ಫ್ರಿ ಆರ್ಡರ್‌ನಲ್ಲಿ ಇಂಟೆಕ್ಸ್‌ ಐ ಬಡ್ಡೀ 7.2 ಟ್ಯಾಬ್ಲೆಟ್‌

Posted By: Vijeth

ಫ್ರಿ ಆರ್ಡರ್‌ನಲ್ಲಿ ಇಂಟೆಕ್ಸ್‌ ಐ ಬಡ್ಡೀ 7.2 ಟ್ಯಾಬ್ಲೆಟ್‌

ಇಂದು ಮಾರುಕಟ್ಟೆ ಪೂರಾ ಕಡಿಮೆಬೆಲೆಯ ಟ್ಯಾಬ್ಲೆಟ್‌ಗಳಿಂದ ತುಂಬಿ ಹೋಗಿದ್ದರೂ ಸಹ ತಯಾರಕರುಗಳು ಒಂದರ ಹಿಂದೆ ಒಂದರಂತೆ ನೂತನ ಉತ್ಪನ್ನ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸುತ್ತಲೇ ಇದ್ದಾರೆ. ಇತ್ತೀಚೆಗಷ್ಟೇ ಸ್ಥಳೀಯ ತಯಾರಕರಾದ ಮೈಕ್ರೋಮ್ಯಾಕ್ಸ್‌ ಹಾಗೂ ಸೆಲ್ಕಾನ್‌ ಕಡಿಮೆ ಬೆಲೆಯ ಟ್ಯಾಬ್ಲೆಟ್‌ಗಳನ್ನು ಮಾರುಕಟ್ಟೆಗೆ ಬಿಟ್ಟ ಬೆನ್ನಲ್ಲೇ ಇಂಟೆಕ್ಸ್‌ ಕೂಡ ನೂತನ ಐ ಬಡ್ಡೀ 7.2 ಟ್ಯಾಬ್ಲೆಟ್‌ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

ಅಧಿಕೃತ ಮಾಹಿತಿಗಳ ಪ್ರಕಾರ ಇಂಟಿಕ್ಸ್‌ನ ನೂತನ ಟ್ಯಾಬ್ಲೆಟ್‌ ಸ್ನಾಪ್‌ಡೀಲ್‌. ಕಾಮ್‌ ನಲ್ಲಿ ರೂ.5,499 ದರದಲ್ಲಿ ಲಭ್ಯವಿದೆ. ಸ್ನಾಪ್‌ ಡೀಲ್‌ನಲ್ಲಿ ತೋರಿಸಿರುವಂತೆ ಇಂಟೆಕ್ಸ್‌ ಐ ಬಡ್ಡೀ 7.2 ನಲ್ಲಿ ಈ ಕೆಳಕಂಡ ಪೀಚರ್ಸ್‌ ಹೊಂದಿದೆ.

ದರ್ಶಕ: 7 ಇಂಚಿನ ದರ್ಶಕ ದೊಂದಿಗೆ 5 ಪಾಯಿಂಟ್‌ ಮಲ್ಟಿ ಟಚ್‌ ಹಾಗೂ 800 x 480 ಪಿಕ್ಸೆಲ್‌ ರೆಸೆಲ್ಯೂಷನ್‌ ಹೊಂದಿದೆ.

ಪ್ರೊಸೆಸರ್‌: ಇಂಟೆಕ್ಸ್‌ ಐ ಬಡ್ಡೀ 7.2 ನಲ್ಲಿ 1GHz ಕಾರ್ಟೆಕ್ಸ್‌ A8 ಕೋರ್‌ A13 ಪ್ರೊಸೆಸರ್‌ ಹೊಂದಿದೆ.

ಆಪರೇಟಿಂಗ್‌ ಸಿಸ್ಟಂ: ಬಜೆಟ್‌ ಟ್ಯಾಬ್ಲೆಟ್‌ ಆದ್ದರಿಂದ ಆಂಡ್ರಾಯ್ಡ್‌ 4.0 ಐಸ್‌ಕ್ರೀಮ್‌ ಸ್ಯಾಂಡ್ವಿಚ್‌ OS ಹೊಂದಿದೆ.

ಕ್ಯಾಮೆರಾ: ವಿಡಿಯೋ ಕರೆಗಾಗಿ ಮುಂಬದಿಯ 0.3MP ಕ್ಯಾಮೆರಾ ಹೊಂದಿದ್ದು ಹಿಂಬದಿಯ ಕ್ಯಾಮೆರಾ ಹಾಗು ಪಿಕ್ಸೆಲ್‌ ರೆಸೆಲ್ಯೂಷನ್‌ ಹೊಂದಿಲ್ಲ.

ಮೆಮೊರಿ: ಇಂಟೆಕ್ಸ್‌ ಐ ಬಡ್ಡೀ 7.2 ನಲ್ಲಿ 4GB ಆಮತರಿ ಸ್ಟೋರೇಜ್‌, 512MB RAM ಹಾಗೂ ಮೈಕ್ರೋ ಎಸ್‌ಡಿ ಕಾರ್ಡ್‌ ಮೂಲಕ 32GB ಬರೆಗೂ ಮೆಮೊರಿ ವಿಸ್ತರಿಸ ಬಹುದಾಗಿದೆ.

ಕನೆಕ್ಟಿವಿಟಿ: ಡಾಂಗಲಗಗ ಮೂಲಕ 3G , Wi-Fi ಹಾಗೂ ಮೈಕ್ರೋ USB 2.0 ಫೋರ್ಟ್‌ ಹೊಂದಿದೆ.

ಬ್ಯಾಟರಿ: ಇಂಟೆಕ್ಸ್‌ ಐ ಬಡ್ಡೀ 7.2 ನಲ್ಲಿ 2,800 mAh Li-Po ಬ್ಯಾಟರಿ ಇದೆ.

Read In English...

ಸೆಲ್ಕಾನ್‌ನ ಸೆಲ್‌ಟ್ಯಾಬ್‌ (CT2) ಮಾರುಕಟ್ಟೆಗೆ ಬಂದಿದೆ

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot