ಭಾರತಕ್ಕೆ ಐಪ್ಯಾಡ್‌ ಮಿನಿ ಬರಲಿದೆ!

By Vijeth Kumar Dn
|

ಭಾರತಕ್ಕೆ ಐಪ್ಯಾಡ್‌ ಮಿನಿ ಬರಲಿದೆ!
ತಾಂತ್ರಿಕ ಸರಕು ತಯಾರಿಕಾ ಕ್ಷೇತ್ರದಲ್ಲಿನ ದೊಡ್ಡಣನೆನಿಸಿರುವ ಆಪಲ್‌ ಸಂಸ್ಥೆಯು ಇತ್ತೀಚೆಗೆ ತಾನೆ ಬಹು ಚರ್ಚಿತ 7.9 ಇಂಚಿನ ಐಪ್ಯಾಡ್‌ ಮಿನಿ ಟ್ಯಾಬ್ಲೆಟ್‌ ಅನ್ನು ಅನಾವರಣಗೊಳಿಸಿದ್ದು ಈಗಾಗಲೇ ಪ್ರೀ ಆರ್ಡರ್‌ನಲ್ಲಿ ವಿಶ್ವದ ವಿವಿಧೆಡೆ ಲಭ್ಯವಾಗಿದೆ. ಅಂದಾಹಾಗೆ ಈ ನೂತನ ಟ್ಯಾಬ್ಲೆಟ್‌ ನವೆಂಬರ್‌ 2 ರಂದು ಬಿಡುಗಡೆಯಾಗಲಿದೆ ಆಪಲ್‌ ಸಂಸ್ಥೆ ಖಚಿತ ಪಡಿಸಿದೆ.

ಬೆಲೆ ವಿಚಾರದಲ್ಲಿ 16GB, 32GB ಹಾಗೂ 64GB ಮಾದರಿಯಲ್ಲಿನ ಐಪ್ಯಾಡ್‌ ಮಿನಿ ಅಮೇರಿಕಾ ದರ ಅನ್ವಯ ಕೇವಲ ವೈ-ಫೈ ಹೊಂದಿರುವ ಟ್ಯಾಬ್ಲೆಟ್‌ $329 (ಸುಮಾರು Rs 17,500), $429 (ಸುಮಾರು Rs 20,500) ಹಾಗೂ $529 (ಸುಮಾರು Rs 28,500) ದರದಲ್ಲಿ ಲಭ್ಯವಾಗಲಿದೆ. ಹಾಗೂ ವೈ-ಫೈ + ಸೆಲ್ಯುಲಾರ್‌ ಮಾದರಿಯ ಟ್ಯಾಬ್ಲೆಟ್‌ $459 (ಸುಮಾರು Rs 25,000), $559 (ಸುಮಾರು Rs 30,000) ಹಾಗೂ $659 (ಸುಮಾರು Rs 35,000) ದರದಲ್ಲಿ ಲಭಗ್ಯವಾಗಲಿದೆ.

ಅಂದಹಾಗೆ ಐಪ್ಯಾಡ್‌ ಮಿನಿ ಭಾರತದಲ್ಲಿ ಅಧಿಕೃತವಾಗಿ ಬಿಡುಗಡೆಯಾಗುವ ಮುನ್ನ ಜಾಗತಿಕ ಸರಕುಗಳ ಮಾರಟಕ್ಕೆ ಹೆಸರುವಾಸಿಯಾದಂತಹ ದೆಹಲಿ ಮೂಲದ ವೆಬ್‌ಸೈಟ್‌ ಆದಂತಹ ಫಿರಂಗೀಭಾಯ್‌.ಕಾಂ ನೂತನ ಟ್ಯಾಬ್ಲೆಟ್‌ ಅನ್ನು ರೂ.25,900 ದರದಲ್ಲಿ ಫ್ರಿ ಆರ್ಡರ್‌ ತೆಗೆದುಕೊಳ್ಳಲು ಆರಂಭಿಸಿದೆ. ಅಲ್ಲದೆ ಐಪ್ಯಾಡ್‌ ಮಿನಿ ಅಮೇರಿಕಾದ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಒಂದುವಾರದಲ್ಲಿ ಡಿಲಿವರಿ ಮಾಡಲಾಗುವುದು ಎಂದು ತಿಳಿಸಲಾಗಿದೆ.

ಐಪ್ಯಾಡ್‌ ಮಿನಿ ವಿಶೇಷತೆ ಕುರಿತು ಹೇಳುವುದಾದರೆ 7.9 ಇಂಚಿನ LED-ಬ್ಯಾಕ್‌ಲೈಟ್‌ IPS LCD ಟಚ್‌ಸ್ಕ್ರೀನ್‌ ದರ್ಶಕ ಹಾಗೂ 1024 x 768 ಪಿಕ್ಸೆಲ್‌ ರೆಸೆಲ್ಯೂಷನ್‌ ನೊಂದಿಗೆ ರೆಟಿನಾ ಡಿಸ್ಪ್ಲೇ ಹೊಂದಿದೆ. 1GHz ಡ್ಯುಯೆಲ್‌ ಕೋರ್‌ ಆಪಲ್‌ A5 ಪ್ರೊಸೆಸರ್‌, ಪವರ್‌ ವಿರ್‌ ಜಿಪಿಯು, 5MP ಐಸೈಟ್‌ ಹೊಂದಿರುವ ಹಿಂಬದುಯ ಕ್ಯಾಮೆರಾ. ವಿಡಿಯೋ ಕರೆಗಾಗಿ 1.2MP ನ ಮುಂಬದಿಯ ಕ್ಯಾಮೆರಾ.

ಐಓಎಸ್‌ 6 ನೊಂದಿಗೆ ಆಪಲ್‌ ಮ್ಯಾಪ್ಸ್‌, ಸುಧಾರಿತ ಸಿರಿ, ನೂತನ ಸಫಾರಿ ಆಪ್ಸ್‌, ಐಕ್ಲೌಡ್‌ ಕ್ಲೌಡ್‌ ಸ್ಟೋರೇಜ್‌, ನೂತನ ಫೋಟೋಸ್ಟ್ರೀಮ್‌ ಆಪ್ಸ್‌, ಪಾಸ್‌ಬುಕ್‌ ಆಪ್ಸ್‌ ಹಾಗೂ ಫೇಸ್‌ಬುಕ್‌ ನಂತಹ ಫೀಚರ್ಸ್‌ಗಳು ಲಭ್ಯವಿದೆ. ಇದಲ್ಲದೆ ನೂತನ ಐಪ್ಯಾಡ್‌ ಮಿನಿ 16GB/32GB ಹಾಗೂ 64GB ಆಂತರಿಕ ಸ್ಟೋರೇಜ್‌ ಮಾದರಿಗಳಲ್ಲಿ ಲಭ್ಯವಿದ್ದು 512MB RAM ಒಳಗೊಂಡಿದೆ. ಇದರ ಹೊರತಾಗಿಯೂ 8GB ಮಾದರಿಯಲ್ಲಿಯೂ ಕೂಡ ಲಭ್ಯವಾಗಲಿದೆ.

ಕನೆಕ್ಟಿವಿಟಿ ವಿಚಾರದಲ್ಲಿ ಲೈಟ್ನಿಂಗ್‌ ಕನೆಕ್ಟರ್‌, Wi-Fi ಹಾಗೂ ಬ್ಲೂಟೂತ್ ಫೀಚರ್ಸ್‌ ಹೊಂದಿದೆ. ಹಚ್ಚುವರಿಯಾಗಿ 3G ಹಾಗೂ 4G ಗೆ ಕೂಡಾ ಬೆಂಬಲಿಸುತ್ತದೆ. ಆಪಲ್‌ನ ಪ್ರಕಾರ ಐಪ್ಯಾಡ ಮಿನಿಯಲ್ಲಿ 16.3 Whr Li-Po ಬ್ಯಾಟರಿ ಇದ್ದು 10 ಗಂಟೆಗಳ ಬ್ಯಾಕಪ್‌ ನೀಡುತ್ತದೆ.

Read In English...

ಆಪಲ್‌ ಐಪ್ಯಾಡ್‌ ಮಿನಿ VS ಆಪಲ್‌ ಐಪ್ಯಾಡ್‌ 4

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X