ಆಪಲ್ ಐಪ್ಯಾಡ್‌ ಮಿನಿ ಟ್ಯಾಬ್ಲೆಟ್‌ ಭಾರತದ ಮಾರುಕಟ್ಟೆಗೆ ಬಿಡುಗಡೆ

By Ashwath
|

ಎರಡನೇ ತಲೆಮಾರಿನ ಐಪ್ಯಾಡ್‌ ಮಿನಿ ರೆಟಿನಾ ಡಿಸ್ಪೇ ಟ್ಯಾಬ್ಲೆಟ್‌ನ್ನು ಆಪಲ್‌ ಭಾರತದ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.ವೈಫೈ ಮತ್ತು ವೈಫೈ ಸೆಲ್ಯುಲರ್‌ ಎರಡು ವಿಧಗಳು ಮತ್ತು ನಾಲ್ಕು ಆಂತರಿಕ ಮೆಮೊರಿಯಲ್ಲಿ ಐಪ್ಯಾಡ್‌ ಮಿನಿ 2 ಬಿಡುಗಡೆಯಾಗಿದೆ.

ಕಳೆದ ವರ್ಷ‌ ಬಿಡುಗಡೆಯಾಗಿದ್ದ ಐಪ್ಯಾಡ್‌ ಮಿನಿಗಿಂತ ಉತ್ತಮ ವಿಶೇಷತೆಗಳನ್ನು ಈ ಟ್ಯಾಬ್ಲೆಟ್‌ ಹೊಂದಿದ್ದು,ಬೂದು ಮತ್ತು ಬೆಳ್ಳಿ ಬಣ್ಣದಲ್ಲಿ ಈ ಟ್ಯಾಬ್‌ ಬಿಡುಗಡೆಯಾಗಿದೆ.ವೈಫೈ ಹೊಂದಿರುವ 16GB ಆಂತರಿಕ ಮೆಮೊರಿ ಹೊಂದಿರುವ ಟ್ಯಾಬ್ಲೆಟ್‌ಗೆ 28,900 ರೂಪಾಯಿ,32GB ಟ್ಯಾಬ್ಲೆಟ್‌ಗೆ 35,900 ರೂಪಾಯಿ, 64GB ಟ್ಯಾಬ್ಲೆಟ್‌ಗೆ 42,900 ರೂಪಾಯಿ, 128GB ಟ್ಯಾಬ್ಲೆಟ್‌ಗೆ 49,900 ರೂಪಾಯಿಯನ್ನುಆಪಲ್‌ ನಿಗದಿ ಮಾಡಿದೆ.

ಇನ್ನೂ ವೈಫೈ ಮತ್ತು ವೈಫೈ ಸೆಲ್ಯುಲರ್‌ ವಿಶೇಷತೆ ಹೊಂದಿರುವ 16GB ಆಂತರಿಕ ಮೆಮೊರಿ ಹೊಂದಿರುವ ಟ್ಯಾಬ್ಲೆಟ್‌ಗೆ 37,900 ರೂಪಾಯಿ,32GB ಟ್ಯಾಬ್ಲೆಟ್‌ಗೆ 44,900 ರೂಪಾಯಿ, 64GB ಟ್ಯಾಬ್ಲೆಟ್‌ಗೆ 51,900 ರೂಪಾಯಿ, 128GB ಟ್ಯಾಬ್ಲೆಟ್‌ಗೆ 58,900 ಡಾಲರ್‌ ಬೆಲೆಯನ್ನು ಆಪಲ್‌ ನಿಗದಿ ಮಾಡಿದೆ.

ಆಪಲ್‌ ಐಪ್ಯಾಡ್‌ ಮಿನಿ2 ಟ್ಯಾಬ್ಲೆಟ್‌ನ ಆಕರ್ಷಕ ಚಿತ್ರಗಳಿಗಾಗಿ ಇಲ್ಲಿ ಕ್ಲಿಕ್‌ ಮಾಡಿ: ಗ್ಯಾಲರಿ

ಐಪ್ಯಾಡ್‌ ಮಿನಿ ಟ್ಯಾಬ್ಲೆಟ್‌ ಭಾರತದ ಮಾರುಕಟ್ಟೆಗೆ ಬಿಡುಗಡೆ

ಐಪ್ಯಾಡ್‌ ಮಿನಿ ಟ್ಯಾಬ್ಲೆಟ್‌ ಭಾರತದ ಮಾರುಕಟ್ಟೆಗೆ ಬಿಡುಗಡೆ

ರೆಟಿನಾ ಡಿಸ್ಪ್ಲೇ,2048x1536 ಪಿಕ್ಸೆಲ್‌ ರೆಸೂಲೂಶನ್‌ ಹೊಂದಿರುವ 7.9 ಇಂಚಿನ ಎಲ್‌ಇಡಿ ಬ್ಯಾಕ್‌ಲಿಟ್‌ ಮಲ್ಟಿ ಟಚ್‌,ಐಪಿಎಸ್‌ ಟೆಕ್ನಾಲಜಿ ಸ್ಕೀನ್‌, 326 ಪಿಪಿಐ(ಪಿಕ್ಸೆಲ್‌ ಪರ್‌ ಇಂಚು) ಫಿಂಗರ್‌ ಪ್ರಿಂಟ್‌ resistant oleophobic coating ಹೊಂದಿದೆ.

ಈ ಹಿಂದೆ ಬಿಡುಗಡೆಯಾದ ಐಪ್ಯಾಡ್‌‌ ಮಿನಿ 7.9 ಇಂಚಿನ ಎಲ್‌ಇಡಿ ಬ್ಯಾಕ್‌ಲಿಟ್‌ ಐಪಿಎಸ್‌ ಎಲ್‌ಸಿಡಿ ಸ್ಕ್ರೀನ್‌ ,768 x 1024 ಪಿಕ್ಸೆಲ್‌ ರೆಸೂಲೂಶನ್‌, 162 ಪಿಪಿಐ(pixels per inch) ಹೊಂದಿತ್ತು.

ಐಪ್ಯಾಡ್‌ ಮಿನಿ ಟ್ಯಾಬ್ಲೆಟ್‌ ಭಾರತದ ಮಾರುಕಟ್ಟೆಗೆ ಬಿಡುಗಡೆ

ಐಪ್ಯಾಡ್‌ ಮಿನಿ ಟ್ಯಾಬ್ಲೆಟ್‌ ಭಾರತದ ಮಾರುಕಟ್ಟೆಗೆ ಬಿಡುಗಡೆ

ಇನ್ನೂ ಐಫೋನ್‌ 5ಎಸ್‌ನಲ್ಲಿದ್ದಂತೆ ಎ7 ಚಿಪ್‌ 64 ಬಿಟ್‌ ಆರ್ಕಿ‌ಟೆಕ್ಚರ್‌,ಎಂ7 ಮೋಷನ್‌ ಪ್ರೊಸೆಸರ್‌ನ್ನು ಈ ಹೊಸ ಐಪ್ಯಾಡ್‌ ಮಿನಿ ಹೊಂದಿದೆ.ಆಪಲ್‌ ಕಂಪೆನಿಯ ಪ್ರಕಾರ ಈ ಹಿಂದಿನ ಮಿನಿಗಿಂತ ನಾಲ್ಕು ಪಟ್ಟು ವೇಗದ ಪ್ರೊಸೆಸರ್‌ ಮತ್ತು 8 ಪಟ್ಟು ವೇಗದ ಗ್ರಾಫಿಕ್‌ ಪ್ರೊಸೆಸರ್‌‌ನ್ನು ಈ ಟ್ಯಾಬ್ಲೆಟ್‌ ಹೊಂದಿದೆ.

ಈ ಹಿಂದೆ ಬಿಡುಗಡೆಯಾದ ಐಪ್ಯಾಡ್‌ ಮಿನಿ ಎ5 ಪ್ರೊಸೆಸರ್‌ ಮತ್ತು 1 GHz Cortex-A9 ಪ್ರೊಸೆಸರ್‌ನ್ನು ಹೊಂದಿತ್ತು.

ಐಪ್ಯಾಡ್‌ ಮಿನಿ ಟ್ಯಾಬ್ಲೆಟ್‌ ಭಾರತದ ಮಾರುಕಟ್ಟೆಗೆ ಬಿಡುಗಡೆ

ಐಪ್ಯಾಡ್‌ ಮಿನಿ ಟ್ಯಾಬ್ಲೆಟ್‌ ಭಾರತದ ಮಾರುಕಟ್ಟೆಗೆ ಬಿಡುಗಡೆ

ಐಪ್ಯಾಡ್‌ ಮಿನಿ ವೈಫೈ ಗಾತ್ರ 200. ಮಿ.ಮೀಟರ್‌ ಉದ್ದ,134.7 ಮಿ.ಮೀಟರ್‌ ಅಗಲ, 7.5 ಮಿ.ಮೀಟರ್‌ ದಪ್ಪ, 331 ಗ್ರಾಂ ತೂಕವಿದೆ.

ಇನ್ನೂ ವೈಫೈ+ ಸೆಲ್ಯುಲರ್ ಟ್ಯಾಬ್ಲೆಟ್‌ 200. ಮಿ.ಮೀಟರ್‌ ಉದ್ದ,134.7 ಮಿ.ಮೀಟರ್‌ ಅಗಲ, 7.5 ಮಿ.ಮೀಟರ್‌ ದಪ್ಪ, 341 ಗ್ರಾಂ ತೂಕವಿದೆ.

ಐಪ್ಯಾಡ್‌ ಮಿನಿ ಟ್ಯಾಬ್ಲೆಟ್‌ ಭಾರತದ ಮಾರುಕಟ್ಟೆಗೆ ಬಿಡುಗಡೆ

ಐಪ್ಯಾಡ್‌ ಮಿನಿ ಟ್ಯಾಬ್ಲೆಟ್‌ ಭಾರತದ ಮಾರುಕಟ್ಟೆಗೆ ಬಿಡುಗಡೆ

ಹೊಸ ಮಿನಿ ಟ್ಯಾಬ್ಲೆಟ್‌ ಈ ಹಿಂದೆ ಬಿಡುಗಡೆಯಾಗಿದ್ದ ಟ್ಯಾಬ್ಲೆಟ್‌ ಬ್ಯಾಟರಿಗಿಂತ ಶಕ್ತಿಶಾಲಿಯಾಗಿದೆ. ಈ ಹಿಂದೆ ಟ್ಯಾಬ್ಲೆಟ್‌ ಲಿಥಿಯಂ ಪಾಲಿಮರ್ ಬ್ಯಾಟರಿ ಸಾಮರ್ಥ್ಯ 16.3 watt ಇದ್ದರೆ, ಹೊಸ ಮಿನಿ ಟ್ಯಾಬ್ಲೆಟ್‌ 23.8 watt ಹೊಂದಿದೆ.

ಐಪ್ಯಾಡ್‌ ಮಿನಿ ಟ್ಯಾಬ್ಲೆಟ್‌ ಭಾರತದ ಮಾರುಕಟ್ಟೆಗೆ ಬಿಡುಗಡೆ

ಐಪ್ಯಾಡ್‌ ಮಿನಿ ಟ್ಯಾಬ್ಲೆಟ್‌ ಭಾರತದ ಮಾರುಕಟ್ಟೆಗೆ ಬಿಡುಗಡೆ

ƒ/2.4 ಅಪರ್ಚರ್‌ ಹೊಂದಿರುವ 5 ಎಂಪಿ ಕ್ಯಾಮೆರಾ, ವಿಡಿಯೋ ಕಾಲಿಂಗ್‌ಗಾಗಿ ಮುಂದುಗಡೆ 1.2 ಎಂಪಿ ಕ್ಯಾಮೆರಾವನ್ನು ಆಪಲ್‌‌ ಐಪ್ಯಾಡ್‌ ಮಿನಿ ಹೊಂದಿದೆ.

ಐಪ್ಯಾಡ್‌ ಮಿನಿ ಟ್ಯಾಬ್ಲೆಟ್‌ ಭಾರತದ ಮಾರುಕಟ್ಟೆಗೆ ಬಿಡುಗಡೆ

ಐಪ್ಯಾಡ್‌ ಮಿನಿ ಟ್ಯಾಬ್ಲೆಟ್‌ ಭಾರತದ ಮಾರುಕಟ್ಟೆಗೆ ಬಿಡುಗಡೆ

ಐಓಎಸ್‌ 7 ಆಪರೇಟಿಂಗ್‌ ಸಿಸ್ಟಂನ್ನು ಈ ಟ್ಯಾಬ್ಲೆಟ್‌ ಒಳಗೊಂಡಿದೆ. ಈ ಹಿಂದೆ ಬಿಡುಗಡೆಯಾದ ಟ್ಯಾಬ್ಲೆಟ್‌ ಐಓಎಸ್‌ 6 ಒಳಗೊಂಡಿತ್ತು. ನಂತರ ಈಗ ಇದನ್ನು ಐಓಎಸ್‌ 7 ಅಪ್‌ಡೇಟ್‌ ಮಾಡಬಹುದಾಗಿದೆ.ಗೈರೋ,ಎಕ್ಸಲರೋ ಮೀಟರ್‌,ಪ್ರಾಕ್ಸಿಮಿಟಿ ಸೆನ್ಸರ್‌‌,ಲೈಟ್‌ ಸೆನ್ಸರ್‌ಗಳನ್ನು ಐಪ್ಯಾಡ್‌ ಮಿನಿ ಹೊಂದಿದೆ.

ಐಪ್ಯಾಡ್‌ ಮಿನಿ ಟ್ಯಾಬ್ಲೆಟ್‌ ಭಾರತದ ಮಾರುಕಟ್ಟೆಗೆ ಬಿಡುಗಡೆ

ಐಪ್ಯಾಡ್‌ ಮಿನಿ ಟ್ಯಾಬ್ಲೆಟ್‌ ಭಾರತದ ಮಾರುಕಟ್ಟೆಗೆ ಬಿಡುಗಡೆ

ಹೋಮ್‌ ಬಟನ್‌ ಮತ್ತು ವಾಲ್ಯೂಮ್ ಬಟನ್‌

ಐಪ್ಯಾಡ್‌ ಮಿನಿ ಟ್ಯಾಬ್ಲೆಟ್‌ ಭಾರತದ ಮಾರುಕಟ್ಟೆಗೆ ಬಿಡುಗಡೆ

ಐಪ್ಯಾಡ್‌ ಮಿನಿ ಟ್ಯಾಬ್ಲೆಟ್‌ ಭಾರತದ ಮಾರುಕಟ್ಟೆಗೆ ಬಿಡುಗಡೆ

ಡ್ಯುಯಲ್‌ ಮೈಕ್ರೋಫೋನ್‌, ಹೆಡ್‌ಫೋನ್‌ ಜ್ಯಾಕ್‌ ,ಲೈಟ್‌ನಿಂಗ್‌ ಕನೆಕ್ಟ ಕನೆಕ್ಟರ್ಸ್

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X