Subscribe to Gizbot

ಕೋಬಿಯನ್‌ ಮರ್ಕ್ಯುರಿ Mಟ್ಯಾಬ್‌ 7 ಬಿಡುಗಡೆ

Posted By: Vijeth

ಕೋಬಿಯನ್‌ ಮರ್ಕ್ಯುರಿ Mಟ್ಯಾಬ್‌ 7 ಬಿಡುಗಡೆ

ಭಾರತೀಯ ಮಾರುಕಟ್ಟೆಯಲ್ಲಿ ಬಜೆಟ್‌ ಸ್ನೇಹಿ ಆಂಡ್ರಾಯ್ಡ್‌ ಐಸಿಎಸ್‌ ಟ್ಯಾಬ್ಲೆಟ್‌ಗಳಿಗೆ ಉತ್ತಮ ಬೇಡಿಕೆ ಹೊಂದಿರುವ ಹಿನ್ನಲೆಯಲ್ಲಿ ಭಾರತೀಯ ಮೂಲದ ಕಂಪ್ಯೂಟರ್‌ ಪರಿಕರಗಳ ತಯಾರಕರುಗಳಾದ ಕೋಬಿಯನ್‌ ತನ್ನಯ ಬ್ರಂಡ್‌ ಹೆಸರಾದ ಮರ್ಕ್ಯುರಿ ಹೆಸರಿನಲ್ಲಿ ನೂತನ ಆಂಡ್ರಾಯ್ಡ್ ಚಾಲಿತ ಮರ್ಕ್ಯುರಿ ಎಮ್‌ಟ್ಯಾಬ್‌ ಟ್ಯಾಬ್ಲೆಟ್‌ ಅನ್ನು 6,499 ರೂಗಳ ಕೈಗೆಟಕುವ ದರದಲ್ಲಿ ಬಿಡುಗಡೆ ಮಾಡಿದೆ.

ಅಂದಹಾಗೆ ಕೋಬಿಯನ್‌ನ ನೂತನ ಬಜೆಟ್ ಸ್ನೇಹಿ ಟ್ಯಾಬ್ಲೆಟ್‌ನಲ್ಲಿ ಏನೆಲ್ಲಾ ಫೀಚರ್ಸ್‌ಗಳಿವೆ ಎಂಬುದನ್ನು ಗಿಜ್ಬಾಟ್‌ ಓದುಗರಿಗಾಗಿ ತರಲಾಗಿದೆ ಒಮ್ಮೆ ಓದಿ ನೋಡಿ.

ವಿಶೇಷತೆ

ದರ್ಶಕ: ಎಮ್‌ಟ್ಯಾಬ್‌ 7ನಲ್ಲಿ 7 ಇಂಚಿನ ಟಚ್‌ಸ್ಕ್ರೀನ್‌ ನೊಂದಿಗೆ 800 x 480 ಪಿಕ್ಸೆಲ್‌ ರೆಸೆಲ್ಯೂಷನ್‌ ಹೊಂದಿದೆ.

ಪ್ರೊಸೆಸರ್‌: 1.2GHz ಸಿಂಗಲ್‌ ಕೋರ್‌ ARM ಕಾರ್ಟೆಕ್ಸ್‌ A8 ಪ್ರೊಸೆಸರ್‌ ಹೊಂದಿದೆ.

ಆಪರೇಟಿಂಗ್‌ ಸಿಸ್ಟಂ: ಬಜೆಟ್‌ ಟ್ಯಾಬ್ಲೆಟ್‌ ಆದ್ದರಿಂದ ಎಮ್‌ಟ್ಯಾಬ್‌ 7 ಆಂಡ್ರಾಯ್ಡ್‌ 4.0 ಐಸಿಎಸ್‌ ಆಪರೇಟಿಂಗ್‌ ಸಿಸ್ಟಂ ಒಳಗೊಂಡಿದೆ.

ಸ್ಟೋರೇಜ್‌: ಟ್ಯಾಬ್ಲೆಟ್‌ನಲ್ಲಿ 4GB ಆಂತರಿಕ ಮೆಮೊರಿ, 512MB RAM ಹಾಗೂ ಮೈಕ್ರೋ ಎಸ್‌ಡಿ ಕಾರ್ಡ್‌ ಸ್ಲಾಟ್‌ ಮೂಲಕ 32GB ವರೆಗು ಮೆಮೊರಿ ವಿಸ್ತರಿಸ ಬಹುದಾಗಿದೆ.

ಕ್ಯಾಮೆರಾ: ಎಮ್‌ಟ್ಯಾಬ್‌ 7 ನಲ್ಲಿ ವಿಡಿಯೋ ಕರೆಗಾಗಿ 0.3MP ಕ್ಯಾಮೆರಾ ಇದೆ.

ಕನೆಕ್ಟಿವಿಟಿ: ಡಾಂಗಲ್‌ ಮೂಲಕ 3G , Wi-Fi 802.11 a/b/g/n, HDMI ಪೋರ್ಟ್‌ ಹಾಗೂ ಮೈಕ್ರೋ USB 2.0 ಹೊಂದಿದೆ.

ಬ್ಯಾಟರಿ: ಸಂಸ್ಥೆಯ ಪ್ರಕಾರ ನೂತನ ಟ್ಯಾಬ್ಲೆಟ್‌ ಹೆಚ್ಇನ ಬ್ಯಾಟರೀ ಕ್ಷಮತೆಯನ್ನು ಹೊಂದಿದೆ ಹಾಗೂ ವಿವರಗಳ ಕುರಿತಾಗಿ ಮಾಹಿತಿ ಲಭ್ಯವಿಲ್ಲ.

ಇದಲ್ಲದೆ...

ಮರ್ಕ್ಯುರಿ ಎಮ್‌ಟ್ಯಾಬ್‌ 7 ಅಡೋಬ್‌ ಫ್ಲಾಚ್‌ 11.1 ಗೆ ಬೆಂಬಲಿಸಲಿದ್ದು, ಬಿಲ್ಟ್‌ಇನ್‌ ಸ್ಪೀಕರ್ಸ್‌ ಹಾಗೂ ಫುಲ್‌ ಹೆಚ್‌ಡಿ ಮ್ಯೂಸಿಕ್‌ ಹೊಂದಿದೆ.

ಬೆಲೆ ಹಾಗೂ ಲಭ್ಯತೆ

ಬೆಲೆ ವಿಚಾರದಲ್ಲಿ ಕೋಬಿಯನ್‌ ಮರ್ಕ್ಯುರಿ ಎಮ್‌ಟ್ಯಾಬ್‌ 7 ಭಾರತದಲ್ಲಿ 6,499 ರೂ. ಬೆಲೆಗೆ 1 ವರ್ಷದ ವ್ಯಾರಂಟಿಯೊಂದಿಗೆ ಲಭ್ಯವಿದೆ.

Read In English...

ಇಕೆನ್‌(EKEN) ನಿಂದ ಬಜೆಟ್‌ ಟ್ಯಾಬ್ಲೆಟ್‌ ಬಿಡುಗಡೆ

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot