ಪುಟ್ಟ ಮಕ್ಕಳಿಗೆ ಇಷ್ಟವಾಗುವ ಚಂದದ ಗಣಕ

Posted By: Staff
ಪುಟ್ಟ ಮಕ್ಕಳಿಗೆ ಇಷ್ಟವಾಗುವ ಚಂದದ ಗಣಕ
ಮಕ್ಕಳಿಗೆ ಕಂಪ್ಯೂಟರ್ ಅಂದ್ರೆ ಇಷ್ಟ. ಹಾಗಂತ ಅವರಿಗೆ ಕಂಪ್ಯೂಟರ್, ಲ್ಯಾಪ್ ಟಾಪ್ ತೆಗೆದುಕೊಟ್ಟರೆ ಪ್ರಯೋಜನವಿಲ್ಲ. ಮಕ್ಕಳಿಗಾಗಿಯೇ ವಿಶೇಷ ಕಂಪ್ಯೂಟರ್ ಇದ್ದರೆ ಚೆನ್ನಾಗಿತ್ತು ಎಂದು ಯೋಚಿಸುವರಿಗೆ ಸವಿ ಸುದ್ದಿ ಇಲ್ಲಿದೆ. ಮಕ್ಕಳ ಶಿಕ್ಷಣ ಮತ್ತು ಮನರಂಜನೆ ಉದ್ದೇಶಕ್ಕಾಗಿ ನೂತನ ಟ್ಯಾಬ್ಲೆಟ್ ಗಣಕವನ್ನು ಕಂಪನಿಯೊಂದು ಪರಿಚಯಿಸಿದೆ.

ಒನ್ ಲ್ಯಾಪ್ ಟಾಪ್ ಪರ್ ಚೈಲ್ಡ್ ಫೌಂಡೆಷನ್(ಒಎಲ್ಪಿಸಿ) ಹೊರತಂದ ನೂತನ ಕಂಪ್ಯೂಟರ್ ಹೆಸರು OLPC XO 3.0. ಈ ನೂತನ ಮಾಡೆಲ್ 8 ಇಂಚಿನ ಡಿಸ್ ಪ್ಲೇ ಹೊಂದಿದೆ.  ಇದರ ದರವೂ ಕಡಿಮೆಯಿದೆ. ಇದರಲ್ಲಿರುವ ಪ್ರಮುಖ ಫೀಚರುಗಳ ಪಟ್ಟಿ ಇಲ್ಲಿದೆ.

ಡಿಸ್ ಪ್ಲೇ

* ಡಿಸ್ ಪ್ಲೇ ಮಾದರಿ: ಪಿಕ್ಸೆಲ್ ಕ್ಯುಐ ಟಿಎಫ್ಟಿ ಡಿಸ್ ಪ್ಲೇ

* ಗಾತ್ರ: ಎಂಟು ಇಂಚು; 1024 x 768 ಪಿಕ್ಸೆಲ್ ರೆಸಲ್ಯೂಷನ್

ಸಂಗ್ರಹ ಸಾಮರ್ಥ್ಯ

*ಆಂತರಿಕ ಮೆಮೊರಿ: 512 ಎಂಬಿ RAM ಮತ್ತು 4 ಜಿಬಿ ಮೆಮೊರಿ

ಹಾರ್ಡ್ ವೇರ್

* ಯುಎಸ್ ಬಿ ಪೋರ್ಟ್, ಯುಎಸ್ ಬಿ, ಮೈಕ್ರೊ ಯುಎಸ್ಬಿ

* ಜಾಕ್ಸ್: ಸ್ಟಾಂಡರ್ಡ್ ಹೆಡ್ ಫೋನ್ ಮತ್ತು ಮೈಕ್ರೊ ಫೋನ್ ಜಾಕ್

* ಚಿಪ್ ಸೆಟ್: ಅರ್ಮದಾ ಪಿಎಕ್ಸ್ಎ618

ಪ್ರಮುಖ ಫೀಚರುಗಳು

* ಸಾಫ್ಟ್ ವೇರ್: ಆಂಡ್ರಾಯ್ಡ್ ಅಥವಾ ಸುಗರ್ ಮೊಬೈಲ್ ಅಪರೇಟಿಂಗ್ ಸಿಸ್ಟಮ್

* ಮಕ್ಕಳಿಗಾಗಿ ಶೈಕ್ಷಣಿಕ ಮತ್ತು ಫನ್ ಅಪ್ಲಿಕೇಷನುಗಳು

* ಕರೆಂಟ್: ಎಸಿ ಅಡಾಪ್ಟರ್ ಅಥವಾ ಹ್ಯಾಂಡ್ ಕ್ರಾಂಕ್, ಸೊಲರ್ ಚಾರ್ಜಿಂಗ್

* ದರ: 5,500 ರುಪಾಯಿ.

ಕಂಪನಿಯು ನೂತನ ಪುಟ್ಟ ನೋಟ್ ಬುಕ್ಕಿನ ಎಲ್ಲಾ ವಿಶೇಷತೆಗಳನ್ನು ಬಹಿರಂಗಪಡಿಸಿಲ್ಲ. ಆದರೂ ಸದ್ಯ ಲಭ್ಯವಿರುವ ಮಾಹಿತಿಗಳು ಸಾಕಷ್ಟು ಇಂಟ್ರೆಸ್ಟಿಂಗ್ ಆಗಿವೆ. ಇದರ ದರ ಕೇವಲ 5,500 ರುಪಾಯಿ ಆಗಿರುವುದರಿಂದ ಮಕ್ಕಳಿಗೆ ಖರೀದಿಸಿಕೊಡಬಹುದು.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot