CES 2018 ನಲ್ಲಿ ನೂತನ ಥಿಂಕ್ಪ್ಯಾಡ್ X1 ಟ್ಯಾಬ್ಲೆಟ್,X1 ಕಾರ್ಬನ್, X1 ಯೋಗ ಪ್ರಸ್ತುತಪಡಿಸಿದ ಲೆನೋವೋ

By Tejaswini P G
|

CES 2018 ನಲ್ಲಿ ಲೆನೋವೋ ತನ್ನ ನೂತನ ಥಿಂಕ್ಪ್ಯಾಡ್ X1 ಸರಣಿಯನ್ನು ಪ್ರಸ್ತುತಪಡಿಸಿದೆ. ಹೊಸದಾಗಿ ಪ್ರಕಟವಾಗಿರುವ ಈ ಸರಣಿಯಲ್ಲಿ X1 ಟ್ಯಾಬ್ಲೆಟ್(3rd Gen), X1 ಕಾರ್ಬನ್(6th Gen) ಮತ್ತು X1 ಯೋಗ (3rd Gen) ಲ್ಯಾಪ್ಟಾಪ್ಗಳು ಇವೆ.

CES 2018 ನಲ್ಲಿ ನೂತನ ಥಿಂಕ್ಪ್ಯಾಡ್ X1 ಟ್ಯಾಬ್ಲೆಟ್,X1 ಕಾರ್ಬನ್, X1 ಯೋಗ

ಈ ಹೊಸ ಸಾಧನಗಳ ಸ್ಪೆಸಿಫಿಕೇಶನ್ ಮತ್ತು ಫೀಚರ್ಗಳ ಜೊತೆಗೆ ಲೆನೋವೋ ಅದರ ಬೆಲೆ ಮತ್ತು ಯಾವಾಗ ಲಭ್ಯವಾಗಲಿದೆ ಎಂಬುದರ ಕುರಿತೂ ಮಾಹಿತಿಯನ್ನು ನೀಡಿದೆ. ಥಿಂಕ್ಪ್ಯಾಡ್ X1 ಟ್ಯಾಬ್ಲೆಟ್ 3rd Gen ಮಾರ್ಚ್ 2018ರಿಂದ ಖರೀದಿಗೆ ಲಭ್ಯವಾಗಲಿದ್ದು, ಬೆಲೆ $1599 ನಿಂದ ಆರಂಭವಾಗಲಿದೆ. ಹಾಗೆಯೇ ಥಿಂಕ್ಪ್ಯಾಡ್ X1 ಕಾರ್ಬನ್ 6th Gen ಮತ್ತು X1 ಯೋಗ 3rd Gen ಗಳೆರಡು ಈ ತಿಂಗಳಾಂತ್ಯದಿಂದ ಖರೀದಿಗೆ ಲಭ್ಯವಿದ್ದು ಅವುಗಳ ಬೆಲೆ ಕ್ರಮವಾಗಿ $1709 ಮತ್ತು $1889 ರಿಂದ ಪ್ರಾಂಭವಾಗಲಿದೆ.

ಥಿಂಕ್ಪ್ಯಾಡ್ X1 ಟ್ಯಾಬ್ಲೆಟ್ (3rd Gen)

ಥಿಂಕ್ಪ್ಯಾಡ್ X1 ಟ್ಯಾಬ್ಲೆಟ್ (3rd Gen)

ಮರುವಿನ್ಯಾಸಗೊಂಡಿರುವ ಲೆನೋವೋ 3rd Gen ಥಿಂಕ್ಪ್ಯಾಡ್ X1 ಟ್ಯಾಬ್ಲೆಟ್ ಸಂಪೂರ್ಣ ಪಿಸಿ ಯ ಕಾರ್ಯಕ್ಷಮತೆಯನ್ನು ನೂತನ ಡಿಟ್ಯಾಚೆಬಲ್ ಫಾರ್ಮ್ ಫ್ಯಾಕ್ಟರ್ನಲ್ಲಿ ನೀಡಲಿದೆ.

ಇಂಟೆಲ್ 8th Gen ಇಂಟೆಲ್ ಕೋರ್ ಪ್ರಾಸೆಸರ್ ಹೊಂದಿರುವ ಈ ಟ್ಯಾಬ್ಲೆಟ್ HDR ಬೆಂಬಲಿಸುವ 13-ಇಂಚ್ 3K ಡಿಸ್ಪ್ಲೇ, ಸುಧಾರಿತ ಫುಲ್-ಫಂಕ್ಷನ್ ಥಿಂಕ್ಪ್ಯಾಡ್ ಕೀಬೋರ್ಡ್ ಹೊಂದಿದೆ.ಅಲ್ಲದೆ ಉತ್ತಮ ಉತ್ಪಾದಕತೆ ಮತ್ತು ಮೊಬಿಲಿಟಿ ನೀಡಲು ಐಚ್ಛಿಕ ಗ್ಲೋಬಲ್ LTE-A ಕನೆಕ್ಟಿವಿಟಿಯನ್ನೂ ಇದು ನೀಡುತ್ತದೆ.

ಯಾವದೇ ಕೆಲಸದ ವಾತಾವರಣದಲ್ಲಿ ಕಾರ್ಯನಿರ್ವಹಿಸಲು ಅಗತ್ಯವಾದ ಒರಟುತನ ಮತ್ತು ಬಾಳಿಕೆತನವನ್ನು ಪರೀಕ್ಷಿಸುವ ಸಲುವಾಗಿ ಥಿಂಕ್ಪ್ಯಾಡ್ X1 ಟ್ಯಾಬ್ಲೆಟ್ MIL-SPEC ಪರೀಕ್ಷೆಗೊಳಪಟ್ಟಿತ್ತು. ಅಲ್ಲದೆ ಈ ಸಾಧನವು ಹೊಸ ಪೆನ್ ನೊಂದಿಗಿನ ಸಹಜ ಸಂವಾದ, IR ಮೂಲಕ ಫೇಶಿಯಲ್ ರೆಕಗ್ನಿಶನ್, ಪೂರ್ತಿ ದಿನ ಬಾಳಿಕೆ ಬರುವ ಬ್ಯಾಟರಿ ಲೈಫ್ ಮೊದಲಾದ ಫೀಚರ್ಗಳನ್ನೂ ಹೊಂದಿದೆ.

ಐಚ್ಛಿಕ ಲೆನೋವೋ ಪೆನ್ ಪ್ರೋ 4096 ಲೆವೆಲ್ಗಳ ಪ್ರೆಶರ್ ಸೆನ್ಸಿಟಿವಿಟಿಯನ್ನು ಬೆಂಬಲಿಸುತ್ತದೆ. ಸಹಜ ಮತ್ತು ಪ್ರತಿಕ್ರಿಯಶೀಲ ಬರವಣಿಗೆಯ ಅನುಭವವನ್ನು ನೀಡುವ ಈ ಪೆನ್ ಟಿಲ್ಟ್ ಟು ಶೇಡ್ ಫೀಚರ್ ನೀಡುತ್ತದಲ್ಲದೆ ಒಮ್ಮೆ ಪೂರ್ತಿ ಚಾರ್ಜ್ ಮಾಡಿದರೆ 26 ದಿನಗಳ ಕಾಲ ಕಾರ್ಯನಿರ್ವಹಿಸುತ್ತದೆ.

ಥಿಂಕ್ಪ್ಯಾಡ್ X1 ಕಾರ್ಬನ್ (6th Gen)

ಥಿಂಕ್ಪ್ಯಾಡ್ X1 ಕಾರ್ಬನ್ (6th Gen)

ಜಗತ್ತಿನ ಅತ್ಯಂತ ಹಗುರವಾದ ಬಿಸ್ನೆಸ್ ಲ್ಯಾಪ್ಟಾಪ್ ಎಂದು ಹೇಳಲಾಗುವ ಥಿಂಕ್ಪ್ಯಾಡ್ X1 ಕಾರ್ಬನ್ ಸೌಂದರ್ಯ ಮತ್ತು ಬಾಳಿಕೆತನದ(ನೀರು, ಅತಿಯಾದ ಬಿಸಿ ಮತ್ತು ಛಳಿಯಲ್ಲಿ ಹಾಳಾಗದು ಎಂದು ಪರೀಕ್ಷಿಸಲಾಗಿದೆ) ಅಪೂರ್ವ ಸಂಗಮವಾಗಿದೆ ಎಂದರೆ ತಪ್ಪಾಗಲಾರದು.

ಥಿಂಕ್ಪ್ಯಾಡ್ X1 ಕಾರ್ಬನ್ 500 NITS ಪೀಕ್ ಬ್ರೈಟ್ನೆಸ್ ನೀಡುವ ಡಾಲ್ಬಿ ವಿಶನ್ HDR ಡಿಸ್ಪ್ಲೇ ಹೊಂದಿದೆ.

ಈ ಲ್ಯಾಪ್ಟಾಪ್ನಲ್ಲಿ ಇನ್-ಬಿಲ್ಟ್ ಮೈಕ್ರೋಫೋನ್ಗಳಿದ್ದು, ಇದರ 360 ಡಿಗ್ರೀ ಫಾರ್ ಫೀಲ್ಡ್ ಕಮ್ಯುನಿಕೇಶನ್ 4 ಮೀಟರ್ಗಳ ವ್ಯಾಪ್ತಿಯಲ್ಲಿ ಕೆಲಸಮಾಡುತ್ತದೆ. ಹಾಗಾಗಿ ನೀವು ಮಲ್ಟಿಟಾಸ್ಕಿಂಗ್ ಮಾಡುವಾಗ ವಾಯ್ಸ್-ಕಂಟ್ರೋಲ್ ಮತ್ತು ವೆಬ್ ಕಾಲ್ಗಳು ಪ್ರೊಡಕ್ಟಿವ್ ಆಗಿರುತ್ತದೆ.ಅಲ್ಲದೆ ಈ ಲ್ಯಾಪ್ಟಾಪ್ನೊಂದಿಗೆ ಥಿಂಕ್ ಶಟರ್ ಕ್ಯಾಮೆರಾ ಪ್ರೈವೆಸಿ ವೆಬ್ ಕ್ಯಾಮ್ ಕವರ್ ಕೂಡ ದೊರಕುತ್ತದೆ.

ಇದರ ಕನೆಕ್ಟಿವಿಟಿ ಆಯ್ಕೆಗಳ ಕುರಿತು ಹೇಳುವುದಾದರೆ ಲೆನೋವೋ ಥಿಂಕ್ಪ್ಯಾಡ್ X1 ಕಾರ್ಬನ್ ಗ್ಲೋಬಲ್ LTE-A ವೈರ್ಲೆಸ್ ಕನೆಕ್ಟಿವಿಟಿ ಆಯ್ಕೆ ಹೊಂದಿದೆ. 15 ಘಂಟೆಗಳ ಬ್ಯಾಟರಿ ಲೈಫ್ ಹೊಂದಿರುವ ಈ ಲ್ಯಾಪ್ಟಾಪ್ ರ್ಯಾಪಿಡ್ ಚಾರ್ಜ್ ಬ್ಯಾಟರಿ ಹೊಂದಿದೆ. ಅಷ್ಟೇ ಅಲ್ಲದೆ ಈ ಲ್ಯಾಪ್ಟಾಪ್ನಲ್ಲಿದೆ ಆಂಟಿ-ಸ್ಪೂಫಿಂಗ್ ಫಿಂಗರ್ಪ್ರಿಂಟ್ ಸ್ಕ್ಯಾನರ್ ಮತ್ತು ಫೇಶಿಯಲ್ ರೆಕಗ್ನಿಶನ್ ತಂತ್ರಜ್ಞಾನ.

 ಥಿಂಕ್ಪ್ಯಾಡ್ X1 ಯೋಗ (3rd Gen)

ಥಿಂಕ್ಪ್ಯಾಡ್ X1 ಯೋಗ (3rd Gen)

ಲೆನೋವೋ X1 ಯೋಗ ಅದರ ಅನನ್ಯ ರಿಟ್ರ್ಯಾಕ್ಟೆಬಲ್ ಕೀಬೋರ್ಡ್ ಮತ್ತು ಇಂಟಗ್ರೇಟೆಡ್ ಥಿಂಕ್ಪ್ಯಾಡ್ ಪೆನ್ ಪ್ರೋ ಗೆ ಹೆಸರುವಾಸಿಯಾಗಿದ್ದು X1 ಕಾರ್ಬನ್ ನ ನವೀನ ಸಾಮರ್ಥ್ಯಗಳನ್ನು ಒಳಗೊಂಡಿದೆ. ಈ ಮೂಲಕ ಮಲ್ಟಿ-ಮೋಡ್ ಆಸಕ್ತರು 8th Gen ಇಂಟೆಲ್ ಕೋರ್ ಪ್ರಾಸೆಸರ್ ಮತ್ತು ವಿನೂತನ ಪ್ರೀಮಿಯಂ ಡಾಲ್ಬಿ ವಿಶನ್ ಹೊಂದಿರುವ ಡಿಸ್ಪ್ಲೇ ಅನ್ನು ಫ್ಲೆಕ್ಸಿಬಲ್ ಫಾರ್ಮ್-ಫ್ಯಾಕ್ಟರ್ ನಲ್ಲಿ ಪಡೆಯಬಹುದು.

ಇದರ ನೂತನ 360 ಡಿಗ್ರೀ ಫಾರ್-ಫೀಲ್ಡ್ ಕಮ್ಯನಿಕೇಶನ್ ಮೈಕ್ರೋಫೋನ್ ವೇಕ್ ಆನ್ ವಾಯ್ಸ್ ಫೀಚರ್ ಹೊಂದಿದ್ದು ಉತ್ತಮ ಗುಣಮಟ್ಟದ ಆಡಿಯೋ ಮತ್ತು ವೀಡಿಯೋ ಕಾನ್ಫರೆನ್ಸಿಂಗ್ ಸಾಮರ್ಥ್ಯ ನೀಡುತ್ತದೆ. ಅಲ್ಲದೆ ಗ್ಲೋಬಲ್ LTE-A ವೈರ್ಲೆಸ್ ಕನೆಕ್ಟಿವಿಟಿ, ಫೇಶಿಯಲ್ ರೆಕಗ್ನಿಶನ್(ಐಚ್ಛಿಕ IR ಕ್ಯಾಮೆರಾದೊಂದಿಗೆ) ಮತ್ತು ಫಿಂಗರ್ಪ್ರಿಂಟ್ ಸ್ಕ್ಯಾನರ್ ಕೂಡ ಥಿಂಕ್ಪ್ಯಾಡ್ X1 ಯೋಗ ಲ್ಯಾಪ್ಟಾಪ್ಲನಲ್ಲಿದೆ.

ಮಾರುಕಟ್ಟೆಗೆ ಶೀಘ್ರವೇ ಲಾಂಚ್ ಆಗಲಿದೆ ನೋಕಿಯಾ 1: ಹೇಗಿದೆ ಸ್ಮಾರ್ಟ್ ಪೋನ್..?ಮಾರುಕಟ್ಟೆಗೆ ಶೀಘ್ರವೇ ಲಾಂಚ್ ಆಗಲಿದೆ ನೋಕಿಯಾ 1: ಹೇಗಿದೆ ಸ್ಮಾರ್ಟ್ ಪೋನ್..?

How to create two accounts in one Telegram app (KANNADA)
ಥಿಂಕ್ವಿಶನ್ X1 ಮಾನಿಟರ್

ಥಿಂಕ್ವಿಶನ್ X1 ಮಾನಿಟರ್

ಈ ಸಂದರ್ಭದಲ್ಲಿ ಲೆನೋವೋ ಈ ಮೂರು ಸಾಧನಗಳಲ್ಲದೆ ಹೊಸ ಥಿಂಕ್ವಿಶನ್ X1 ಮಾನಿಟರ್ ಅನ್ನು ಕೂಡ ಪ್ರಸ್ತುತ ಪಡಿಸಿದೆ. ಇದರ ಸುಧಾರಿತ 27-ಇಂಚ್ UHD ಡಿಸ್ಪ್ಲೇ ನಾಲ್ಕೂ ಕಡೆಗಳಲ್ಲಿ ತೆಳುವಾದ ಅಂಚು ಮತ್ತು 4.7mm ನ ಪ್ರೊಫೈಲ್ ಹೊಂದಿದ್ದು ಜಗತ್ತಿನ ಅತ್ಯಂತ ತೆಳುವಾದ ಪ್ರೊಫೈಲ್ ಎನಿಸಿದೆ.

ಈ ಡಿಸ್ಪ್ಲೇ 99% sRGB ಕಲರ್ ಗ್ಯಾಮುಟ್ ಹೊಂದಿದ್ದು ಅತ್ಯಂತ ಹೊಳಪಿನ ಮತ್ತು ಜೀವಂತಿಕೆಯಂದ ಕೂಡಿದ ಚಿತ್ರಗಳನ್ನು ನೀಡುತ್ತದೆ. ಇದರ ವೆಬ-ಕ್ಯಾಮ್ ಅನನ್ಯ "ಮೋಟರ್-ಕ್ಯಾಮೆರಾ" ಸಿಸ್ಟಮ್ ಹೊಂದಿದ್ದು ವಿಶಿಷ್ಟ ಡ್ಯುಯಲ್-ಎರೇ ಮೈಕ್ರೋಫೋನ್ಗಳನ್ನು ಕೂಡ ಹೊಂದಿದೆ.

Best Mobiles in India

Read more about:
English summary
Lenovo today announced its latest ThinkPad X1 series at the CES 2018.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X