ಮಕ್ಕಳು ಪೋಲಿ ವೆಬ್ಸೈಟು ನೋಡಬಾರದು. ಹೇಗೆ?

ಮನೆಯಲ್ಲಿ ಮಕ್ಕಳಿದ್ದು ಇಂಟರ್ನೆಟ್ ಹಾಕಿಸಿಕೊಂಡಿದ್ದರೆ ಅವರು ಪೋಲಿ ವೆಬ್ಸೈಟುಗಳನ್ನು ನೋಡಿಬಿಡಬಹುದು ಎಂಬ ಆತಂಕ ಪೋಷಕರಿಗೆ ಇದ್ದೇ ಇರುತ್ತದೆ.
ಮಕ್ಕಳು ಕುತೂಹಲಕ್ಕೆ ಅಂತ ಗೂಗಲ್ ಸರ್ಚ್ ಹೊಡೆದರೆ ಸಾಕು, ಯಾವ ರೀತಿಯ ವೆಬ್ಸೈಟ್ ಬೇಕೋ ಅದನ್ನು ಹುಡುಕಿಕೊಂಡು ನೋಡಬಹುದು. ಹಾಗಾಗಿ ಮನೆಯಲ್ಲಿ ಇಂಟರ್ನೆಟ್ ಇದ್ದರೆ ಈ ರೀತಿಯ ಚಟುವಟಿಕೆಯ ಮೇಲೆ ನಿಗಾ ವಹಿಸಲು ಹಾಗು ಪೋಲಿ ವೆಬ್ಸೈಟುಗಳನ್ನು ಬ್ಲಾಕ್ ಮಾಡಿ, ಮಕ್ಕಳು ಅವುಗಳನ್ನು ನೋಡದಂತೆ ತಡೆಯಲು ಒಂದು ತಂತ್ರಾಂಶವೊಂದನ್ನು ನಿಮಗೆ ಪರಿಚಯ ಮಾಡಿಕೊಡುತ್ತಿದ್ದೇವೆ.
K9 ವೆಬ್ ಪ್ರೊಟೆಕ್ಷನ್ ಒಂದು ಉಚಿತ ಸಾಫ್ಟ್ವೇರ್ ಆಗಿದ್ದು ನಿಮ್ಮ ಮನೆಯ ವಿಂಡೋಸ್ ಕಂಪೂಟರ್ ಹಾಗು ಆಂಡ್ರಾಯ್ಡ್ ಸ್ಮಾರ್ಟ್ ಫೋನ್, ಟ್ಯಾಬ್ಲೆಟ್ ಗಳಿಗೂ ಡೌನ್ಲೋಡ್ ಮಾಡಿಕೊಂಡು ಉಪಯೋಗಿಸಬಹುದು.
ಈ ತಂತ್ರಾಂಶದ ಪ್ರಮುಖ ಫೀಚರುಗಳು ಈ ರೀತಿ ಇದೆ:
- ಪೋಲಿ ವೆಬ್ಸೈಟ್, ಡ್ರಗ್ಸ್, ಡೇಟಿಂಗ್,ಹಿಂಸಾಚಾರ, ಇಂತಹ ವೆಬ್ಸೈಟುಗಳ ಬ್ಲಾಕಿಂಗ್ ಮಾಡಬಹುದು.
- ಯಾವ ಸಮಯದಲ್ಲಿ ಈ ರೀತಿಯ ಬ್ಲಾಕಿಂಗ್ ಮಾಡಬಹುದು ಎಂದು ಟೈಮ್ ಸೆಟ್ ಮಾಡಬಹುದು.
- ಮಕ್ಕಳ ವಯಸ್ಸಿಗೆ ತಕ್ಕಂತೆ ಪ್ರಿ-ಸೆಟ್ ಮಾಡಬಹುದು.
- ಎಲ್ಲಾ ರೀತಿಯ ಸರ್ಚ್ ಎಂಜಿನ್ ಗಳಲ್ಲೂ, ನೀವು ಬ್ಲಾಕ್ ಮಾಡಿರುವ ವೆಬ್ಸೈಟುಗಳು ಬರದಂತೆ ತಡೆಯುತ್ತದೆ.
- “always allow” and “always block” ಆಪ್ಶನ್ ಲಭ್ಯ.
- ಇಂಟರ್ನೆಟ್ ಚಟುವಟಿಕೆಯ ಸಂಪೂರ್ಣ ವರದಿ ಲಭ್ಯ.
- ಇಂಟರ್ನೆಟ್ ಚತುರ ಮಕ್ಕಳಿಗೂ ಬ್ಲಾಕ್ ಅನ್ನು ತೆಗೆಯದ ಹಾಗೆ ಮಾಡುವಷ್ಟು ಸೇಫ್.
ವಿಂಡೋಸ್ ಕಂಪ್ಯೂಟರಿಗೆ ಡೌನ್ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ
ನಿಮ್ಮ ಆಂಡ್ರಾಯ್ಡ್ ಸ್ಮಾರ್ಟ್ ಫೋನ್ ಹಾಗು ಟ್ಯಾಬ್ಲೆಟ್ ಗಳಿಗೆ ಡೌನ್ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ


Click it and Unblock the Notifications








