ಇಂಟೆಲ್ ನಿಂದ 8ನೇ ತಲೆಮಾರಿನ ಪ್ರೋಸೆಸರ್ ಬಿಡುಗಡೆ: ವೇಗಕ್ಕೆ ಸರಿಸಾಟಿಯೇ ಇಲ್ಲ..!

Written By: Lekhaka

ಪ್ರೋಸೆಸರ್ ತಯಾರಿಕೆಯಲ್ಲಿ ಮುಂಚುಣಿಯಲ್ಲಿರುವ ಇಂಟೆಲ್ ಈ ಬಾರಿ 8ನೇ ತಲೆಮಾರಿನ ಇಂಟೆಲ್ ಕೋರ್ ಪ್ರೋಸೆಸರ್ ಗಳನ್ನು ಬಿಡುಗಡೆ ಮಾಡಿದೆ. ಈ ಪ್ರೋಸೆಸರ್ ಗಳನ್ನು ತೆಳುವಾದ ಮತ್ತು ಹಗುರವಾದ 2 ಇನ್ 1 ನೋಟ್ ಬುಕ್ ಗಳಿಗಾಗಿಯೇ ವಿಶೇಷವಾಗಿ ನಿರ್ಮಿಸಲಾಗಿದೆ ಎನ್ನಲಾಗಿದೆ.

ಇಂಟೆಲ್ ನಿಂದ 8ನೇ ತಲೆಮಾರಿನ ಪ್ರೋಸೆಸರ್ ಬಿಡುಗಡೆ: ವೇಗಕ್ಕೆ ಸರಿಸಾಟಿಯೇ ಇಲ್ಲ..!

ಈ ಹೊಸ ಪ್ರೋಸೆಸರ್ ಗಳು ಹಿಂದಿನ ತಲೆಮಾರಿನ ಪ್ರೋಸೆಸರ್ ಗಳಿಗಿಂತ 40% ಅಧಿಕ ವೇಗವನ್ನು ಹೊಂದಿದ್ದು, 5 ವರ್ಷ ಹಿಂದಿನ ಕಂಪ್ಯೂಟರ್ ಗಳಿಗಿಂತ 2 ಪಟ್ಟು ವೇಗವನ್ನು ಹೊಂದಿವೆ ಎಂದು ಕಂಪನಿ ತಿಳಿಸಿದೆ. ಇದರಲ್ಲಿ ಅಡ್ವಾನ್ಸ್ ಪ್ರೋಸೆಸ್ ಟೆಕ್ನಾಲಜಿಯನ್ನು ಒಳಗೊಂಡಿದೆ.

ಈ ನೂತನ ತಲೆ ಮಾರಿನ ಪ್ರೋಸೆಸರ್ ಗಳು ಹೆಚ್ಚಿನ ಬ್ಯಾಟರಿಯನ್ನು ಬೇಡುವುದಿಲ್ಲ ಎನ್ನಲಾಗಿದ್ದು, ಒಂದೇ ಚಾರ್ಜಿನಲ್ಲಿ ನೀವು 10 ಗಂಟೆಗಳ 4K UHD ವಿಡಿಯೋವನ್ನು ನೋಡಬಹುದಾಗಿದೆ. ಅಲ್ಲದೇ ಈ ಹಿಂದಿನ ಪ್ರೋಸೆಸರ್ ಗಳಿಗಿಂತ 48% ವೇಗವಾಗಿ ಫೋಟೊ ಮತ್ತು ವಿಡಿಯೋಗಳನ್ನು ಎಡಿಟ್ ಮಾಡಬಹುದಾಗಿದೆ.

ಈ ಪ್ರೋಸೆಸರ್ ನಲ್ಲಿ ವಿಡಿಯೋಗಳನ್ನು 14.7 % ವೇಗದಲ್ಲಿ ಎಡಿಟ್ ಮಾಡಬಹುದಾಗಿದ್ದು, ಈ ಹಿಂದೆ 5 ವರ್ಷದ ಕೆಳಗೆ 45 ರೆಂಡರ್ ಆಗುತ್ತಿದ್ದ ವಿಡಿಯೋ ಗಳು ಈ ಪ್ರೋಸೆಸರ್ ನಲ್ಲಿ ಮೂರು ನಿಮಿಷದಲ್ಲಿ ರೆಂಡರ್ ಆಗಲಿದೆಯಂತೆ.

ಸದ್ಯ ಮಾರುಕಟ್ಟೆಯಲ್ಲಿ 4K UHD ವಿಡಿಯೋಗಳು ಹೆಚ್ಚಾಗುತ್ತಿದ್ದು, ಈ ಹಿನ್ನಲೆಯಲ್ಲಿ 8ನೇ ತಲೆಮಾರಿನ ಪ್ರೋಸೆಸರ್ ಹೆಚ್ಚಾಗಿ ವಿಡಿಯೋಗಳ ಮೇಲೆ ಗಮನವನ್ನು ಹರಿಸಲಾಗಿದೆ. ಇನ್ನೇನು ಕೆಲವೇ ದಿನಗಳಲ್ಲಿ ಈ ಪ್ರೋಸೆಸರ್ ಮಾರುಕಟ್ಟೆಗೆ ಬರಲಿದೆ ಎನ್ನಲಾಗಿದೆ.

Read more about:
English summary
Intel is rolling out its new 8th Gen Intel Core processors, which are designed specifically for sleek thin and light notebooks and 2-in-1s.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot