ಧ್ವನಿ ಗ್ರಹಿಸುವ ಕಂಪ್ಯೂಟರ್: ಏನೆಲ್ಲ ಮಾತನಾಡಬೇಡಿ ಪ್ಲೀಸ್

Posted By: Staff
ಧ್ವನಿ ಗ್ರಹಿಸುವ ಕಂಪ್ಯೂಟರ್: ಏನೆಲ್ಲ ಮಾತನಾಡಬೇಡಿ ಪ್ಲೀಸ್
ಭವಿಷ್ಯದಲ್ಲಿ ನೀವು ಕಂಪ್ಯೂಟರ್ ಮುಂದೆ ಕುಳಿತು ಓಪನ್ ಅಂದರೆ ಗಣಕ ಓಪನ್ ಆಗುತ್ತದೆ. ಷಡೌನ್ ಅಂದರೆ ಕಂಪ್ಯೂಟರ್ ಆಫ್ ಆಗುತ್ತದೆ. ಫೇಸ್ ಬುಕ್ ಓಪನ್ ಮಾಡು ಅಂದರೆ ಫೇಸ್ ಬುಕ್ ತೆರೆಯುತ್ತದೆ. ಗಿಝ್ ಬಾಟ್ ತೆರೆ ಅಂದರೆ ಈ ವೆಬ್ ಸೈಟ್ ಓಪನ್ ಆಗುತ್ತದೆ. ಇನ್ನು ಮುಂದೆ ಕಂಪ್ಯೂಟರುಗಳು ನೀವು ನುಡಿದಂತೆ ಮಿಡಿಯುತ್ತವೆ!

ಏನಿದು ವಿಚಿತ್ರ ಅಂತ ಕೇಳದಿರಿ. ನಮ್ಮ ಧ್ವನಿ ಸಂಕೇತಗಳಿಗೆ ತಕ್ಕಂತೆ ಕಾರ್ಯನಿರ್ವಹಿಸುವ ಕಂಪ್ಯೂಟರ್, ಲ್ಯಾಪ್ ಟಾಪ್ ಮತ್ತು ಟ್ಯಾಬ್ಲೆಟ್ ಗಳು ಮಾರುಕಟ್ಟೆಗೆ ಬರುವ ದಿನಗಳು ದೂರವಿಲ್ಲ. ಬರೀ ಧ್ವನಿ ಮಾತ್ರವಲ್ಲದೇ ನಮ್ಮ ಕಣ್ಣ ಸಂಜ್ಞೆಗೂ ಈ  ಕಂಪ್ಯೂಟರುಗಳು ಸ್ಪಂದಿಸುತ್ತವೆ.

ಹೈ ಎಂಡ್ ತಂತ್ರಜ್ಞಾನದ ಕ್ಷೇತ್ರದಲ್ಲಿ ಇಂಟೆಲ್ ಈಗಾಗಲೇ ಜನಪ್ರಿಯ ಕಂಪನಿಯಾಗಿದೆ. ಕಂಪನಿಯು ಇದೀಗ ಕೆಲವು ಹೈಬ್ರಿಡ್ ಕಂಪ್ಯೂಟರ್ ಕಾನ್ಸೆಪ್ಟ್ ಗಳನ್ನು ಪರಿಚಯಿಸಿರುವುದರಿಂದ ಸುದ್ದಿಯಲ್ಲಿದೆ.  ಧ್ವನಿ ಮತ್ತು ಕಣ್ಣಿನ ಸನ್ನೆ ಆಧರಿತವಾಗಿ ಕಾರ್ಯನಿರ್ವಹಿಸುವುದು  ಈ ವಿನೂತನ ಲ್ಯಾಪ್ ಟಾಪ್ ಮತ್ತು ಟ್ಯಾಬ್ಲೆಟ್ ಗಳ ಒಂದು ಸೋಜಿಗ.

ವಿಂಡೋಸ್ 8 ಅಪರೇಟಿಂಗ್ ಸಿಸ್ಟಮ್ ನಿಂದ ಕಾರ್ಯನಿರ್ವಹಿಸುವ ಲ್ಯಾಪ್ ಟಾಪ್ ಮಾದರಿಯನ್ನು ಇಂಟೆಲ್ ಪ್ರದರ್ಶಿಸಿದೆ. ಈ ಲ್ಯಾಪ್ ಟಾಪಿನ ಕೀಬೋರ್ಡ್ ಕೆಳಗೆ ಟಚ್ ಪ್ಯಾಡ್ ಪ್ಯಾನೆಲ್ ಇದ್ದು, ಧ್ವನಿ ನಿರ್ದೇಶನಗಳನ್ನು ಸ್ವೀಕರಿಸುತ್ತದೆ. "ಈ ಉತ್ಪನ್ನದ ದರ ಕಡಿಮೆ ಮಾಡಿ ಹೆಚ್ಚು ಜನರ ಬಳಿ ತಲುಪುವಂತೆ ಮಾಡುವ ಪ್ರಕ್ರಿಯೆಯಲ್ಲಿದ್ದೇವೆ" ಎಂದು ಇಂಟೆಲ್ ಉಪಾಧ್ಯಕ್ಷರು ಹೇಳಿದ್ದಾರೆ.

ಕಂಪ್ಯೂಟರ್ ಚಿಪ್ಪುಗಳ ಶಕ್ತಿ ಕೂಡ ಈ ಅತಿ ಸಣ್ಣ ಲ್ಯಾಪ್ ಟಾಪುಗಳನ್ನು ತಯಾರಿಸಲು ನೆರವಾಗಿದೆ ಎಂದು ಕಂಪನಿಯ ಉಪಾಧ್ಯಕ್ಷರು ಹೇಳಿದ್ದಾರೆ. ಧ್ವನಿ ಆಧರಿತ ಆಲ್ಟ್ರಾಬುಕ್ ತಯಾರಿಸಲು ಇಂಟೆಲ್ ಮತ್ತು ನ್ಯೂಯನ್ಸ್ ಕಮ್ಯುನಿಕೇಷನ್ ಕಂಪನಿಗಳು ಮೈತ್ರಿ ಮಾಡಿಕೊಳ್ಳುವ ಕುರಿತು ಗುಸುಗುಸು ಕೇಳಿಬರುತ್ತಿದೆ.

ನ್ಯೂಯನ್ಸ್ ಕಂಪನಿಯ ಧ್ವನಿ ಗ್ರಹಿಸುವ ತಂತ್ರಜ್ಞಾನವನ್ನು ಇಂಟೆಲ್ ಅಲ್ಟ್ರಾಬುಕ್ ಗಳಿಗೆ ಅಳವಡಿಸಲಾಗಿದೆ. ಈ ಉತ್ಪನ್ನಗಳು ಈ ವರ್ಷವೇ ಮಾರುಕಟ್ಟೆಗೆ ಬರುವ ನಿರೀಕ್ಷೆಯಿದೆ. ಈಗ ಈ ಸಾಧನಗಳು ಇಂಗ್ಲಿಷ್, ಪ್ರೆಂಚ್, ಸ್ಪಾನಿಷ್ ಸೇರಿದಂತೆ ಒಂಬತ್ತು ಭಾಷೆಗಳಿಗೆ ಬೆಂಬಲ ನೀಡುತ್ತದೆ.

ಧ್ವನಿ ಮತ್ತು ಸಂಜ್ಞೆ ಆಧರಿತ ಕಂಪ್ಯೂಟರು ಸಾಧನಗಳು ಮುಂದಿನ ಜಮಾನದ ಕಂಪ್ಯೂಟರುಗಳಾಗಿವೆ. ಮುಂದಿನ ದಿನಗಳಲ್ಲಿ ಕಂಪ್ಯೂಟರ್ ಜೊತೆ ಮಾತನಾಡುತ್ತ ಕೆಲಸ ಮಾಡಬಹುದು.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot