ಐಪ್ಯಾಡ್‌ ಮಿನಿ ಬಗ್ಗೆ ತಿಳಿದುಕೊಳ್ಳ ಬೇಕಾದ ಅಂಶಗಳು

Posted By: Vijeth

ಐಪ್ಯಾಡ್‌ ಮಿನಿ ಬಗ್ಗೆ ತಿಳಿದುಕೊಳ್ಳ ಬೇಕಾದ ಅಂಶಗಳು

ಐಪಾಡ್‌ ಮಿನಿ ಕುರಿತಾದ ಮಾಹಿತಿಯನ್ನು ಆಪಲ್‌ಸಂಸ್ಥೆಯು ಅಧಿಕೃತವಾಗಿ ಬಹಿರಂಗ ಗೊಳಿಸದೆ ಗೌಪ್ಯವಾಗಿರಿಸಿದೆ. ಅಂದಹಾಗೆ ವಿಮರ್ಶಕರುಗಳ ಪ್ರಕಾರ ಐಪ್ಯಾಡ್‌ ಕುರಿತಾದ ಈವರೆಗಿನ ಎಲ್ಲಾ ವದಂತಿಗಳು ಹಾಗೂ ಮಾಹಿತಿಗಳು ಚಿನಾದಿಂದ ಬಂದದ್ದಾಗಿದೆ ಎಂದು ತಿಳಿಸಿದ್ದಾರೆ. ಅಂದಹಾಗೆ ಈ ಎಲ್ಲಾ ಗಾಳಿ ಸುದ್ಧಿಗಳ ನಡುವೆ ಆಪಲ್‌ ಸಂಸ್ಥೆಯು ಅಕ್ಟೋಬರ್‌ 17 ರಂದು ಐಪ್ಯಾಡ್‌ ಮಿನಿ ಬಿಡುಗಡೆ ಮಾಡುವುದಾಗಿ ತಿಳಿಸಿದೆ ಎಂದು ವರದಿಗಳು ತಿಳಿಸಿವೆ ಹಾಗಿದ್ದಲ್ಲಿ ಬನ್ನಿ ಐಪ್ಯಾಡ್‌ ಮಿನಿ ಕುರಿತಾದ ಕೆಲ ಮಾಹಿತಿಗಳನ್ನು ಹಾಗು ವದಂತಿಗಳ ಕುರಿತಾಗಿ ತಿಳಿದುಕೊಳ್ಳೋಣ.

ಐಪ್ಯಾಡ್‌ ಮಿನಿಯಲ್ಲಿ 3G ಇಲ್ಲ ಕೇವಲ Wi-Fi ಮಾತ್ರ

ಇತ್ತೀಚಿನ ವರದಿಯ ಪ್ರಕಾರ ದಿ ಗಾರ್ಡಿಯನ್‌ ತಿಳಿಸಿರುವಂತೆ 7.85 ಇಂಚಿನ ಐಪ್ಯಾಡ್‌ ಮಿನಿಯಲ್ಲಿ 3G ಹಾಗೂ 4G ನೆಟ್ವರ್ಕ್‌ಗಳು ಕೆಲಸ ಮಾಡುವುದಿಲ್ಲಾ ಕೇವಲ Wi-Fi ಕನೆಕ್ಟಿವಿಟಿ ಮಾತ್ರವಿದೆ ಎಂದು ತಿಳಿಸಿದೆ.

ಲೈಟ್ನಿಂಗ್‌ ಕನೆಕ್ಟರ್‌

ಆಸ್ಟ್ರೇಲಿಯಾ ಮೂಲದ ತಂತ್ರಜ್ಞಾನ ಬರಹಗಾರ ಸೋನಿ ಡಿಕ್ಸನ್‌ ಟ್ವಟ್ಟರ್‌ನಲ್ಲಿ ಫೋಸ್ಟ್‌ ಮಾಡಿದ ಫೋಟೊಗಳ ಪ್ರಕಾರ ನೂತನ ಐಪ್ಯಾಡ್‌ ಮಿನಿ ಈ ಹಿಂದಿನ ಐಪ್ಯಾಡ್‌ನ ಗಾತ್ರದ ಅರ್ಧಭಾಗದಷ್ಟಿದ್ದು ಲೈಟ್ನಿಂಗ್‌ ಕನೆಕ್ಟರ್‌ ಹೊಂದಿರುವುದು ತಿಳಿಯುತ್ತದೆ. ಡಿಕ್ಸನ್‌ ಇನ್ಸ್ಟಾಗ್ರಾಂ ಮೂಲಕ ಪೋಸ್ಟ್‌ ಮಾಡಿರುವ ಚಿತ್ರಗಳಲ್ಲಿ ಲೈಟ್ನಿಂಗ್‌ ಕನೆಕ್ಟರ್‌ ಇರುವುದು ಕಂಡುಬಂದಿದೆ.

ಐಪ್ಯಾಡ್‌ ಮಿನಿಗಾಗಿ 10 ದಶಲಕ್ಷ ಯೂನಿಟ್ಸ್‌ ಆರ್ಡರ್‌ ಬಂದಿದೆಯಂತೆ

ಇತ್ತೀಚೆಗೆ ವಾಲ್‌ಸ್ಟ್ರೀಟ್‌ ಜರ್ನಲ್‌ ನಲ್ಲಿ ಪ್ರಕಟಗೊಂಡ ವರದಿಗಳಪ್ರಕಾರ ಆಪಲ್‌ ಸಂಸ್ಥೆಯು ತನ್ನಯ ಬಿಡಿಬಾಗಗಳ ತಯಾರಿಕಾ ಸಂಸ್ಥೆಗಳಿಂದ ವರ್ಷಾಂತ್ಯದಲ್ಲಿ 10 ದಶಲಕ್ಷ್‌ ಯೂನಿಟ್‌ನ ಐಪ್ಯಾಡ್‌ ಮಿನಿಗೆ ಟ್ಯಾಬ್ಲೆಟ್‌ಗಳಿಗೆ ಆರ್ಡರ್‌ ನೀಡಿದೆ ಎಂದು ತಿಳಿಸಿದೆ.

ಕೊನೆಯ ಗಳಿಗೆಯಲ್ಲಿ ವಿನ್ಯಾಸದ ಬದಲಾವಣೆ

ಜಪಾನ್‌ ಮೂಲದ ಮಕೋಟರ ಬ್ಲಾಗ್‌ನ ಪ್ರಕಾರ ಐಪ್ಯಾಡ್‌ ಮಿನಿಯ ತಯಾರಿಕೆಯನ್ನು ತಡೆಯಲಾಗಿದೆ ಏಕೆಂದರೆ ಐಪ್ಯಾಡ್‌ನ ವಿನ್ಯಾಸದಲ್ಲಿ ಕೊಂಚ ಬದಲಾವಣೆ ತರುವ ಸಲುವಾಗಿ ತಯಾರಿಕೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ತಿಳಿಸಿದೆ. ಹಾಗು ಅಕ್ಟೋಬರ್‌ 17ರ ಒಳಗಾಗಿ ಐಪ್ಯಾಡ್‌ ಮಿನಿಯ ನೂತನ ಮಾದರಿ ಬರಲಿದೆ ಎಂದು ರಿಳಿಸಿದೆ.

ವದಂತಿಗಳ ಪ್ರಕಾರ ಐಪ್ಯಾಡ್‌ ಮಿನಿಯಲ್ಲಿನ ವಿಶೇಷತೆ

ವದಂತಿಗಳಲ್ಲಿ ತಿಳಿಸಿರುವಂತೆ ಐಪ್ಯಾಡ್‌ ಮಿನಿಯಲ್ಲಿ 7.85-ಇಂಚಿನ ಸ್ಕ್ರೀನ್‌ ಹೊಂದಿದ್ದು ಮಾರುಕಟ್ಟೆಯಲ್ಲಿ ಈಗಾಗಲೆ ಇರುವಂತಹ 7-ಇಂಚಿನ ಟ್ಯಾಬ್ಲೆಟ್‌ಗಳಾದ ಅಮೇಜಾನ್‌ ಕಿಂಡಲ್‌ ಫೈರ್‌ HD ಹಾಗೂ ಗೂಗಲ್‌ ನೆಕ್ಸಸ್‌ 7 ಗೆ ಪ್ರಬಲ ಪೈ ಪೋಟಿ ನೀಡಬಲ್ಲದಾಗಿದೆ, ಅಂದಹಾಗೆ ಐಪ್ಯಾಡ್‌ ಸುಮಾರು 10,000 ರೂ. ಬೆಲೆಯಲ್ಲಿ ಲಭ್ಯವಾಗಲಿದೆ ಎಂದು ವದಂತಿ ಹರಡಿದೆ. ಆದರೆ ನೂತನ ಐಪ್ಯಾಡ್‌ ಮಿನಿ ಯಲ್ಲಿ ಆಪಲ್‌ನ ರೆಟಿನಾ ಡಿಸ್ಪ್ಲೆ ಹೊಂದಿರುವುದಿಲ್ಲಾ ಎಂದು ತಿಳಿಸಿದೆ.

ಇದಲ್ಲದೆ ನೂತನ A6 ಪ್ರೊಸೆಸರ್‌ ಹೊಂದಿದ್ದು, ನ್ಯಾನೋ ಸಿಮ್‌ ಟ್ರೇ ಹೊಂದಿದೆ. ಹಾಗೂ ಹಿಂಬದಿಯ ಕ್ಯಾಮೆರಾ ಇದ್ದು 32GB/64GB ಆಮತರಿಕ ಸ್ಟೋರೇಜ್‌ ಮಾದರಿಗಳಲ್ಲಿ ಲಭ್ಯವಾಗಲಿದೆ.

Read In English...

ಐಪಾಡ್‌ ಮಿನಿ ಬದಲಾಗಿ ಖರೀದಿಸ ಬಹುದಾದ ಟಾಪ್‌ 5 ಟ್ಯಾಬ್ಲೆಟ್ಸ್‌

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot