ಇಂಟೆಲ್ ಅಲ್ಟ್ರಾ ಕಂಪ್ಯೂಟರ್ ದರ ಕಡಿತ

Posted By: Staff

ಇಂಟೆಲ್ ಅಲ್ಟ್ರಾ ಕಂಪ್ಯೂಟರ್ ದರ ಕಡಿತ
ಜಗತ್ತಿನ ಬೃಹತ್ ಚಿಪ್ ತಯಾರಿಕಾ ಕಂಪನಿ ತನ್ನ ಕಾರ್ಯತಂತ್ರ ಬದಲಾಯಿಸಿದೆ.. ಇದೀಗ ಅಲ್ಟ್ರಾಬುಕ್ ಸರಣಿಯ ಕಂಪ್ಯೂಟರ್ ಗಳನ್ನು ದೇಶದ ಮಾರುಕಟ್ಟೆಗೆ ಪರಿಚಯಿಸಲು ಯೋಜಿಸಿದೆ. ಕಂಪನಿಯ ಈ ಅಲ್ಟ್ರಾಬುಕ್ ದರ ಸುಮಾರು 55 ಸಾವಿರ ರು. ಇರುವುದಾಗಿ ಈ ಹಿಂದೆ ಹೇಳಿತ್ತು. ಆದರೆ ಇದೀಗ ಭಾರತದ ಮಾರುಕಟ್ಟೆಗೆ ಇದನ್ನು ಸುಮಾರು 45 ಸಾವಿರ ರು. ಅಥವಾ ಅದಕ್ಕಿಂತ ಕಡಿಮೆ ದರಕ್ಕೆ ಮಾರಾಟ ಮಾಡಲು ಕಂಪನಿ ನಿರ್ಧರಿಸಿದೆ.

ಇದರಿಂದ ಹೈ ಎಂಡ್ ಟ್ಯಾಬ್ಲೆಟ್ ಮರೆತು ಜನರೆಲ್ಲ ಅಲ್ಟ್ರಾಬುಕ್ ಗಳನ್ನು ಕೊಂಚ ಅಗ್ಗದ ದರದಲ್ಲಿ ಖರೀದಿಸಲು ಸಾಧ್ಯವಾಗಲಿದೆ. ಇಂಟೆಲ್ ಅಲ್ಟ್ರಾಬುಕ್ ಹಗುರ ಮತ್ತು ತೆಳ್ಳಗಿದ್ದು ಟ್ಯಾಬ್ಲೆಟಿಗಿಂತ ವೇಗವಾಗಿ ಅಪ್ಲಿಕೇಷನ್ ಗಳನ್ನು ಆಕ್ಸೆಸ್ ಮಾಡಬಹುದಾಗಿದೆ.

"ಈ ಅಲ್ಟ್ರಾಬುಕ್ ದರ ಸುಮಾರು 50 ಸಾವಿರ ರು. ಆಗಿದೆ. ಆದರೆ ಇದನ್ನು 45-40 ಸಾವಿರ ರು.ಗೆ ನೀಡಲು ನಿರ್ಧರಿಸಿದ್ದೇವೆ" ಎಂದು ಕಂಪನಿಯ ಉಪಾಧ್ಯಕ್ಷರಾದ ಮೊಲಿ ಎಡನ್ ಹೇಳಿದ್ದಾರೆ. "ದರ ಕಡಿಮೆ ಮಾಡುವುದರಿಂದ ಹೆಚ್ಚು ಗ್ರಾಹಕರಿಗೆ ಈ ಅಲ್ಟ್ರಾಬುಕ್ ಖರೀದಿಗೆ ಅನುಕೂಲವಾಗಲಿದೆ" ಎಂದರು.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot