ಲೆನೊವೊ ಐಡಿಯಾಪ್ಯಾಡ್, ಸ್ಟೈಲಿಶ್ ಆಗಿದೆ ನೋಡು

Posted By: Staff
ಲೆನೊವೊ ಐಡಿಯಾಪ್ಯಾಡ್, ಸ್ಟೈಲಿಶ್ ಆಗಿದೆ ನೋಡು
ಲ್ಯಾಪ್ ಟಾಪ್ ಮತ್ತು ಕಂಪ್ಯೂಟರ್ ಮಾರುಕಟ್ಟೆಯಲ್ಲಿ ಲೆನೊವೊ ಜನಪ್ರಿಯ ಹೆಸರು. ಕಂಪನಿಯು ಇದೀಗ ಜಾಗತಿಕ ಮಾರುಕಟ್ಟೆಗೆ ನೂತನ ಲ್ಯಾಪ್ ಟಾಪೊಂದನ್ನು ಪರಿಚಯಿಸಿದೆ. ಅದರ ಹೆಸರು Lenovo IdeaPad U260. ಇದು ಸಾಕಷ್ಟು ಅಡ್ವಾನ್ಸಡ್ ಫೀಚರ್ಸ್ ಮತ್ತು ವಿಶೇಷತೆಗಳೊಂದಿಗೆ ಬಂದಿದೆ.

ಈ ಲ್ಯಾಪ್ ಟಾಪ್ ಎರಡು ಪ್ರೊಸೆಸರ್ ಆಯ್ಕೆಗಳಲ್ಲಿ ದೊರಕುತ್ತಿದೆ. ಅಂದರೆ ಬೇಸ್ ಲ್ಯಾಪ್ ಟಾಪ್ ಆವೃತ್ತಿಗೆ ಇಂಟೆಲ್ ಕೋರ್ ಐ3-380 ಯುಎಂ ಪ್ರೊಸೆಸರ್ ಮತ್ತು ಟಾಪ್ ಎಂಡ್ ಆವೃತ್ತಿಗೆ ಇಂಟೆಲ್ ಕೋರ್ ಐ5-470 ಯುಎಂ ಪ್ರೊಸೆಸರ್ ಅಳವಡಿಸಲಾಗಿದೆ.

ನೂತನ ಐಡಿಯಾಪ್ಯಾಡ್ ಲ್ಯಾಪ್ ಟಾಪ್ ಜಿನ್ಯೂ ವಿಂಡೋಸ್ 7 ಹೋಮ್ ಪ್ರೀಮಿಯಂ ಅಪರೇಟಿಂಗ್ ಸಿಸ್ಟಮ್ ಹೊಂದಿದೆ. ಇದು 64 ಬಿಟ್ ಮೈಕ್ರೊಪ್ರೊಸೆಸರ್ ಹೊಂದಿದ್ದು, ವೇಗದ ಆಕ್ಸೆಸ್ ಗೆ ನೆರವಾಗುತ್ತದೆ. ಇಂಟೆಲ್ ಹೈಡೆಫಿನೇಷನ್ ಗ್ರಾಫಿಕ್ಸ್ ಕಾರ್ಡ್ ಇರುವುದರಿಂದ ವಿಡಿಯೋ ಮತ್ತು ಗೇಮ್ಸ್ ಗುಣಮಟ್ಟ ಅನನ್ಯವಾಗಿದೆ.

ಇದು 4ಜಿಬಿಯ PC3-8500 DDR3 SRAM ಆಂತರಿಕ ಮೆಮೊರಿ ಹೊಂದಿದೆ. ಇದರ ಡಿಸ್ ಪ್ಲೇ 12.5 ಇಂಚು ವಿಸ್ತಾರವಾಗಿದೆ. 1366 x 768 ಪಿಕ್ಸೆಲ್ ರೆಸಲ್ಯೂಷನ್ ಕ್ಯಾಮರಾವೂ ಜೊತೆಗಿದ್ದು ಆಕರ್ಷಕ ವಿಡಿಯೋ ಚಾಟಿಂಗ್ ಅನುಭವ ಪಡೆಯಬಹುದಾಗಿದೆ. ಇದು 0.3 ಮೆಗಾ ಫಿಕ್ಸೆಲ್ ಕ್ಯಾಮರಾವಾಗಿದೆ.

ಲೆನೊವೊ ಐಡಿಯಾಪ್ಯಾಡ್ ಯು260 ಲ್ಯಾಪ್ ಟಾಪ್ ಮಲ್ಟಿಟಚ್ ಎರಡು ಬಟನ್ ಟಚ್ ಪ್ಯಾಡ್ ಹೊಂದಿದೆ. ಈ ಲ್ಯಾಪಿ 320 ಜಿಬಿ ಹಾರ್ಡ್ ಡಿಸ್ಕ್ ಹೊಂದಿದೆ. ಉಳಿದಂತೆ ವೈಫೈ ಲಿಂಕ್ 1000, 2.1+ ಇಡಿಆರ್ ಬ್ಲೂಟೂಥ್ ಇದೆ. ಈ ಐಡಿಯಾಪ್ಯಾಡ್ 4 ಸೆಲ್ ಲೀಥಿಯಂ ಪಾಲಿಮಾರ್ ಬ್ಯಾಟರಿ ಹೊಂದಿದ್ದು ಅತ್ಯುತ್ತಮ ಬ್ಯಾಟರಿ ಬಾಳಿಕೆ ನೀಡುತ್ತದೆ.

ಈ ಲ್ಯಾಪ್ ಟಾಪ್ ಗೆ ಕಂಪನಿಯು ಒಂದು ವರ್ಷದ ವಾರೆಂಟಿ ನೀಡಿದೆ. ಇನ್ ಬುಲ್ಟ್ ಸ್ಪೀಕರ್ ಇತ್ಯಾದಿಗಳಿರುವುದರಿಂದ ಸುಮಧುರ ಧ್ವನಿಯ ಸಂಗೀತ ಕೇಳಬಹುದು. ಈ ಲ್ಯಾಪ್ ಟಾಪ್ ಬೇಸ್ ಆವೃತ್ತಿಗೆ ಗೆ ಭಾರತದಲ್ಲಿ ಸುಮಾರು 40 ಸಾವಿರ ರು. ಮತ್ತು ಟಾಪ್ ಆವೃತ್ತಿಗೆ 50 ಸಾವಿರ ರುಪಾಯಿ ಇರುವ ನಿರೀಕ್ಷೆಯಿದೆ.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot