ಗೇಮಿಂಗ್‌ಗೆ ಲೆನೊವೊ ಲೀಜನ್ ವೈ540 ಬೆಸ್ಟ್..! ಬೆಲೆ ಕಡಿಮೆ.. ವೇಗ ಜಾಸ್ತಿ..!

By Gizbot Bureau
|

2019ಕ್ಕೆ ವಿದಾಯ ಹೇಳಿ 2020ನ್ನು ಬರಮಾಡಿಕೊಳ್ಳಲು ದಿನಗಣನೆ ಶುರುವಾಗಿದೆ. ಈ ವರ್ಷ ಮಾರುಕಟ್ಟೆಗೆ ಹಲವಾರು ಗೇಮಿಂಗ್ ಲ್ಯಾಪ್‌ಟಾಪ್‌ಗಳು ವಿವಿಧ ಬೆಲೆ ಸ್ಥರದೊಂದಿಗೆ ಬಂದಿವೆ. ಫ್ಯಾನ್ಸಿಯೆಸ್ಟ್ ಗೇಮಿಂಗ್ ಲ್ಯಾಪ್‌ಟಾಪ್‌ಗಳು ಸಣ್ಣ ಕಾರಿನ ವೆಚ್ಚಕ್ಕೆ ಸರಿಹೊಂದುತ್ತವೆ ಹಾಗೂ ಇತ್ತೀಚಿನ ಎಂಟ್ರಿ-ಲೆವೆಲ್ ಗೇಮಿಂಗ್ ಲ್ಯಾಪ್‌ಟಾಪ್‌ಗಳು ಗೇಮ್‌ ಆಡಲು ಸಾಕಷ್ಟು ಫೈರ್‌ಪವರ್ ನೀಡುತ್ತವೆ. ಉತ್ಸಾಹಭರಿತ ಗೇಮರ್‌ಗಳು ಇತ್ತೀಚಿನ ಎನ್‌ವಿಡಿಯಾ ಆರ್ಟಿಎಕ್ಸ್ ಗ್ರಾಫಿಕ್ಸ್ ಕಾರ್ಡ್‌ಗಳನ್ನು ಹೊಂದಿರುವ ದುಬಾರಿ ಲ್ಯಾಪ್‌ಟಾಪ್‌ಗಳನ್ನು ಇಷ್ಟಪಡುತ್ತಾರೆ. ಆದರೆ, ನಾವಿಲ್ಲಿ ಕೈಗೆಟುಕುವ ಗೇಮಿಂಗ್‌ ಲ್ಯಾಪ್‌ಟಾಪ್‌ ಬಗ್ಗೆ ಮಾತಾಡೋಣ.

ಗ್ರಾಫಿಕ್ಸ್

1 ಲಕ್ಷ ರೂ.ಗಿಂತ ಕಡಿಮೆ ಬೆಲೆಗೆ, ನೀವು ಯಾವುದೇ ಇತ್ತೀಚಿನ ಗೇಮ್‌ಗಳನ್ನು ಯೋಗ್ಯವಾದ ಗ್ರಾಫಿಕ್ಸ್ ಮತ್ತು ಫ್ರೇಮ್ ದರದಲ್ಲಿ ಆಡಬಲ್ಲ ಲ್ಯಾಪ್‌ಟಾಪ್ ಪಡೆಯಬಹುದು. ಇವುಗಳಲ್ಲಿ ಕೆಲವು ನಿಮ್ಮ ದೈನಂದಿನ ಜೀವನದ ಒಂದು ಭಾಗವಾದರೂ ಅಚ್ಚರಿ ಪಡಬೇಕಿಲ್ಲ. ಅವುಗಳಲ್ಲಿ ಕೆಲವು RGB ಲೈಟಿಂಗ್‌ ಸ್ಟ್ರಿಪ್‌ಗಳ ರೂಪದಲ್ಲಿ ಬ್ಲಿಂಗ್‌ ಛಾಯೆಯನ್ನು ನೀಡುತ್ತವೆ. ಇವುಗಳಲ್ಲಿ ಆಸುಸ್‌ ಡಜನ್‌ನಷ್ಟು ROG ಮತ್ತು TUF ಲ್ಯಾಪ್‌ಟಾಪ್‌ಗಳನ್ನು 1 ಲಕ್ಷ ರೂ. ಒಳಗಡೆ ಗ್ರಾಹಕರಿಗೆ ನೀಡಿದ್ದರೂ ಲೆನೊವೊ ಕಂಪನಿಯ ಒಂದು ಲ್ಯಾಪ್‌ಟಾಪ್‌ ಗೇಮಿಂಗ್‌ ಪ್ರಿಯರ ಗಮನ ಸೆಳೆಯುತ್ತದೆ.

ಲೀಜನ್ ವೈ540

ಲೀಜನ್ ವೈ540

ಲೆನೊವೊ ಕಂಪನಿ ಲೀಜನ್ ವೈ540 ಎಂಬ ಲ್ಯಾಪ್‌ಟಾಪ್‌ನ್ನು ಬಿಡುಗಡೆ ಮಾಡಿದ್ದು, 74,990 ರೂ.ಗಳಿಂದ ಬೆಲೆ ಪ್ರಾರಂಭವಾಗುತ್ತವೆ. ಲೆನೊವೊ ಲೀಜನ್ ವೈ 540 ಬ್ಲಿಂಗ್-ಲವಿಂಗ್‌ ಗೇಮರ್‌ಗಳನ್ನು ಆಕರ್ಷಿಸುವುದಿಲ್ಲ. ಆದರೆ, ಕೆಲವು ದಿನಗಳ ಬಳಕೆಯ ನಂತರ ಇದು ಉತ್ತಮ ಆಯ್ಕೆ ಎನಿಸುತ್ತದೆ.

ವಿನ್ಯಾಸದಲ್ಲಿ ಕಮಾಲ್‌

ವಿನ್ಯಾಸದಲ್ಲಿ ಕಮಾಲ್‌

ಲೀಜನ್ Y540 ಲ್ಯಾಪ್‌ಟಾಪ್‌ನೊಂದಿಗೆ ಲೆನೊವೊ ಗೇಮಿಂಗ್‌ ವಿಭಾಗವನ್ನು ಉತ್ತಮಗೊಳಿಸಿಲ್ಲ. ಆದರೆ, ವಿನ್ಯಾಸ ಮತ್ತು ನಿರ್ಮಾಣದಲ್ಲಿ ಬೇರೆ ಕಂಪನಿಯ ಲ್ಯಾಪ್‌ಟಾಪ್‌ಗಳಿಗಿಂತ ಭಿನ್ನವಾಗಿದೆ. ಆಸುಸ್, ಡೆಲ್ ಮತ್ತು ಎಚ್‌ಪಿ ಯಿಂದ ಹೆಚ್ಚಿನ ಎಂಟ್ರಿ ಲೆವೆಲ್‌ ಗೇಮಿಂಗ್ ಲ್ಯಾಪ್‌ಟಾಪ್‌ಗಳು ಬಜೆಟ್‌ಗೆ ಸರಿಹೊಂದುವಂತೆ ರೂಪಿಸಲಾಗಿರುತ್ತದೆ. ಆದರೆ, ಲೆನೊವೊದಲ್ಲಿ ಅಷ್ಟೆ ಬಜೆಟ್‌ನಲ್ಲಿ ಕ್ಲಾಸಿ ವಿನ್ಯಾಸವನ್ನು ಗ್ರಾಹಕರು ಪಡೆಯಬಹುದು.

ಪ್ಲಾಸ್ಟಿಕ್‌ ನಿರ್ಮಿತ

ಪ್ಲಾಸ್ಟಿಕ್‌ ನಿರ್ಮಿತ

ಈ ಲ್ಯಾಪ್‌ಟಾಪ್‌ ಸಂಪೂರ್ಣ ಪ್ಲಾಸ್ಟಿಕ್ ನಿರ್ಮಿತ ಚಾಸಿಸ್ ಹೊಂದಿರುವುದರಿಂದ ಕಡಿಮೆ ತೂಕ ಹೊಂದಿದೆ. ಮೇಲ್ಮೈ ಸುಂದರವಾದ ಒರಟು ವಿನ್ಯಾಸವನ್ನು ಹೊಂದಿದೆ. ಇದರ ಜೊತೆ ಎಲ್ಇಡಿ-ಬ್ಯಾಕ್‌ಲಿಟ್ ಲೀಜನ್ ಲೋಗೊವನ್ನು ಆಕರ್ಷಕವಾಗಿ ಅಳವಡಿಸಲಾಗಿದೆ. ಇನ್ನು ಡಿಸ್‌ಪ್ಲೇ ನ್ಯಾರೋ-ಬೆಜೆಲ್‌ಗಳನ್ನು ಹೊಂದಿದ್ದು, ರೆಸ್ಪಾನ್ಸಿವ್‌ ಬೃಹತ್ ಟ್ರ್ಯಾಕ್‌ಪ್ಯಾಡ್‌ನೊಂದಿಗೆ ನೀವು ಪೂರ್ಣ ಗಾತ್ರದ ಕೀಬೋರ್ಡ್ ಹೊಂದಿದೆ.

ಪ್ರಭಾವಶಾಲಿ ಡಿಸ್‌ಪ್ಲೇ

ಪ್ರಭಾವಶಾಲಿ ಡಿಸ್‌ಪ್ಲೇ

ಡಿಸ್‌ಪ್ಲೇ ಸಾಕಷ್ಟು ಪ್ರಭಾವಶಾಲಿಯಾಗಿದ್ದು, 15.4-ಇಂಚಿನ ಐಪಿಎಸ್ ಎಲ್‌ಸಿಡಿ ಪ್ಯಾನೆಲ್‌ನೊಂದಿಗೆ 144Hz ರಿಫ್ರೆಶ್ ದರದೊಂದಿಗೆ ಬಂದಿದೆ. ಗೇಮಿಂಗ್‌ ಮತ್ತು ಚಲನಚಿತ್ರಗಳನ್ನು ಡಿಸ್‌ಪ್ಲೇ ಸಾಕಷ್ಟು ರೋಮಾಂಚಕ ಬಣ್ಣಗಳಲ್ಲಿ ಹಾಗೂ ಹೆಚ್ಚಿನ ಹೊಳಪಿನಲ್ಲಿ ನಿರೂಪಿಸುತ್ತದೆ.

ಆಕರ್ಷಕ ಕಾರ್ಯಕ್ಷಮತೆ

ಆಕರ್ಷಕ ಕಾರ್ಯಕ್ಷಮತೆ

ಲೆನೊವೊ ಲೀಜನ್ Y540 ತನ್ನ ಕಾರ್ಯಕ್ಷಮತೆಯಿಂದ ಹೆಚ್ಚು ಪ್ರಭಾವಶಾಲಿಯಾಗಿ ಕಂಡುಬರುತ್ತದೆ. 9th Gen Intel Core i9-9570H ಪ್ರೊಸೆಸರ್‌ ಹೊಂದಿರುವ ಲ್ಯಾಪ್‌ಟಾಪ್‌ 32GB RAM ನೊಂದಿಗೆ ಬರುತ್ತಿದೆ. ಹೆಚ್ಚುವರಿ ವೇಗಕ್ಕಾಗಿ 512GB SSD ಅಳವಡಿಸಿಕೊಳ್ಳಬಹುದು ಅಥವಾ 2TB HDD ಹೊಂದಬಹುದು.

ಎನ್‌ವಿಡಿಯಾ ಜಿಫೋರ್ಸ್ ಜಿಟಿಎಕ್ಸ್ 1650

ಎನ್‌ವಿಡಿಯಾ ಜಿಫೋರ್ಸ್ ಜಿಟಿಎಕ್ಸ್ 1650 ಗ್ರಾಫಿಕ್ಸ್ ಕಾರ್ಡ್ ಜೊತೆಗೆ, ಲೀಜನ್ ವೈ540 ಎಲ್ಲಾ ಇತ್ತೀಚಿನ ಗೇಮ್‌ಗಳನ್ನು ಯೋಗ್ಯವಾದ ಗ್ರಾಫಿಕ್ಸ್‌ನಲ್ಲಿ ಆಡಬಹುದು.

ಜಿಟಿಎ 5ನಂಥ ಗೇಮ್‌ಗಳು 40-50 ಎಫ್‌ಪಿಎಸ್‌ನ ಫ್ರೇಮ್ ದರಗಳೊಂದಿಗೆ ಅತ್ಯಧಿಕ ಗ್ರಾಫಿಕ್ಸ್ ಸೆಟ್ಟಿಂಗ್ಸ್‌ನಲ್ಲಿ ಆಡಬಹುದು. 144Hz ರಿಫ್ರೆಶ್ ದರವು ಗೇಮ್‌ಗಳನ್ನು ಸುಲಭವಾಗಿ ಆಡಲು ಸಹಾಯ ಮಾಡುತ್ತದೆ.

ಉತ್ತಮ ಬ್ಯಾಟರಿ

1 ಲಕ್ಷ ರೂ.ಗಿಂತ ಕಡಿಮೆ ಬೆಲೆ ಹೊಂದಿರುವ ಗೇಮಿಂಗ್ ಲ್ಯಾಪ್‌ಟಾಪ್‌ಗೆ ಈ ಮಟ್ಟದ ಕಾರ್ಯಕ್ಷಮತೆ ಇರುವುದು ಅದ್ಭುತ. ದೈನಂದಿನ ಕಾರ್ಯ, ವೆಬ್ ಬ್ರೌಸಿಂಗ್ ಮತ್ತು ಮ್ಯೂಸಿಕ್‌ ಸ್ಟ್ರೀಮಿಂಗ್‌ನಂತಹ ಕಾರ್ಯಗಳನ್ನು ಮಾಡುವಾಗ ಲ್ಯಾಪ್‌ಟಾಪ್ ಸರಾಸರಿ 4.5 ಗಂಟೆಗಳವರೆಗೆ ಕಾರ್ಯನಿರ್ವಹಿಸುತ್ತದೆ.

Most Read Articles
Best Mobiles in India

Read more about:
English summary
Is Lenovo Legion Y540 The Best Gaming Laptop For Casual Gamers?

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X