ್ರೊಸೆಸರ್ ಅನ್ನು Intel Iris Xe Graphics G7 ಇಂಟಿಗ್ರೇಟೆಡ್ ಗ್ರಾಫಿಕ್ಸ್‌ನೊಂದಿಗೆ ಜೋಡಿಸಲಾಗಿದೆ. ಇದು 16GB LPDDR4X 4266MHz RAM ಮತ್ತು 512GB SSD ಸ್ಟೋರೇಜ್ ಅನ್ನು ಹೊಂದಿದೆ. ಮತ್ತು Windows 11 OS ನೊಂದಿಗೆ ಕಾರ್ಯನಿರ್ವಹಿಸುತ್ತದೆ.
ಫ್ಲಿಪ್‌ಕಾರ್ಟ್ ಮೂಲಕ ಮಾರಾಟ
ಇನ್ಫಿನಿಕ್ಸ್ ಇನ್‌ಬುಕ್ ಏರ್ ಪ್ರೊ ಪ್ಲಸ್ ಲ್ಯಾಪ್‌ಟಾಪ್ 1 ಕೆಜಿ ತೂಕ ಹೊಂದಿರಲಿದೆ. ಲ್ಯಾಪ್‌ಟಾಪ್ ಅನ್ನು ಕಂಪನಿಯ ಅಧಿಕೃತ ವೆಬ್‌ಸೈಟ್ ಮತ್ತು ಜನಪ್ರಿಯ ಇ ಕಾಮರ್ಸ್ ಪ್ಲಾಟ್‌ಫಾರ್ಮ್ ಫ್ಲಿಪ್‌ಕಾರ್ಟ್ ಮೂಲಕ ಮಾರಾಟ ಮಾಡಲಾಗುವುದು. ಲ್ಯಾಪ್‌ಟಾಪ್ ಜೊತೆಗೆ, ಮೊದಲ ಮಡಚಬಹುದಾದ ಫೋನ್ ಇನ್ಫಿನಿಕ್ಸ್ ಝೀರೋ ಫ್ಲಿಪ್ ಫೋನ್ ಅಕ್ಟೋಬರ್ 17 ರಂದು ಬಿಡುಗಡೆಯಾಗಲಿದೆ. ಈ ಫೋನಿನ ವೈಶಿಷ್ಟ್ಯಗಳನ್ನು ಈ ಕೆಳಗಿನಂತಿವೆ.
ಇನ್ಫಿನಿಕ್ಸ್ ಝೀರೋ ಫ್ಲಿಪ್ 5G ಫೋನಿನ ವೈಶಿಷ್ಟ್ಯಗಳು
ಇನ್ಫಿನಿಕ್ಸ್ ಝೀರೋ ಫ್ಲಿಪ್ 5G ಫೋನ್ ಇದು 6.9 ಇಂಚಿನ ಪೂರ್ಣ ಹೆಚ್‌ಡಿ ಪ್ಲಸ್ ಅಮೋಲೆಡ್ ಪ್ರಾಥಮಿಕ ಡಿಸ್ಪ್ಲೇಯನ್ನು ಹೊಂದಿದೆ. ಇದು 1,080 x 2,640 ಪಿಕ್ಸೆಲ್‌ಗಳ ರೆಸಲ್ಯೂಶನ್, 1100 ನಿಟ್ಸ್ ಪೀಕ್ ಬ್ರೈಟ್‌ನೆಸ್ ಮತ್ತು ಗೊರಿಲ್ಲಾ ಗ್ಲಾಸ್ ವಿಕ್ಟಸ್ 2 ರಕ್ಷಣೆ ಹೊಂದಿದೆ. ಫೋನಿನಲ್ಲಿ 3.64 ಇಂಚಿನ ಕವರ್ ಡಿಸ್ಪ್ಲೇ ಇರಲಿದೆ. ಇದು 1056 x 1066 ಪಿಕ್ಸೆಲ್‌ಗಳ ರೆಸಲ್ಯೂಶನ್‌ನೊಂದಿಗೆ ಬರುತ್ತದೆ. ಎರಡೂ ಸಹ 120Hz ರಿಫ್ರೆಶ್ ದರ ಹೊಂದಿವೆ.
ಈ ಸ್ಮಾರ್ಟ್‌ಫೋನ್ ಆಕ್ಟಾ ಕೋರ್ ಮೀಡಿಯಾ ಟೆಕ್ ಡೈಮೆನ್ಶನ್ 8020 ಚಿಪ್‌ಸೆಟ್ ಹೊಂದಿರಲಿದೆ. ಇದು ಟ್ರಿಪಲ್ ಕ್ಯಾಮೆರಾ ಸೆಟಪ್ ಹೊಂದಿದೆ. 50 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ, 50 ಮೆಗಾಪಿಕ್ಸೆಲ್ ಅಲ್ಟ್ರಾವೈಡ್ ಕ್ಯಾಮೆರಾ ಮತ್ತು 50 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾವನ್ನು ಹೊಂದಿರಲಿದೆ. ಜೊತೆಗೆ, 4720mAh ಸಾಮರ್ಥ್ಯದ ಬ್ಯಾಟರಿ ಮತ್ತು 70W ಚಾರ್ಜಿಂಗ್ ಫಾಸ್ಟ್ ಚಾರ್ಜಿಂಗ್ ಸೌಲಭ್ಯ ಇರಲಿದೆ. ಇದರೊಂದಿಗೆ, 10W ವೈರ್ಡ್ ರಿವರ್ಸ್ ಚಾರ್ಜಿಂಗ್ ವೈಶಿಷ್ಟ್ಯ ಸಹ ಇರಲಿದೆ.


Click it and Unblock the Notifications








