Subscribe to Gizbot

ಇಂಟೆಕ್ಸ್ I Buddy ಕಡಿಮೆ ತೂಕದ ಟ್ಯಾಬ್ಲೆಟ್

Posted By: Varun
ಇಂಟೆಕ್ಸ್ I Buddy ಕಡಿಮೆ ತೂಕದ ಟ್ಯಾಬ್ಲೆಟ್

ಟ್ಯಾಬ್ಲೆಟ್ ಮಾರುಕಟ್ಟೆಯಲ್ಲಿ ಸಿಕ್ಕಾಪಟ್ಟೆ ಕಂಪನಿಗಳು ಬಂದಿದ್ದು, ಒಳ್ಳೆ ತರಕಾರಿ ಮಾರುಕಟ್ಟೆಯ ಹಾಗೆ ಆಗಿದೆ. ದೈತ್ಯ ಕಂಪನಿಗಳ ಜೊತೆ ಅಗ್ಗದ ಬೆಲೆ ಇಟ್ಟುಕೊಂಡು ಸಣ್ಣ ಪುಟ್ಟ ಕಂಪನಿಗಳೂ ಬರುತ್ತಿರುವುದು ಒಂದು ಕಡೆಯಾದರೆ, ಕಂಪ್ಯೂಟರ್ ಬಿಡಿ ಭಾಗಗಳನ್ನು ಉತ್ಪಾದನೆ ಮಾಡಿಕೊಂಡಿರುತ್ತಿದ್ದ ಕಂಪನಿಗಳೂ ಈಗ ಟ್ಯಾಬ್ಲೆಟ್ ಅನ್ನು ಉತ್ಪಾದನೆ ಮಾಡುತ್ತಿವೆ.

ಅಂಥಾ ಕಂಪನಿಗಳಲ್ಲಿ ಒಂದಾದ ಇಂಟೆಕ್ಸ್ ಈಗ ತನ್ನ ಎರಡನೆ ಆಂಡ್ರಾಯ್ಡ್ 4.0 ಟ್ಯಾಬ್ಲೆಟ್- I Buddy ಅನ್ನು ಬಿಡುಗಡೆ ಮಾಡಿದ್ದು, 316 ಗ್ರಾಂ ತೂಕವಿದೆ. infibeam ಆನ್ಲೈನ್ ಮಳಿಗೆಯಲ್ಲಿ 6,490 ರೂಪಾಯಿಗೆ ಡಿಸ್ಕೌಂಟ್ ಬೆಲೆಯಲ್ಲಿ ದೊರೆಯಲಿದ್ದು, ಇದರ ಜೊತೆಗೆ 2,590 ರೂಪಾಯಿ ಮೌಲ್ಯದ ಕೀಬೋರ್ಡ್ ಕೂಡ ಉಚಿತವಾಗಿ ಬರಲಿದೆ.

ಇದರ ಪ್ರಮುಖ ಫೀಚರುಗಳು ಈ ರೀತಿ ಇವೆ:

 • 7 ಇಂಚಿನ ಕೆಪಾಸಿಟಿವ್ ಟಚ್ ಸ್ಕ್ರೀನ್

 • 800 X 400 ಪಿಕ್ಸೆಲ್ ರೆಸಲ್ಯೂಶನ್

 • 1GHz ಸಿಂಗಲ್ ಕೋರ್ ಪ್ರೊಸೆಸರ್

 • 512 MB ​​DDR3 ರಾಮ್

 • ಮಾಲಿ 400 ಗ್ರಾಫಿಕ್ಸ್ ಕಾರ್ಡ್

 • 0.3 ಮೆಗಾ ಪಿಕ್ಸೆಲ್ ಮುಂಬದಿಯ ಕ್ಯಾಮರಾ

 • 4GB ಆಂತರಿಕ ಮೆಮೊರಿ

 • ಮೈಕ್ರೋ SD ಕಾರ್ಡ್ ಸ್ಲಾಟ್ ಮೂಲಕ 32 GB ವರೆಗೂ ವಿಸ್ತರಿಸಬಹುದಾದ ಮೆಮೊರಿ

 • 9mm ದಪ್ಪ, 316 ಗ್ರಾಂ ತೂಕ

 • 2350 mAh ಬ್ಯಾಟರಿ

 • 12 ತಿಂಗಳ ವಾರಂಟಿ

 • ಪ್ರೀ- ಲೋಡೆಡ್ ಆದ ಆಪ್ಸ್ ಹಾಗು ಖ್ಯಾತ ಗೇಮ್ಸ್ ಆದ ಆಂಗ್ರಿ ಬರ್ಡ್ಸ್, ಫ್ರೂಟ್ ನಿಂಜಾ ಕೂಡಾ ಇರಲಿದೆ.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot