Subscribe to Gizbot

ಲೆನೊವೊ ಆಂಡ್ರಾಯ್ಡ್‌ ನೋಟ್‌ಬುಕ್‌ ಭಾರತದ ಮಾರುಕಟ್ಟೆಗೆ ಬಿಡುಗಡೆ

Written By:

ಚೀನಾ ಮೂಲದ ಲ್ಯಾಪ್‌ಟಾಪ್‌ ತಯಾರಕ ಕಂಪೆನಿ ಲೆನೊವೊ ದೇಶೀಯ ಮಾರುಕಟ್ಟೆಗೆ ಹೊಸ ಆಂಡ್ರಾಯ್ಡ್‌ ನೋಟ್‌ಬುಕ್‌ ಬಿಡುಗಡೆ ಮಾಡಿದೆ. ಲೆನೊವೊ ಐಡಿಯಪ್ಯಾಡ್‌ ಎ10 ಬಿಡುಗಡೆ ಮಾಡಿದ್ದು,19,990 ರೂಪಾಯಿ ಬೆಲೆಯನ್ನು ನಿಗದಿ ಮಾಡಿದೆ.

ಈ ನೋಟ್‌ಬುಕ್‌ನ್ನು 300' ತಿರುಗಿಸಿ ಟ್ಯಾಬ್ಲೆಟ್‌ನಂತೆಯೆ ಬಳಸಬಹುದು.69 x185 x 17.3 ಮಿ.ಮೀಟರ್‍ ಗಾತ್ರ,1 ಕೆಜಿ ತೂಕವಿದೆ. ಲೆನೊವೊ ಈ ನೋಟ್‌ಬುಕ್ಗೆ AccuType ಕೀಬೋರ್ಡ್ ನೀಡಿದ್ದು,ಈ ಕೀ ಬೋರ್ಡ್ ಮೂಲಕ ಟೈಪ್‌ ಮಾಡಬಹುದಾಗಿದೆ.

 ಲೆನೊವೊ ಆಂಡ್ರಾಯ್ಡ್‌ ನೋಟ್‌ಬುಕ್‌ ಭಾರತದ ಮಾರುಕಟ್ಟೆಗೆ ಬಿಡುಗಡೆ

10.1ಇಂಚಿನ ಎಚ್‌ಡಿ ಸ್ಕ್ರೀನ್‌(1366 x 768 ಪಿಕ್ಸೆಲ್‌),ಆಂಡ್ರಾಯ್ಡ್‌ 4.2 ಜೆಲ್ಲಿ ಬೀನ್‌ ಓಎಸ್‌,1.6GHz ಕ್ವಾಡ್‌ ಕೋರ್‌ ಪ್ರೊಸೆಸರ್‍,2ಜಿಬಿ ರ್‍ಯಾಮ್, 32ಜಿಬಿ ಎಸ್‌ಎಸ್‌ಡಿ ಮೆಮೊರಿ
0.3 ಎಂಪಿ ಮುಂದುಗಡೆ ಕ್ಯಾಮೆರಾ,ವೈಫೈ,ಬ್ಲೂಟೂತ್‌ ಕನೆಕ್ಟಿವಿಟಿ ವಿಶೇಷತೆಯನ್ನು ಹೊಂದಿದೆ. ಬ್ಯಾಟರಿ ಎಷ್ಟು mAh ಹೊಂದಿದೆ ಎಂಬುದನ್ನು ಲೆನೊವೊ ತಿಳಿಸಿಲ್ಲ. ಆದರೆ 9 ಗಂಟೆಗಳ ಕಾಲ ಬಳಸಬಹುದು ಎಂದು ಹೇಳಿದೆ.

2 ಯುಎಸ್‌ಬಿ ಪೋರ್ಟ್‌,ಮೈಕ್ರೋ ಯುಎಸ್‌ಬಿ,ಮೈಕ್ರೋಎಚ್‌ಡಿಎಂಐ,ಮೆಕ್ರೋ ಎಸ್‌ಡಿ ಕಾರ್ಡ್‌ ಸ್ಲಾಟ್‌‌ಗಳನ್ನು ಲೆನೊವೊ ನೋಟ್‌‌ಬುಕ್‌ ಹೊಂದಿದೆ.

ಇದನ್ನೂ ಓದಿ: ವಾಟ್ಸ್‌ಆಪ್‌ನಲ್ಲಿ ಅಂಥ ವಿಶೇಷತೆ ಏನಿದೆ?

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot