ಜನವರಿಯಲ್ಲಿ ಬಿಡುಗಡೆಯಾದ ಟಾಪ್ 10 ಗ್ಯಾಡ್ಜೆಟ್ ಗಳು

By Varun
|
ಜನವರಿಯಲ್ಲಿ ಬಿಡುಗಡೆಯಾದ ಟಾಪ್ 10 ಗ್ಯಾಡ್ಜೆಟ್ ಗಳು

ಕಳೆದ ತಿಂಗಳಷ್ಟೇ CES 2012 ನಲ್ಲಿ ಅನೇಕ ಹುಬ್ಬೇರಿಸುವ ಎಲೆಕ್ಟ್ರೋನಿಕ್ ಉತ್ಪನ್ನಗಳು ಅನಾವರಣಗೊಂಡಿದ್ದವು.ಇಲ್ಲಿದೆನೋಡಿ ಜನವರಿಯಲ್ಲಿ ಬಿಡುಗಡೆಯಾದ ಟಾಪ್ 10 ಗ್ಯಾಡ್ಜೆಟ್ ಗಳವಿವರ.

1. ಎಚ್.ಪಿ ಟಚ್ ಸ್ಮಾರ್ಟ್ 620, 3ಡಿ ಎಡಿಶನ್ ಪಿ.ಸಿ :ಕೋರ್ i5 ಪ್ರೋಸೆಸರ್, 1 ಜಿ.ಬಿ ಗ್ರಾಫಿಕ್ ಕಾರ್ಡ್, 23 ಇಂಚ್ ಎಚ್.ಡಿ ಸ್ಕ್ರೀನ್, 60 ಡಿಗ್ರೀ ಕೊನದಲ್ಲೂ ತಿರುಗಿಸಬಹುದಾದ ಸ್ಟ್ಯಾಂಡ್ ಹೊಂದಿದ್ದು , ತ್ರೀ ಡಿ ವೀಕ್ಷಣೆಗೆ ಹೆಚ್ಚು ಅನುಕೂಲ ಮಾಡಿಕೊಡುತ್ತದೆ. ಉತ್ತಮ ಬೀಟ್ ಸೌಂಡ್ ಹೊಮ್ಮಿಸಲಿರುವ ಸ್ಟೀರಿಯೋ ಸ್ಪೀಕರ್, ಬ್ಲೂರೇ ಮತ್ತು ಡಿ.ವೀ.ಡಿ ವೀಕ್ಷಣೆ ಕೂಡ ಬರುತ್ತದೆ. ಇದರ ಬೆಲೆ 93,000 ರೂಪಾಯಿ.

2. ಸ್ಯಾಮ್ಸಂಗ್ ಗ್ಯಾಲಕ್ಸಿ ಟ್ಯಾಬ್ 7.0 ಪ್ಲಸ್:345 ಗ್ರಾಂ ತೂಕದ, 7-ಇಂಚ್ 1024x600 ಟಚ್ ಸ್ಕ್ರೀನ್ ಹೊಂದಿದ್ದು, ಆನ್ಡ್ರೋಯ್ಡ್ ಹನಿ ಕೊಂಮ್ಬ್ ಓ.ಎಸ್, 16 ಜಿ.ಬಿ ಆಂತರಿಕ ಮೆಮೊರಿ,1.2 ಗಿಗಾ ಹರ್ಟ್ಜ್ ಡ್ಯುಯಲ್ ಕೋರ್ ಪ್ರಾಸೆಸ್ಸರ್ ಜೊತೆಗೆ, 1 ಜಿ.ಬಿ ರಾಮ್, 4,000mAh ಬ್ಯಾಟರಿ ವೈ -ಫೈ ಮತ್ತು 3G ತಂತ್ರಜ್ಞಾನ, 3 ಮೆಗಾ ಪಿಕ್ಸೆಲ್ ಆಟೋ ಫೋಕಸ್ ಕ್ಯಾಮೆರಾ ಇದ್ದು,ಎಲ್.ಈ.ಡಿ ಫ್ಲಾಶ್ 720p HD ವೀಡಿಯೊ ರೆಕಾರ್ಡ್ ಮಾಡಬಹುದು . 2 ಮೆಗಾ ಪಿಕ್ಸೆಲ್ ಮುಂಬದಿ ಕ್ಯಾಮೆರಾ ಕೂಡಾ ಇದೆ. ಇದರ ಬೆಲೆ 26,499 ರೂಪಾಯಿ.

3. ಎಪ್ಸನ್ K300 ಪ್ರಿಂಟರ್: ಸ್ವಯಂ ಚಾಲಿತ ಡಾಕ್ಯುಮೆಂಟ್ ಫೀಡರ್, 250 ಶೀಟ್ ಪೇಪರ್ ಟ್ರೇ , ಸ್ಕ್ಯಾನರ್ ಕೂಡ ಹೊಂದಿದೆ. ಬೆಲೆ ರೂ. 11,599.

4. ಟ್ಯಾಬ್ ಪ್ಲಸ್ ರಿಯೋ :ಬೆಂಗಳೂರು ಮೂಲದ ಕಂಪನಿಯ ಈಉತ್ಪನ್ನ,ಆಂಡ್ರಾಯ್ಡ್ 2.3, 1 ಗಿಗಾ ಹರ್ಟ್ಜ್ ಕಾರ್ಟೆಕ್ಸ್ A9 ಪ್ರೋಸೆಸರ್, 7 ಇಂಚ್ ಪರದೆ, 32 ಜಿ.ಬಿ ಮೆಮೊರಿಜೊತೆ ಬರಲಿದ್ದು,1 ವರ್ಷ ವಾರಂಟಿಯೂ ಲಭ್ಯ.ಬೆಲೆ ರೂ 11,990.

5. ಎಚ್.ಪಿ ವೈ-ಫೈ ಮೌಸ್ : ಮೊಟ್ಟ ಮೊದಲ ಯೂ.ಎಸ್.ಬಿ ಜೋಡಣೆ ಇಲ್ಲದೆ ಕೆಲಸ ಮಾಡುವ ಮೌಸ್ಇದಾಗಿದ್ದು ಕಂಪ್ಯೂಟರ್ ನಿಂದ 30 ಅಡಿ ದೂರದಲ್ಲೂ ಕೆಲಸ ಮಾಡುವ ಸಾಮರ್ಥ್ಯ ಹೊಂದಿದೆ. ವಿನ್ಡೋಸ್ 7 ಓ.ಎಸ್ ಇದ್ದಲ್ಲಿ ಕೆಲಸ ಮಾಡುತ್ತದೆ. ಇದರ ಬೆಲೆ 2,999 ರೂಪಾಯಿ.

6. ಎಚ್.ಪಿ ಮಿನಿ 210 :ಕೇವಲ 1.4 ಕೆ.ಜಿ ತೂಕದ ಈ ಮಿನಿ ಕಂಪ್ಯೂಟರ್ 9.5 ಗಂಟೆ ಸಾಮರ್ಥ್ಯದ ಬ್ಯಾಟರಿ ಹೊಂದಿದ್ದು ಇದರ ಬೆಲೆ ಸುಮಾರು 19,990 ರೂಪಾಯಿ.

7. ಮಿಲಾಗ್ರೋ ಮಹಿಳೆಯರ ಟೇಬಲ್ ಟಾಪ್ ಪಿ.ಸಿ :ಮಹಿಳೆಯರಿಗಾಗಿಯೇ ಡಿಸೈನ್ ಗೊಳಿಸಲಾದ ಟ್ಯಾಬ್ಲೆಟ್, 7-ಇಂಚ್ ಏ ಗ್ರೇಡ್ -LED 4:3 ಸ್ಕ್ರೀನ್, 1.2 ಗಿಗಾ ಹರ್ಟ್ಜ್ ಪ್ರೋಸೆಸರ್, 512DDR3ರಾಮ್ ಮತ್ತು 8 ಜಿ.ಬಿ ಆಂತರಿಕ ಮೆಮೊರಿ ಹೊಂದಿದ್ದು, ಪಿಂಕ್, ನೀಲಿ , ಬೂದಿ ಹಾಗು ಕಪ್ಪುಬಣ್ಣಗಳಲ್ಲಿ ಲಭ್ಯವಿದೆ. ಇದರ ಬೆಲೆ ಸುಮಾರು 13,990 ರೂಪಾಯಿ.

8. ನೋಕಿಯಾ ಆಶಾ :ನೋಕಿಯಾ ದಿಂದ ಬಿಡುಗಡೆಯಾದ ಮೊದಲ QWERTY ಕೀ ಪ್ಯಾಡ್ ಹೊಂದಿರುವ ಡ್ಯುಯಲ್ ಸಿಮ್ ಫೋನ್. 2 ಮೆಗಾ ಪಿಕ್ಸೆಲ್ ಕ್ಯಾಮರಾ, ಮ್ಯೂಸಿಕ್ ಸಿಸ್ಟಮ್ ಜೊತೆ ಬರಲಿರುವ ಇದರಲ್ಲಿ ಸಾಮಾಜಿಕ ಜಾಲ ತಾಣಗಳ ಅವಕಾಶವೂ ಇದೆ . 7,409 ರೂಪಾಯಿಗೆ ಇದು ಲಭ್ಯ.

9. ಎಂ ಟ್ಯಾಬ್ ನೋ :1 ಗಿಗಾ ಹರ್ಟ್ಜ್ ಡ್ಯುಯಲ್ ಕೋರ್ ಕಾರ್ಟೆಕ್ಸ್ A9 ಪ್ರೋಸೆಸರ್, ಆಂಡ್ರಾಯ್ಡ್ ಫ್ರೋಯೋ (2.2) ಓ.ಎಸ್. 7- ಇಂಚ್ (16:9) ಹದ ತಂತ್ರಜ್ಞಾನದ ಟಚ್ ಸ್ಕ್ರೀನ್ , 2 ಮೆಗಾ ಪಿಕ್ಸೆಲ್ ಕ್ಯಾಮರಾ ಹೊಂದಿದೆ. ಬೆಲೆ 15,999 ರೂಪಾಯಿ.

10. ಸ್ಪೈಸ್ Mi-280: ಆಂಡ್ರಾಯ್ಡ್ ಜಿಂಜರ್ ಬರ್ಡ್ ಓ.ಎಸ್ ಚಾಲಿತ ಈ ಫೋನ್ 2.8-ಇಂಚ್ ಟಚ್ ಸ್ಕ್ರೀನ್, 3.2-ಮೆಗಾ ಪಿಕ್ಸೆಲ್ ಕ್ಯಾಮರಾ. 3G, ವೈ - ಫೈ ,ಬ್ಲೂ ತೂಥ್, ಯೂ ಎಸ್. ಬಿ . ಹೊಂದಿದೆ. 5,200 ರೂಪಾಯಿ ಇದರ ಬೆಲೆ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X