Subscribe to Gizbot

ಇಂಟೆಕ್ಸ್‌ ಐ ಬಡ್ಡೀ 7.2 VS ಮೈಕ್ರೋಸಾಫ್ಟ್‌ ಫನ್‌ಬುಕ್‌ ಆಲ್ಫ

Posted By: Vijeth

ಇಂಟೆಕ್ಸ್‌ ಐ ಬಡ್ಡೀ 7.2 VS ಮೈಕ್ರೋಸಾಫ್ಟ್‌ ಫನ್‌ಬುಕ್‌ ಆಲ್ಫ
ಉತ್ಪನ್ನಗಳ ಬೆಲೆ ಕುರಿತಾಗಿ ಮೊದಲು ತಲೆ ಕೆಡಿಸಿಕೊಳ್ಳುವ ಭಾರತೀಯ ಗ್ರಾಹಕರುಗಳಿಗಾಗಿಯೇ ಇಂದು ಹಲವಾರು ಬಜೆಟ್‌ ಸ್ನೇಹಿ ಉಪಕರಣಗಳು ಆಕರ್ಷಕ ಫೀಚರ್ಸಗಳೊಂದಿಗೆ ಮಾರುಕಟ್ಟೆಯಲ್ಲಿ ಲಭ್ಯವಿದೆ. ಅದರಲ್ಲಿಯೂ ಜಾಗತಿಕ ತಯಾರಕರುಗಳು ಹಾಗೂ ಸ್ಥಳೀಯ ತಯಾರಕರುಗಳು ಗ್ರಾಹಕರಿಗೆ ಒಂದರ ನಂತರ ಒಂದರಂತೆ ಕೈಗೆಟಕುವ ದರದಲ್ಲಿ ಆಂಡ್ರಾಯ್ಡ್‌ ಸಾಧನಗಳನ್ನು ಪರಿಚಯಿಸುತ್ತಲೇ ಇದ್ದಾರೆ.

ಅಂದಹಾಗೆ ಈ ಸಾಲಿಗೆ ಇತ್ತೀಚೆಗಷ್ಟೇ ಸ್ಥಳೀಯ ತಯಾರಕರುಗಳಾದ ಇಂಟೆಕ್ಸ್‌ ಹಾಗೂ ಮೈಕ್ರೋಮ್ಯಾಕ್ಸ್‌ ಸಂಸ್ಥೆಗಳು ಆಂಡ್ರಾಯ್ಡ್‌ IOS ಚಾಲಿತ ನೂತನ ಟ್ಯಾಬ್ಲೆಟ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿವೆ. ನೀವು ಕೂಡ ಈ ಕಡಿಮೇ ದರದ ಆಂಡ್ರಾಯ್ಡ್‌ ಚಾಲಿತ ಟ್ಯಾಬ್ಲೆಟ್‌ಗಳನ್ನು ಖರೀದಿಸಬೇಕೆಂದಿದ್ದಲ್ಲಿ ಅದಕ್ಕೂ ಮುನ್ನ ಇವೆರಡರ ನಡುವಿನ ಹೋಲಿಕೆಯನ್ನು ಒಮ್ಮೆ ಓದಿ ನೋಡಿ.

ದರ್ಶಕ ಹಾಗೂ ಸುತ್ತಳತೆ: ಮೈಕ್ರೋಮ್ಯಾಕ್ಸ್‌ ಫನ್‌ಬುಕ್‌ ಆಲ್ಫಾದ ಸುತ್ತಳತೆ ಕುರಿತಾಗಿ ಮಾಹಿತಿ ಲಭ್ಯವಿಲ್ಲ, ಅಂದಹಾಗೆ ಇಂಟೆಕ್ಸ್‌ ಐ ಬಡ್ಡೀ 7.2 ಟ್ಯಾಬ್ಲೆಟ್‌ 194 x 120 x 13 mm ಸುತ್ತಳತೆ ಹೋಂದಿದೆ. ದರ್ಶಕದ ವಿಚಾರದಲ್ಲಿ ಎರಡೂ ಟ್ಯಾಬ್ಲೆಟ್‌ನಲ್ಲಿ 7 ಇಂಚಿನ ಟಚ್‌ಸ್ಕ್ರೀನ್‌ ನೊಂದಿಗೆ 800 x 480 ಪಿಕ್ಸೆಲ್‌ ರೆಸೆಲ್ಯೂಷನ್‌ ಹೊಂದಿವೆ.

ಪ್ರೊಸೆಸರ್‌: ಎರೆಡೂ ಟ್ಯಾಬ್ಲೆಟ್‌ಗಳಲ್ಲಿ ಸಿಂಗಲ್‌ ಕೋರ್‌ 1 GHz ಪ್ರೊಸೆಸರ್‌ ನೊಂದಿಗೆ ಮೇಲ್‌ 400 GPU ಹೊಂದಿವೆ.

ಆಪರೇಟಿಂಗ್‌ ಸಿಸ್ಟಂ: ಬಜೆಟ್‌ ಟ್ಯಾಬ್ಲೆಟ್‌ ಗಳಾದ್ದರಿಂದ ಐ ಬಡ್ಡೀ 7.2 ಹಾಗೂ ಫನ್‌ಬುಕ್‌ ಆಲ್ಫಾ ಟ್ಯಾಬ್ಲೆಟ್‌ ಆಂಡ್ರಾಯ್ಡ್‌ 4.0 ಐಸ್‌ಕ್ರೀಮ್‌ ಸ್ಯಾಂಡ್ವಿಚ್‌ OS ಚಾಲಿತವಾಗಿದೆ.

ಕ್ಯಾಮೆರಾ: ಕ್ಯಾಮೆರಾ ವಿಚಾರದಲ್ಲಿ ಎರಡೂ ಟ್ಯಾಬ್ಲೆಟ್‌ಗಳಲ್ಲಿ ವಿಡಿಯೋ ಕರೆಗಾಗಿ ಮುಂಬದಿಯ 0.3MP ಕ್ಯಾಮೆರಾ ಇದ್ದು ಹಿಂಬದಿಯ ಕ್ಯಾಮೆರಾಗಳಿಲ್ಲಾ.

ಮೆಮೊರಿ: ಈ ವಿಭಾಗದಲ್ಲಿಯೂ ಕೂಡ ಎರಡೂ ಫಾಬ್ಲೆಟ್‌ಗಳಲ್ಲಿ 512MB RAM ಹಾಗು ಮೈಕ್ರೋ ಎಸ್‌ಡಿ ಕಾರ್ಡ್‌ ಸ್ಲಾಟ್‌ ಮೂಲಕ 32GB ವರೆಗೂ ಮೆಮೊರಿ ವಿಸ್ತರಣೆ ಮಾಡಿಕೊಳ್ಳ ಬಹುದಾಗಿದೆ. ಅಂದಹಾಗೆ ಇಂಟೆಕ್ಸ್‌ ನಲ್ಲಿ 8GB ಆಂತರಿಕ ಸ್ಟೋರೇಜ್‌ ಸೌಲಭ್ಯವಿದ್ದರೆ, ಫನ್‌ ಬುಕ್‌ ಆಲ್ಫಾದಲ್ಲಿ 4GB ಸ್ಟೋರೇಜ್‌ ಹೊಂದಿದೆ.

ಕನೆಕ್ಟಿವಿಟಿ: ಇಂಟೆಕ್ಸ್‌ನಲ್ಲಿ ಡಾಂಗಲ್‌ ಮೂಲಕ 3G, Wi-Fi ಹಾಗೂ ಮೈಕ್ರೊ USB 2.0 ಫೋರ್ಟ್‌ ಫೀಚರ್ಸ್‌ ನಿಂದ ಕೂಡಿದೆ. ಹಾಗೂ ಫನ್‌ಬುಕ್‌ ಆಲ್ಫಾ Wi-Fi, ಡಾಂಗಲ್‌ ಮೂಲಕ 3G, ಬ್ಲೂಟೂತ್‌ ಹಾಗೂ USB 2.0 ಪೋರ್ಟ್‌ ಹೊಂದಿದೆ.

ಬ್ಯಾಟರಿ: ಎರಡೂ ಟ್ಯಾಬ್ಲೆಟ್ಸ್‌ಗಳಲ್ಲಿ 2,800 mAh ಬ್ಯಾಟರಿ ಹೊಂದೊವೆ.

ಬೆಲೆ: ಖರೀದಿಸುವುದಾದರೆ ಇಂಟೆಕ್ಸ್‌ ಐ ಬಡ್ಡೀ 7.2 ರೂ.5,499 ದರದಲ್ಲಿ ಲಭ್ಯವಿದ್ದರೆ, ಮೈಕ್ರೋಮ್ಯಾಕ್ಸ್‌ ಫನ್‌ಬುಕ್‌ ಆಲ್ಫಾ 5,999 ರೂ. ದರದಲ್ಲಿ ಲಭ್ಯವಿದೆ.

Read In English...

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot