Subscribe to Gizbot

ಕಡಿಮೆ ತೂಕದ ಆಪಲ್‌ ಐಪ್ಯಾಡ್‌ ಏರ್‌ ಟ್ಯಾಬ್ಲೆಟ್‌ ಭಾರತದಲ್ಲಿ ಬಿಡುಗಡೆ

Posted By:

ಆಪಲ್‌ ಐಪ್ಯಾಡ್‌ 4 ಭಾರ ಹೆಚ್ಚಾಯಿತು ಈ ಐಪ್ಯಾಡ್‌ ಬೇಡ ಎಂದು ಹೇಳುವವರಿಗೆ ಆಪಲ್‌ ಕಡಿಮೆ ಭಾರವನ್ನು ಹೊಂದಿರುವ ಹೊಸ ಐಪ್ಯಾಡ್‌ ಏರ್‌ ಟ್ಯಾಬ್ಲೆಟ್‌ ಭಾರತದ ಮಾರುಕಟ್ಟೆಗೆ ಬಿಡುಗಡೆಯಾಗಿದೆ.ಹೊಸದಾಗಿ ಬಿಡುಗಡೆಯಾಗಿರುವ ಐಪ್ಯಾಡ್‌ ಏರ್‌ ಟ್ಯಾಬ್ಲೆಟ್‌ನ ಹಲವು ವಿಶೇಷತೆಗಳು ಐಪ್ಯಾಡ್‌ 4ರಂತೆ ಇದ್ದರೂ ಕೆಲವೊಂದು ಹೊಸ ವಿಶೇಷತೆಗಳನ್ನು ಆಪಲ್‌ ಈ ಟ್ಯಾಬ್ಲೆಟ್‌ಗೆ ಸೇರಿಸಿದೆ.

ವೈಫೈ,ವೈಫೈ ಸೆಲ್ಯುಲರ್‌ ಎರಡು ವಿಧ ಮತ್ತು ನಾಲ್ಕು ಆಂತರಿಕ ಮೆಮೊರಿಯಲ್ಲಿ ಈ ಟ್ಯಾಬ್ಲೆಟ್‌ ಬಿಡುಗಡೆಯಾಗಿದೆ.ಐಪ್ಯಾಡ್‌ ಏರ್‌ ವೈಫೈ 16GB ಆಂತರಿಕ ಮೆಮೊರಿ ಹೊಂದಿರುವ ಟ್ಯಾಬ್ಲೆಟ್‌ಗೆ 35,900 ರೂಪಾಯಿ,32GB ಟ್ಯಾಬ್ಲೆಟ್‌ಗೆ 42,900 ರೂಪಾಯಿ, 64GB ಟ್ಯಾಬ್ಲೆಟ್‌ಗೆ 49,900 ರೂಪಾಯಿ,128GB ಟ್ಯಾಬ್ಲೆಟ್‌ಗೆ 59,900 ರೂಪಾಯಿಯನ್ನು ಆಪಲ್‌ ನಿಗದಿ ಮಾಡಿದೆ.

ಐಪ್ಯಾಡ್‌ ಏರ್‌ ವೈಫೈ ಸೆಲ್ಯುಲರ್‌ 16GB ಆಂತರಿಕ ಮೆಮೊರಿ ಹೊಂದಿರುವ ಟ್ಯಾಬ್ಲೆಟ್‌ಗೆ 44,900 ರೂಪಾಯಿ,32GB ಟ್ಯಾಬ್ಲೆಟ್‌ಗೆ 51,990 ರೂಪಾಯಿ,64GB ಟ್ಯಾಬ್ಲೆಟ್‌ಗೆ 58,990ರೂಪಾಯಿ,128GB ಟ್ಯಾಬ್ಲೆಟ್‌ಗೆ 65,999 ರೂಪಾಯಿಯನ್ನು ಆಪಲ್‌ ನಿಗದಿ ಮಾಡಿದೆ.

ಮುಂದಿನ ಪುಟದಲ್ಲಿ ಈ ಹಿಂದೆ ಆಪಲ್‌ ಬಿಡುಗಡೆ ಮಾಡಿದ್ದ  ಐಪ್ಯಾಡ್‌ 4 ಟ್ಯಾಬ್ಲೆಟ್‌ ಮತ್ತು ಹೊಸ ಐಪ್ಯಾಡ್‌ ಏರ್‌ನ ವಿಶೇಷತೆಗಳನ್ನು ಹೋಲಿಕೆ ಮಾಡಿ ನೀಡಲಾಗಿದೆ.ಒಂದೊಂದೆ ಪುಟವನ್ನು ತಿರುಗಿಸಿ ಓದಿಕೊಂಡು ಹೋಗಿ.

ಐಪ್ಯಾಡ್‌ ಏರ್‌ನ ಆಕರ್ಷಕ ಚಿತ್ರಗಳಿಗಾಗಿ ಇಲ್ಲಿ ಕ್ಲಿಕ್‌ ಮಾಡಿ: ಗ್ಯಾಲರಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
 ಪ್ರೊಸೆಸರ್‌:

ಐಪ್ಯಾಡ್‌ ಏರ್‌ ವರ್ಸಸ್‌ ಐಪ್ಯಾಡ್‌ 4


ಎ7 ಚಿಪ್‌ 64 ಬಿಟ್‌ ಆರ್ಕಿ‌ಟೆಕ್ಚರ್‌ ಡ್ಯುಯಲ್‌ ಕೋರ್‌ 1300 MHz ಪ್ರೊಸೆಸರ್‌ನ್ನು ಈ ಹೊಸ ಐಪ್ಯಾಡ್‌ ಏರ್‌ ಹೊಂದಿದೆ.

ಈ ಹಿಂದೆ ಬಿಡುಗಡೆಯಾದ ಐಪ್ಯಾಡ್‌ 4 ಪ್ರೊಸೆಸರ್‌ ಎ6 ಪ್ರೊಸೆಸರ್‌ ಮತ್ತು ಡ್ಯುಯಲ್‌ ಕೋರ್‌ 1400 MHz ಪ್ರೊಸೆಸರ್‌ ಹೊಂದಿತ್ತು.

 ಗಾತ್ರ:

ಐಪ್ಯಾಡ್‌ ಏರ್‌ ವರ್ಸಸ್‌ ಐಪ್ಯಾಡ್‌ 4


ಹೊಸ ಐಪ್ಯಾಡ್‌ ಏರ್‌ (ವೈಫೈ) 9.45 ಇಂಚು ಉದ್ದ,6.6 ಇಂಚು ಅಗಲ,0.29 ಇಂಚು ದಪ್ಪ,469 ಗ್ರಾಂ ತೂಕವಿದೆ. ಏರ್‌ ವೈಫೈ ಸೆಲ್ಯುಲರ್‌ 478 ಗ್ರಾಂ ತೂಕವಿದೆ.

ಐಪ್ಯಾಡ್‌ 4 (ವೈಫೈ) 9.50 ಇಂಚು ಉದ್ದ,7.31 ಇಂಚು ಅಗಲ, 0.37 ಇಂಚು ದಪ್ಪ, 652 ಗ್ರಾಂ ತೂಕವಿದ್ದರೆ, ಐಪ್ಯಾಡ್‌ 4 ವೈಫೈ ಸೆಲ್ಯುಲರ್‌ 662 ಗ್ರಾಂ ತೂಕವಿತ್ತು.

 ಸ್ಕ್ರೀನ್‌:

ಐಪ್ಯಾಡ್‌ ಏರ್‌ ವರ್ಸಸ್‌ ಐಪ್ಯಾಡ್‌ 4


ಹೊಸ ಐಪ್ಯಾಡ್‌ ಏರ್‌,ಐಪ್ಯಾಡ್‌ 4ರಲ್ಲಿ ಇದ್ದಂತೆ ರೆಟಿನಾ ಡಿಸ್ಪ್ಲೇ ಹೊಂದಿರುವ 9.7 ಇಂಚಿನ ಇಂಚಿನ 2048x1536 ಪಿಕ್ಸೆಲ್‌ ರೆಸೂಲೂಶನ್‌, 264 ಪಿಪಿಐ(pixels per inch) ಹೊಂದಿದೆ.

ಕ್ಯಾಮೆರಾ

ಐಪ್ಯಾಡ್‌ ಏರ್‌ ವರ್ಸಸ್‌ ಐಪ್ಯಾಡ್‌ 4


ಐಪ್ಯಾಡ್‌ 4ರಲ್ಲಿ ಇದ್ದಂತೆ ಹಿಂದುಗಡೆ 5 ಎಂಪಿ f2.4 ಅಪರ್ಚರ್‌ ಕ್ಯಾಮೆರಾ, ಮುಂದುಗಡೆ 1.2 ಎಂಪಿ ಕ್ಯಾಮೆರಾವನ್ನು ಹೊಸ ಐಪ್ಯಾಡ್‌ ಏರ್‌ ಹೊಂದಿದೆ.

 ಆಪರೇಟಿಂಗ್ ಸಿಸ್ಟಂ:

ಐಪ್ಯಾಡ್‌ ಏರ್‌ ವರ್ಸಸ್‌ ಐಪ್ಯಾಡ್‌ 4


ಹೊಸ ಐಪ್ಯಾಡ್‌ ಏರ್‌ ಐಓಎಸ್‌ 7 ಒಳಗೊಂಡಿದ್ದರೆ, ಈ ಹಿಂದೆ ಬಿಡುಗಡೆಯಾಗಿದ್ದ ಐಪ್ಯಾಡ್‌ 4 ಐಓಎಸ್‌ 6 ಹೊಂದಿತ್ತು. ಅದನ್ನುಈಗ ಐಓಎಸ್‌ 7ಗೆ ಅಪ್‌ಡೇಟ್‌ ಮಾಡಬಹುದಾಗಿದೆ.

 ಬ್ಯಾಟರಿ

ಐಪ್ಯಾಡ್‌ ಏರ್‌ ವರ್ಸಸ್‌ ಐಪ್ಯಾಡ್‌ 4


ಈ ವಿಚಾರದಲ್ಲಿ ಹೊಸ ಐಪ್ಯಾಡ್‌ ಕಡಿಮೆ ಭಾರವನ್ನು ಹೊಂದಿರುವುದರಿಂದ ಐಪ್ಯಾಡ್‌ 4 ಹೋಲಿಕೆ ಮಾಡಿದ್ದಲ್ಲಿ ಐಪ್ಯಾಡ್‌ ಏರ್‌ ಬ್ಯಾಟರಿ 32.4 ವ್ಯಾಟ್‌ ಹೊಂದಿದೆ. ಐಪ್ಯಾಡ್‌ 4 ಬ್ಯಾಟರಿ 42.5 ವ್ಯಾಟ್‌ ಹೊಂದಿತ್ತು.

ಐಪ್ಯಾಡ್‌ ಏರ್‌ ಟ್ಯಾಬ್ಲೆಟ್‌ ಭಾರತದ ಮಾರುಕಟ್ಟೆಗೆ ಬಿಡುಗಡೆ

ಐಪ್ಯಾಡ್‌ ಏರ್‌ ಟ್ಯಾಬ್ಲೆಟ್‌ ಭಾರತದ ಮಾರುಕಟ್ಟೆಗೆ ಬಿಡುಗಡೆ


ಐಪ್ಯಾಡ್‌ ಏರ್‌ ಹೋಮ್‌ ಬಟನ್‌ ಮತ್ತು ವಾಲ್ಯೂಮ್ ಬಟನ್‌

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot