ಲಾವಾ ಆಂಡ್ರಾಯ್ಡ್ 4.0 ಟ್ಯಾಬ್ಲೆಟ್ ಕೇವಲ 5,499 ರೂ

By Varun
|
ಲಾವಾ ಆಂಡ್ರಾಯ್ಡ್ 4.0 ಟ್ಯಾಬ್ಲೆಟ್ ಕೇವಲ 5,499 ರೂ

ಭಾರತದ ಮೊದಲ ಇಂಟೆಲ್ ಪ್ರೋಸೆಸರ್ ಚಾಲಿತ ಸ್ಮಾರ್ಟ್ ಫೋನ್ ಅನ್ನು ಬಿಡುಗಡೆ ಮಾಡಿ ಸುದ್ದಿ ಮಾಡಿದ ಲಾವಾ ಕಂಪನಿ ಅದರ ಯಶಸ್ಸಿನಿಂದ ಪ್ರೇರಣೆಗೊಂಡು ಈಗ ಟ್ಯಾಬ್ಲೆಟ್ ಅನ್ನೂ ಹೊರತಂದಿದ್ದು, E-Tab Z7H ಎಂದು ಹೆಸರಿಡಲಾಗಿದೆ.

ಆಂಡ್ರಾಯ್ಡ್ 4.0 ತಂತ್ರಾಂಶ ಹೊಂದಿರುವ ಈ ಟ್ಯಾಬ್ಲೆಟ್ ನ ಫೀಚರುಗಳು ಈ ರೀತಿ ಇವೆ:

  • 7 ಇಂಚ್ ನ WVGA ಡಿಸ್ಪ್ಲೇ

  • 1.2GHz ಸಿಂಗಲ್ ಕೋರ್ ಕಾರ್ಟೆಕ್ಸ್ A8 ಪ್ರೋಸೆಸರ್

  • 512MB ರಾಮ್

  • ಆಂಡ್ರಾಯ್ಡ್ 4.0 ಐಸ್ ಕ್ರೀಮ್ ಸ್ಯಾಂಡ್ ವಿಚ್ ತಂತ್ರಾಂಶ

  • 0.3 ಮೆಗಾಪಿಕ್ಸೆಲ್ ಕ್ಯಾಮರಾ

  • 4 GB ಆಂತರಿಕ ಮೆಮೊರಿ

  • ಮೈಕ್ರೊ ಕಾರ್ಡ್ ಸ್ಲಾಟ್

  • ವೈಫೈ, ಇಂಟರ್ನೆಟ್ ಸಂಪರ್ಕಕ್ಕೆ USB ಡಾ೦ಗಲ್

ಲಾವಾ ಆಂಡ್ರಾಯ್ಡ್ ಟ್ಯಾಬ್ಲೆಟ್ ಫ್ಲಿಪ್ಕಾರ್ಟ್ ವೆಬ್ಸೈಟ್ ಅಲ್ಲಿ ಡಿಸ್ಕೌಂಟ್ ಬೆಲೆಗೆ ಲಭ್ಯವಿದ್ದು, 5,499 ರೂಪಾಯಿಗೆ ಬರುತ್ತದೆ. ಇದಷ್ಟೇ ಅಲ್ಲದೆ ಮೆಕ್ ಗ್ರಾ ಹಿಲ್ ಪ್ರಕಾಶನದ 4,007 ರೂಪಾಯಿ ಮೌಲ್ಯದ ಇ-ಪುಸ್ತಕ ಹಾಗು 1,250 ರೂಪಾಯಿ ಮೌಲ್ಯದ ಹಾಡುಗಳು ಉಚಿತವಾಗಿ ಬರಲಿದೆ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X