Subscribe to Gizbot

ಗೂಗಲ್ ಟ್ಯಾಬ್ಲೆಟ್ ಗೆ ಸವಾಲೆಸೆದ ಕಾರ್ಬನ್

Posted By: Varun
ಗೂಗಲ್ ಟ್ಯಾಬ್ಲೆಟ್ ಗೆ ಸವಾಲೆಸೆದ ಕಾರ್ಬನ್

ಗೂಗಲ್ ಟ್ಯಾಬ್ಲೆಟ್ ಕಳೆದ ವಾರ ಬಿಡುಗಡೆಯಾಗಿ ಈಗಾಗಲೇ ಅಮೇರಿಕಾ, ಕೆನಡಾ ಹಾಗು ಆಸ್ಟ್ರೇಲಿಯಾ ದೇಶಗಳಲ್ಲಿ ಆನ್ಲೈನ್ ಮೂಲಕ ಮಾರಾಟವಾಗುತ್ತಿರುವ ಸುದ್ದಿ ನಿಮಗೆಲ್ಲಾ ಗೊತ್ತು. ಆಂಡ್ರಾಯ್ಡ್ ಜೆಲ್ಲಿ ಬೀನ್ ತಂತ್ರಾಂಶವಿರುವ ಮೊದಲ ಟ್ಯಾಬ್ಲೆಟ್ ಇದಾಗಿರುವುದರಿಂದ ಹಾಗು 11 ಸಾವಿರ ರೂಪಾಯಿಗೆ ಬರುವುದರಿಂದ ಇದನ್ನು ಕೊಳ್ಳಲು ಇಲ್ಲಿನ ಗ್ರಾಹಕರು ಸಾಕಷ್ಟು ಕುತೂಹಲದಿಂದ ಇದ್ದಾರೆ.

ನೆಕ್ಸಸ್ 7 ಟ್ಯಾಬ್ಲೆಟ್ ಬರುವುದು ಸೆಪ್ಟೆಂಬರ್ ಆಗುವುದರಿಂದಬಹಳಷ್ಟು ಜನರಿಗೆ ನಿರಾಸೆಯಾಗಿತ್ತು. ಆದರೆ ನೆಕ್ಸಸ್ 7 ಗೂ ಮುನ್ನವೆ ಆಂಡ್ರಾಯ್ಡ್ ಜೆಲ್ಲಿ ಬೀನ್ ಇರುವ ಟ್ಯಾಬ್ಲೆಟ್ ಅನ್ನುಭಾರತದಲ್ಲಿ ಬಿಡುಗಡೆ ಮಾಡಲು ಯೋಜಿಸಿದೆ, ಹೆಸರಾಂತ ಮೊಬೈಲ್ ಹಾಗು ಟ್ಯಾಬ್ಲೆಟ್ ಉತ್ಪಾದಕ- ಕಾರ್ಬನ್.

ವಿಶೇಷವೇನೆಂದರೆ ಈ ಸ್ಮಾರ್ಟ್ ಟ್ಯಾಬ್ 4 ಹನ್ನೊಂದು ಸಾವಿರ ರೂಪಾಯಿಗೆ ಬರಲಿದ್ದು, ನೆಕ್ಸಸ್ 7 ನಂತಲ್ಲದೆ, 9.7 ಇಂಚ್ ಸ್ಕ್ರೀನ್ (ತರಚು ನಿರೋಧಕ ಗೊರಿಲ್ಲ ಗ್ಲಾಸ್) ಇರಲಿದೆ. ಆಗಸ್ಟ್ ತಿಂಗಳಲ್ಲಿ ಬರಲಿರುವ ಈ ಟ್ಯಾಬ್ಲೆಟ್ 1.5 GHz ಪ್ರೋಸೆಸರ್ ಹೊಂದಲಿದ್ದು, 3G ಸಂಪರ್ಕ (USB ಡಾಂಗಲ್ ಮೂಲಕ), ವೈಫೈ ಹಾಗು ಬ್ಲೂಟೂತ್ ಸಂಪರ್ಕ ಕೂಡ ಇರಲಿದೆಯಂತೆ.

ಸಿಮ್ ಸ್ಲಾಟ್ ಇರುವ ಸ್ಮಾರ್ಟ್ ಟ್ಯಾಬ್ 4 ಅನ್ನು ಕೂಡ ಮುಂಬರುವ ದಿನಗಳಲ್ಲಿ ಬಿಡುಗಡೆ ಮಾಡಲಿದೆ ಎಂದು ಕಂಪನಿಯ ಮೂಲಗಳು ತಿಳಿಸಿವೆ.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot