ಕಾರ್ಬನ್ ಆಂಡ್ರಾಯ್ಡ್ 4.0 ಟ್ಯಾಬ್ಲೆಟ್ ಬರಲಿದೆ

By Varun
|
ಕಾರ್ಬನ್ ಆಂಡ್ರಾಯ್ಡ್ 4.0 ಟ್ಯಾಬ್ಲೆಟ್ ಬರಲಿದೆ

ಮೈಕ್ರೋ ಮ್ಯಾಕ್ಸ್ 2 ವಾರಗಳಿಗೂ ಮುನ್ನ ಆಂಡ್ರಾಯ್ಡ್ ಆಧಾರಿತ ಟ್ಯಾಬ್ಲೆಟ್ ಒಂದನ್ನು ಬಿಡುಗಡೆ ಮಾಡಿತ್ತು. ಚೆನ್ನಾಗಿ ಪ್ರಚಾರ ಪಡೆದುಕೊಂಡ ಈ ಟ್ಯಾಬ್ಲೆಟ್ ಸಾಕಷ್ಟು ಒಳ್ಳೆಯ ಮಾರಾಟ ಕಂಡಿದೆ. ಇದರಿಂದ ಉತ್ತೇಜನಗೊಂಡಿರುವ ಭಾರತದ ಮತ್ತೊಂದು ಮೊಬೈಲ್ ಉತ್ಪಾದಕ ಕಾರ್ಬನ್, ತನ್ನದೇ ಆದ 7 ಇಂಚ್ ಟ್ಯಾಬ್ಲೆಟ್ ಒಂದನ್ನು ಇನ್ನು ಹತ್ತು ದಿನಗಳಲ್ಲಿ ಬಿಡುಗಡೆ ಮಾಡಲಿದೆ.

ಸ್ಮಾರ್ಟ್ ಟ್ಯಾಬ್ A1 ಹೆಸರಿನ ಈ ಟ್ಯಾಬ್ಲೆಟ್ ಅನ್ನು ಸದ್ಯಕ್ಕೆ ಐಪಿಎಲ್ ನ ಕಾರ್ಬನ್ ಕಮಾಲ್ ಕ್ಯಾಚ್ ನಲ್ಲಿ ಗೆದ್ದವರಿಗೆ ನೀಡಲಾಗುತ್ತಿದ್ದು ಕಂಪನಿಯ ಪ್ರಕಾರ ನೀವುಈಗ ಪ್ರೀ ಬುಕ್ ಮಾಡಬಹುದಾಗಿದೆ.

ಬುಕ್ ಮಾಡುವ ಮುನ್ನ ನೀವು ಸ್ಮಾರ್ಟ್ ಟ್ಯಾಬ್ A1 ನ ಸ್ಪೆಸಿಫಿಕೇಶನ್ ಗಳ ಬಗ್ಗೆ ತಿಳಿದುಕೊಳ್ಳೋಣ:

  • 7 ಇಂಚುಕೆಪಾಸಿಟಿವ್ ಸ್ಕ್ರೀನ್

  • ಆಂಡ್ರಾಯ್ಡ್ 4.0.3 ಐಸ್ಕ್ರೀಮ್ ಸ್ಯಾಂಡ್ವಿಚ್ (ಐಸಿಎಸ್)

  • 1.2 GHz ಪ್ರೊಸೆಸರ್ ಮತ್ತು 3700 mAh ಬ್ಯಾಟರಿ

  • ಮಿನಿ HDMI ಪೋರ್ಟ್ (TV ಗೆ ಸಂಪರ್ಕ ಕಲ್ಪಿಸುವ)

  • 32 GB ವರೆಗೆ ವಿಸ್ತರಿಸಬಹುದಾದ ಮೈಕ್ರೋ SD ಕಾರ್ಡ್ ಸ್ಲಾಟ್

  • 3G USB ಡಾoಗಲ್ ರೀತಿ ಬಳಸಬಹುದಾದ USB ಪೋರ್ಟ್

  • 2 ಮೆಗಾಪಿಕ್ಸೆಲ್ ಕ್ಯಾಮೆರಾ

  • 3 ಡಿ ಗ್ರಾವಿಟಿ ಸೆನ್ಸರ್ ಇರುವ ಗೇಮ್ಸ್

ಸದ್ಯಕ್ಕೆ ಇದರ ಬೆಲೆ ನಿಗದಿಪಡಿಸದ ಕಂಪನಿ, ಈ ಟ್ಯಾಬ್ಲೆಟ್ ಅನ್ನು ಅಂದಾಜು 7,000 ರೂಪಾಯಿಗೆ ಹೊರತರಬಹುದು.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X