ಮಾರುಕಟ್ಟೆಯಲ್ಲಿನ ಬಿಸಿ ದೋಸೆ ಈ ಲೆನೊವೊ ಕಂಪ್ಯೂಟರ್

Posted By:
ಮಾರುಕಟ್ಟೆಯಲ್ಲಿನ ಬಿಸಿ ದೋಸೆ ಈ ಲೆನೊವೊ ಕಂಪ್ಯೂಟರ್

ಕಂಪ್ಯೂಟರ್ ತಂತ್ರಜ್ಞಾನ, ಸಂಗೀತ ಹೀಗೆ ಎಲ್ಲಾ ರೀತಿಯ ಸೌಲಭ್ಯವನ್ನು ಹೊಂದಿರುವ ಪರ್ಸನಲ್ ಕಂಪ್ಯೂಟರ್ ಇಂದು ಸಾಮನ್ಯವಾಗಿದೆ. ಈ ರೀತಿಯ ಪರ್ಸನಲ್ ಕಂಪ್ಯೂಟರ್ ಗೆ ಮಾರುಕಟ್ಟೆಯಲ್ಲಿ ಕೂಡ ಉತ್ತಮ ಬೇಡಿಕೆ ಇದೆ. ಈ ಪರ್ಸನಲ್ ಕಂಪ್ಯೂಟರ್ ನಲ್ಲಿ ಅಧಿಕ ಮಾಹಿತಿಗಳನ್ನು ಸಂಗ್ರಿಹಿಸಿಡಬಹುದಾದ ಸೌಲಭ್ಯ ಕೂಡ ಇದರ ಬೇಡಿಕೆಯನ್ನು ಹೆಚ್ಚುವಂತೆ ಮಾಡಿದೆ.

ಈ ರೀತಿಯ ಹೆಚ್ಚಿನ ಗುಣಮಟ್ಟದ ಪರ್ಸನಲ್ ಕಂಪ್ಯೂಟರ್ ಗಳನ್ನು ಲೆನೊವೊ ಬಿಡುಗಡೆ ಮಾಡಿದೆ. ಕಳೆದ ವರ್ಷ ಮಾರುಕಟ್ಟೆಗೆ ಬಂದಂತಹ ಲೆನೊವೊ ಐಡಿಯಾಸೆಂಟರ್ B500 ಮಾಡಲ್ ಹೆಚ್ಚಿನ ಮಾರುಕಟ್ಟೆಯನ್ನು ಗಳಿಸಿತ್ತು. ಈ ಪರ್ಸನಲ್ ಕಂಪ್ಯೂಟರ್ ಇವತ್ತಿಗೂ ಉತ್ತಮ ಮಾರುಕಟ್ಟೆಯನ್ನು ಉಳಿಸಿಕೊಂಡಿದ್ದು ಈ ಕೆಳಗಿನ ಗುಣಲಕ್ಷಣವನ್ನು ಹೊಂದಿದೆ.

* 23 ಇಂಚಿನ ಸ್ಕ್ರೀನ್

* JBL ಸ್ಪೀಕರ್

* ಆಪ್ಟಿಕಲ್ ಡ್ರೈವ್

* 4GB RAM

* 1 TB ಸ್ಟೋರೇಜ್

ಈ ಪರ್ಸನಲ್ ಕಂಪ್ಯೂಟರ್ ಅಳವಡಿಸಲು ಸಹ ಸುಲಭವಾಗಿದ್ದು ,ಇದರ ಕೆಳಗಡೆ JBL ಸ್ಟಿರಿಯೊ ಸ್ಪೀಕರ್ ಅಳವಡಿಸಲಾಗಿದೆ. ಇದರ 23 ಇಂಚಿನ ಸ್ಕ್ರೀನ್ ಟಿಲ್ಟ್ ಕಂಟ್ರೋಲ್ ಹೊಂದಿದ್ದು ಇದನ್ನು 60 ಡಿಗ್ರಿಯವರೆಗೆ ತಿರುಗಿಸಬಹುದಾಗಿದೆ. ಇದರಲ್ಲಿ ಟಚ್ ಸೆನ್ಸಿಟಿವ್ ಕೀ ಇದ್ದು ಇದನ್ನು ಶಬ್ದ ಮತ್ತು ಸ್ಕ್ರೀನ್ ಬೆಳಕನ್ನು ಹೊಂದಾಣಿಕೆ ಮಾಡಲು ಬಳಸಬಹುದು. ಇದರಲ್ಲಿ ವೈರ್ ಲೆಸ್ ಮೌಸ್ ಬಳಸುವ ಸೌಲಭ್ಯವನ್ನು ಕೂಡ ಹೊಂದಿದೆ.

ಈ ಸಾಧನವು ಮೌಸ್, ಕೀಬೋರ್ಡ್ ಮತ್ತು ರಿಮೋಟ್ ಕಂಟ್ರೋಲ್ ಕೂಡ ಹೊಂದಿದೆ. ಇದರಲ್ಲಿ ರಿಮೋಟ್ ಅನ್ನು ವೀಡಿಯೊ ಮತ್ತು ಆಡಿಯೊಗಳ ಕಾರ್ಯ ನಿರ್ವಹಣೆಯಲ್ಲಿ ಬಳಕೆಯಲ್ಲಿ ಸಾಧರಣ ಟಿ .ವಿ ರಿಮೋಟ್ಬಳಸುವಂತೆ ಬಳಸಬಹುದಾಗಿದೆ.ಈ ಪರ್ಸನಲ್ ಕಂಪ್ಯೂಟರ್ ನಲ್ಲಿ ಇಂಟಲ್ 2 ಕ್ವಾಡ್ Q8400 ಪ್ರೊಸೆಸರ್ ಇದ್ದು ಇದರ ಕ್ಲೋಕ್ ಸ್ಪೀಡ್ 2.66 GHz ಹೊಂದಿದೆ. ಇದು ATi ರೇಡಿಯೊನ್ HD 5450 ಗ್ರಾಫಿಕ್ ಕಾರ್ಡ್ ಹೊಂದಿದೆ. ಇದರಲ್ಲಿ ಕೇಬಲ್ ಸಂಪರ್ಕ ನೀಡಿ ಟಿ.ವಿ. ಕಾರ್ಯಕ್ರಮವನ್ನು ಸಹ ವೀಕ್ಷಿಸಬಹುದು.

ಉತ್ತಮ ಗುಣಮಟ್ಟ ಮತ್ತು ಅಧಿಕ ಕಾರ್ಯವೈಖರಿ ಹೊಂದಿರುವ ಲೆನೊವೊ ಐಡಿಯಾಸೆಂಟರ್ B500 ಬೆಲೆ ರು. 60,000 ಆಗಿದೆ.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot