ವಾವ್! ಇಷ್ಟು ಕಡಿಮೆ ಬೆಲೆಗೆ ಅದೂ ಆಂಡ್ರಾಯ್ಡ್ ಟ್ಯಾಬ್ಲೆಟ್

Posted By:
ವಾವ್! ಇಷ್ಟು ಕಡಿಮೆ ಬೆಲೆಗೆ ಅದೂ ಆಂಡ್ರಾಯ್ಡ್ ಟ್ಯಾಬ್ಲೆಟ್

ಆಂಡ್ರಾಯ್ಡ್ ಟ್ಯಾಬ್ಲೆಟ್ ಇತರ ಟ್ಯಾಬ್ಲೆಟ್ ಗಳಿಗಿಂತ ಹೆಚ್ಚು ಗ್ರಾಹಕರನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿದೆ. ಆಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಮ್ ಹೊಂದಿರುವ ಟ್ಯಾಬ್ಲೆಟ್ ನಲ್ಲಿ ಆಂಡ್ರಾಯ್ಡ್ ಅಪ್ಲಿಕೇಶನ್ ಅನ್ನು ಉಚಿತವಾಗಿ ಡೌನ್ ಲೋಡ್ ಮಾಡಬಹುದು ಎಂಬುದು ಇದರ ಪ್ರಮುಖ ಅಕರ್ಷಣೆಯಾಗಿದೆ. ಆಂಡ್ರಾಯ್ಡ್ ಟ್ಯಾಬ್ಲೆಟ್ ಗಳ ಗುಣಮಟ್ಟದ ಬಗ್ಗೆ ಎರಡು ಮಾತಿಲ್ಲವಾದರೂ ಇದರ ಬೆಲೆ ಮಧ್ಯಮ ವರ್ಗದ ಗ್ರಾಹಕರನ್ನು ಸ್ವಲ್ಪ ಯೋಚಿಸುವಂತೆ ಮಾಡುತ್ತದೆ.

ಅದರೆ ಇನ್ನು ಮುಂದೆ ಆಂಡ್ರಾಯ್ಡ್ ಟ್ಯಾಬ್ಲೆಟ್ ಕೊಳ್ಳಲಾಗಲಿಲ್ಲ ಎಂದು ಬೇಸರ ಪಟ್ಟುಕೊಳ್ಳಬೇಕಾಗಿಲ್ಲ. ಏಕೆಂದರೆ ಲಾವಾ ಕಂಪನಿ ತನ್ನ ಆಂಡ್ರಾಯ್ಡ್ ಟ್ಯಾಬ್ಲೆಟ್ ಅನ್ನು ಕೈಗೆಟುಕುವ ದರದಲ್ಲಿ ಮಾರಾಟ ಮಾಡಲು ತೀರ್ಮಾನಿಸಿರುವದರಿಂದ ಮಧ್ಯಮ ವರ್ಗದವರ ಆಂಡ್ರಾಯ್ಡ್ ಟ್ಯಾಬ್ಲೆಟ್ ಕನಸು ನೆನಸಾಗಲಿದೆ. ಲಾವಾ ಟ್ಯಾಬ್ಲೆಟ್ 2012ರ ಫೆಬ್ರವರಿಯಲ್ಲಿ ಮಾರುಕಟ್ಟೆಗೆ ಬರಲಿದ್ದು ಈ ಕೆಳಗಿನ ಲಕ್ಷಣಗಳನ್ನು ಹೊಂದಿರುತ್ತದೆ.

ಲಕ್ಷಣಗಳು:

* ಗೂಗಲ್ ಆಂಡ್ರಾಯ್ಡ್ v2.3 ಜಿಂಜರ್ ಬರ್ಡ್ ಆಪರೇಟಿಂಗ್ ಸಿಸ್ಟಮ್

* 7 ಇಂಚಿನ ಟಚ್ ಸ್ಕ್ರೀನ್

* 1 GHz ಪ್ರೊಸೆಸರ್

* ಸಿಮ್ ಸ್ಲೋಟ್

ಈ ಕಂಪನಿ ಇಂಟಲ್ ಜೊತೆ ಮಾತುಕತೆ ನಡೆಸಿ ಸಾಧ್ಯವಾದರೆ ಇಂಟಲ್ ಪ್ರೊಸೆಸರ್ ಕೂಡ ಇದರಲ್ಲಿ ಅಳವಡಿಸುವ ಸಾಧ್ಯತೆ ಇದೆ. ಈ ಟ್ಯಾಬ್ಲೆಟ್ ಮಾರುಕಟ್ಟೆ ಬೆಲೆ ರು.6000 ಗೆ ಲಭ್ಯವಾಗಲಿದೆ. ಇದರ ಈ ಬೆಲೆಯಿಂದಾಗಿ 2012ರ ಟ್ಯಾಬ್ಲೆಟ್ ಮಾರುಕಟ್ಟೆಯಲ್ಲಿ ಇದೊಂದು ಬಿಸಿ ದೋಸೆಯಾಗಿರುವುದಲ್ಲಿ ಯಾವುದೇ ಸಂಶಯವಿಲ್ಲ.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot