ಭಾರತದಲ್ಲಿ ನಿಮ್ಮ ಬಜೆಟ್ ನಲ್ಲೇ ಲಭ್ಯವಿರುವ ಬೆಸ್ಟ್ ಟಚ್ ಸ್ಕ್ರೀನ್ ಲ್ಯಾಪ್ ಟಾಪ್

By Gizbot Bureau
|

ಹೊಸ ಲ್ಯಾಪ್ ಟಾಪ್ ಖರೀದಿಸುವುದಕ್ಕೆ ಪ್ಲಾನ್ ಮಾಡುತ್ತಿದ್ದೀರಾ? ಹಾಗಾದ್ರೆ ನಿಮ್ಮ ಮಾಹಿತಿಗಾಗಿ ಸರಿಯಾದ ಜಾಗದಲ್ಲೇ ಓದುತ್ತಿದ್ದಿರ. ಹೌದು ನಾವಿಲ್ಲಿ ಕೆಲವು ಬೆಸ್ಟ್ ಟಚ್ ಸ್ಕ್ರೀನ್ ವ್ಯವಸ್ಥೆ ಇರುವ ಕೆಲವು ಲ್ಯಾಪ್ ಟಾಪ್ ಗಳನ್ನು ಪಟ್ಟಿ ಮಾಡಿದ್ದೇವೆ.

ಬೆಸ್ಟ್ ಟಚ್ ಸ್ಕ್ರೀನ್ ಲ್ಯಾಪ್ ಟಾಪ್

ಎಲ್ಲಾ ಬೆಸ್ಟ್ ಟಚ್ ಸ್ಕ್ರೀನ್ ಲ್ಯಾಪ್ ಟಾಪ್ ಗಳು 40,000 ರುಪಾಯಿ ಒಳಗೆ ಲಭ್ಯವಿರುತ್ತದೆ. ಬೇರೆಬೇರೆ ಬ್ರ್ಯಾಂಡಿನ ಕೆಲವು ಲ್ಯಾಪ್ ಟಾಪ್ ಗಳ ಪಟ್ಟಿಯನ್ನು ನಾವಿಲ್ಲಿ ನಿಮಗೆ ನೀಡುತ್ತಿದ್ದೇವೆ.

ಲೆನೋವಾ ಐಡಿಯಾ ಪ್ಯಾಡ್ C340 (81N60042IN) ಲ್ಯಾಪ್ ಟಾಪ್

ಲೆನೋವಾ ಐಡಿಯಾ ಪ್ಯಾಡ್ C340 (81N60042IN) ಲ್ಯಾಪ್ ಟಾಪ್

ಲೆನೋವಾ ಐಡಿಯಾಪ್ಯಾಡ್ C340 (81N60042IN) ಲ್ಯಾಪ್ ಟಾಪ್ ನಿಮಗೆ 39,990 ರುಪಾಯಿ ಬೆಲೆಗೆ ಸಿಗುತ್ತದೆ. ಇದರಲ್ಲಿ AMD Ryzen 3 3200U CPU ಜೊತೆಗೆ 4GB RAM ಮತ್ತು 256GB SSD ಇರುತ್ತದೆ. ಇದು 14-ಇಂಚಿನ IPS LCD ಟಚ್ ಸ್ಕ್ರೀನ್ ಜೊತೆಗೆ FHD ರೆಸಲ್ಯೂಷನ್ ಇರುತ್ತದೆ. ಹಾಗಾಗಿ ಪೋರ್ಟೇಬಲ್ ಮತ್ತು ಕೈಗೆಟುಕುವ ಬೆಲೆಯ ಟಚ್ ಸ್ಕ್ರೀನ್ ವ್ಯವಸ್ಥೆ ಲ್ಯಾಪ್ ಟಾಪ್ ನಲ್ಲಿ ಇರುತ್ತದೆ.

HP ಪೆವಿಲಿಯನ್ ಟಚ್ ಸ್ಮಾರ್ಟ್ 14 x360 14-dh0107tu

HP ಪೆವಿಲಿಯನ್ ಟಚ್ ಸ್ಮಾರ್ಟ್ 14 x360 14-dh0107tu

HP ಪೆವಿಲಿಯನ್ ಟಚ್ ಸ್ಮಾರ್ಟ್ 14 x360 14-dh0107tu ಲ್ಯಾಪ್ ಟಾಪಿನ ಬೆಲೆ 40,000 ಮತ್ತು ಇದು 8th ನೇ ಜನರೇಷನ್ನಿನ ಇಂಟೆಲ್ ಕೋರ್ ಐ3 ಪ್ರೊಸೆಸರ್ ಜೊತೆಗೆ 4GB RAM ಮತ್ತು 256GB SSD ಆಧಾರಿತ ಸ್ಟೊರೇಜ್ ವ್ಯವಸ್ಥೆಯನ್ನು ಹೊಂದಿದೆ. ಈ ಮಾಡೆಲ್ 10 ಇಂಚಿನ ಟಚ್ ಸ್ಕ್ರೀನ್ ಡಿಸ್ಪ್ಲೇ 1920 x 1080p ರೆಸಲ್ಯೂಷನ್ ನ್ನು ಹೊಂದಿದೆ.

ಮೈಕ್ರೋ ಸಾಫ್ಟ್ ಸರ್ಫೇಸ್ ಗೋ (MHN-00015) ಲ್ಯಾಪ್ ಟಾಪ್

ಮೈಕ್ರೋ ಸಾಫ್ಟ್ ಸರ್ಫೇಸ್ ಗೋ (MHN-00015) ಲ್ಯಾಪ್ ಟಾಪ್

ಮೈಕ್ರೋ ಸಾಫ್ಟ್ ಸರ್ಫೇಸ್ ಗೋ (MHN-00015) ಲ್ಯಾಪ್ ಟಾಪ್ ಇಂಟೆಲ್ ಪ್ರೀಮಿಯಂ ಗೋಲ್ಡ್ ಪ್ರೊಸೆಸರ್ ಜೊತೆಗೆ 4GB RAM ಮತ್ತು 64GB eMMC ಸ್ಟೋರೇಜ್ ವ್ಯವಸ್ಥೆಯನ್ನು ಹೊಂದಿದೆ. ಈ ಮಾಡೆಲ್ ಕಾಂಪ್ಯಾಕ್ಟ್ 10-ಇಂಚಿನ ಟಚ್ ಸ್ಕ್ರೀನ್ ಹೊಂದಿದೆ ಮತ್ತು ಇದರ ಬೆಲೆ 29,990 ರುಪಾಯಿಗಳ. ಇದನ್ನು ಸ್ಟ್ಯಾಂಡ್ ಅಲೋನ್ ಟ್ಯಾಬ್ಲೆಟ್ ನಂತೆ ಇದನ್ನು ಬಳಕೆ ಮಾಡಬಹುದು ಅಥವಾ ಎಕ್ಸ್ಟರ್ನಲ್ ಕೀಬೋರ್ಡ್ ಫೋಲಿಯೋವನ್ನು ಈ ಲ್ಯಾಪ್ ಟಾಪ್ ಗೆ ಕನೆಕ್ಟ್ ಮಾಡಿಕೊಳ್ಳಬಹುದು.

ಡೆಲ್ ಇನ್ಸ್ಪಿರೇಷನ್ 15 3567

ಡೆಲ್ ಇನ್ಸ್ಪಿರೇಷನ್ 15 3567

ಡೆಲ್ ಇನ್ಸ್ಪಿರೇಷನ್ 15 3567 ದೊಡ್ಡ ಟಚ್ ಸ್ಕ್ರೀನ್ ಲ್ಯಾಪ್ ಟಾಪ್ ಆಗಿದೆ ಜೊತೆಗೆ 15.6- ಇಂಚಿನ ಟಚ್ ಸ್ಕ್ರೀನ್ ಡಿಸ್ಪ್ಲೇ ವ್ಯವಸ್ಥೆಯನ್ನು ಹೊಂದಿದೆ. ಇದು 7th ಜನರೇಷನ್ನಿನ ಇಂಟೆಲ್ ಕೋರ್ i3 ಪ್ರೊಸೆಸರ್ ಜೊತೆಗೆ 4GB RAM ಮತ್ತು 1TB HDD ಆಧಾರಿತ ಸ್ಟೋರೇಜ್ ವ್ಯವಸ್ಥೆಯನ್ನು ಹೊಂದಿದೆ.

Best Mobiles in India

English summary
These best touch screen laptops are all priced under Rs. 40,000, making them affordable and almost anyone can buy these devices without buy budget constraints. So here are the top touch screen laptops available in India, which are priced under Rs. 40,000 from various brands.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X