ಹೊಸ ವರ್ಷಕ್ಕೆ ಕಾರ್ಬನ್‌ನಿಂದ ಮತ್ತೊಂದು ಟ್ಯಾಬ್‌ ಬಿಡುಗಡೆ

Posted By: Staff

ಈಗಂತೂ ಟೆಕ್‌ ಮಾರುಕಟ್ಟೆಯಲ್ಲಿ ಆಂಡ್ರಾಯ್ಡ್ ಜಮಾನ. ಎಲ್ಲಾ ಕಂಪೆನಿಗಳು ಆಂಡ್ರಾಯ್ಡ್ ಆಧಾರಿತ ಸ್ಮಾರ್ಟ್ ಫೋನ್ ಬಿಡುಗಡೆ ಮಾಡುತ್ತಿದೆ. ಈಗ ನಮ್ಮ ಭಾರತದ ಕಂಪೆನಿಗಳು ಹಿಂದೆ ಬಿದ್ದಿಲ್ಲ.ಕಾರ್ಬನ್ ಕಂಪೆನಿ ಈಗ ಮತ್ತೊಂದು ಆಂಡ್ರಾಯ್ಡ್ ಆಧಾರಿತ ಹೊಸ ಟ್ಯಾಬ್ಲೇಟ್‌ನ್ನು ಜನವರಿಯಲ್ಲಿ ಬಿಡುಗಡೆ ಮಾಡಲಿದೆ.

ಕಾರ್ಬನ್‌ ಕಳೆದ ವಾರವಷ್ಟೆ ಈ ಟ್ಯಾಬ್ಲೆಟ್ನ ತಯಾರಿಸಿದ್ದು, ಈ ಹೊಸ ಟ್ಯಾಬ್ಲೆಟ್‌ 10 ಇಂಚು ಉದ್ದವಿದೆ. ಅಲ್ಲದೇ ಗೂಗಲ್‌ನ ಹೊಸ ಆಂಡ್ರಾಯ್ಡ್ 4.1 ಜೆಲ್ಲಿ ಬೀನ್‌ ಆಪರೆಟಿಂಗ್‌ ಸಿಸ್ಟಂ ಒಳಗೊಂಡಿದೆ. ಈ ಹೊಸ ಟ್ಯಾಬ್‌ಗೆಕಾರ್ಬನ್‌ ಟ್ಯಾಬ್ 8 ವೆಲೋಕ್ಸ್‌ ಎಂದು ಹೆಸರಿಡಲಾಗಿದೆ.

ಈ ಟ್ಯಾಬ್ಲೆಟ್ ಬಿಡುಗಡೆಯ ಸುದ್ದಿಯನ್ನು ಮೊದಲು ಪ್ರಕಟಿಸಿದ್ದು ಮೊಬಿಜಿಯನ್‌ ವೆಬ್‌ಸೈಟ್‌. ಈ ವೆಬ್‌ಸೈಟ್‌ನಲ್ಲಿ 6,799. ರೂಪಾಯಿಗೆ ಖರೀದಿಸಬಹುದು ಎಂದು ಪ್ರಕಟಸಿತ್ತು.ಆದರೆ ನಿಮ್ಮ ಗಿಜ್ಬಟ್‌ ಮತ್ತೊಂದು ಪ್ರಸಿದ್ದ ಅನಲೈನ್‌ ರಿಟಲೇರ್ ಸಾಹೋಲಿಕನ್ನು ಸಂಪರ್ಕಿಸಿದಾಗ ಕಾರ್ಬನ್ ಹೊಸ ಟ್ಯಾಬ್‌ 7,999. ರೂಪಾಯಲ್ಲಿ ಮಾರುಕಟ್ಟೆಗೆ ಬರಲಿದೆ ಎಂದು ಹೇಳಿದೆ.

ಈ ಗೊಂದಲವನ್ನು ನಿವಾರಣೆ ಮಾಡುವುದಕ್ಕೆ ಗಿಜ್ಬಟ್‌ ಕಾರ್ಬನ್‌ ಕಂಪೆನಿಯನ್ನು ಮಾರುಕಟ್ಟೆ ಅಧಿಕಾರಿಯನ್ನು ಸಂಪರ್ಕಿಸಿದಾಗ "ಕಾರ್ಬನ್‌ ಹೊಸ ಟ್ಯಾಬ್ ಡ್ಯೂಪಲ್ ಸಿರೀಸ್ ಹೊಂದಿದ್ದು ಮುಂದಿನ ಜನವರಿಯಲ್ಲಿ ಬಿಡುಗಡೆ ಮಾಡಲಾಗುವುದು. ಅಲ್ಲದೇ ಈಗಾಗಲೇ ಈ ಟ್ಯಾಬ್ಲೇಟ್ ಆನಲೈನ್‌ನಲ್ಲಿ ಖರೀದಿಸಬಹುದು .ಆದರೇ ಕಂಪೆನಿ ಈ ಹೊಸ ಟ್ಯಾಬ್ಲೇಟನ್ನು ಅಧಿಕೃತವಾಗಿ 2013 ಜನವರಿಯಲ್ಲಿ ಬಿಡುಗಡೆ ಮಾಡಲಿದ್ದೇವೆ "ಎಂದು ತಿಳಿಸಿದ್ದಾರೆ.

ಹೊಸ ವರ್ಷಕ್ಕೆ ಕಾರ್ಬನ್‌ನಿಂದ ಮತ್ತೊಂದು ಟ್ಯಾಬ್‌ ಬಿಡುಗಡೆ

ಈ ಹೊಸ ಟ್ಯಾಬ್ಲೇಟ್‌ನ ವಿಶೇಷತೆ ಬಗ್ಗೆ ಹೇಳುವುದಿದ್ರೆ ಟ್ಯಾಬ್ 8 ವೆಲೋಕ್ಸ್‌ ಆಂಡ್ರಾಯ್ಡ್‌ 4.1 ಜೆಲ್ಲಿ ಬೀನ್‌ ಆಧಾರಿತ ಆಪರೆಟಿಂಗ್‌ ಸಿಸ್ಟಮ್‌ ಹೊಂದಿದೆ. 8 ಇಂಚು ಉದ್ದದ 1024 x 768 ಪಿಕ್ಸಲ್ ಇರುವಂತಹ ದರ್ಶಕ ಹೊಂದಿದೆ. 1.5 GHz ಡ್ಯೂಯಲ್ ಕೋರ್ ಕ್ವಾರ್ಟೆಕ್ಸ್‌ ಪ್ರೊಸೆಸರ್‌ನೊಂದಿಗೆ 1 GB RAM,1.51 GB ಆಂತರಿಕ ಮೆಮೊರಿ ಇದ್ದು 32 GB.ವಿಸ್ತರಿಸಬಹುದಾಗಿದೆ.

ಈ ಟ್ಯಾಬ್‌ಗೆ 3 MP ಕ್ಯಾಮೆರಾವಿದ್ದು ಎದರುಗಡೆ ವಿಜಿಎ ಕ್ಯಾಮೆರಾ ನೀಡಿದ್ದಾರೆ. ಅಲ್ಲದೇ ಕನೆಕ್ಟಿವಿಟಿ ಸಂಬಂಧಿಸಿದಂತೆ 3 ಜಿ ಸಂಪರ್ಕ Wi-Fi, ಬ್ಲೂಟೂತ್ , HDMI, USB ಪೊರ್ಟ್ ನೀಡಲಾಗಿದೆ.ಅಲ್ಲದೇ ಶಕ್ತಿಶಾಲಿ 4500 mAh ಬ್ಯಾಟರಿ ಸೌಲಭ್ಯ ನೀಡಲಾಗಿದ್ದು 7 ಗಂಟೆಗಳ ಕಾಲ ಇಂಟರ್ನೆಟ್ ಸರ್ಫ್ ಮಾಡಬಹುದು, 8 ಗಂಟೆಗಳ ಕಾಲ ವಿಡಿಯೋ, 25 ಗಂಟೆಗಳ ನಿರಂತರವಾಗಿ ಮ್ಯೂಸಿಕ್‌ ಕೇಳಿ ಆನಂದಿಸಬಹುದು.

ಇಷ್ಟೆ ಅಲ್ಲದೇ ಕಾರ್ಬನ್ ಗ್ರಾಹಕರಿಗಾಗಿ ಹೊಸ ವರ್ಷದ ಕೊಡುಗೆಯಾಗಿ ಆಂಡ್ರಾಯ್ಡ್ ಸಿಎಸ್ ಆಧಾರಿತ 5.9 ಇಂಚಿನ ಕಾರ್ಬನ್ A30 ಸ್ಮಾರ್ಟ್ ಫೋನನ್ನು ಡಿ. 28ರಂದು ಬಿಡುಗಡೆ ಮಾಡಲಿದೆ. ಹೊಸ ಸ್ಮಾರ್ಟ್ ಫೋನ್‌ ಕಾರ್ಬನ್ A30 ಈಗಾಗಲೇ ಆನ್‌ಲೈನ್‌ನಲ್ಲಿ ಲಭ್ಯವಿದ್ದು, ಸಾಹೋಲಿಕ್‌ನಲ್ಲಿ 10,990 ನೀಡಿ ನೀವು ಬುಕ್‌ ಮಾಡಬಹುದು.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot