Subscribe to Gizbot

ಲೆನೊವೊ ಕಂಪನಿಯಿಂದ ಎರಡು ಶಕ್ತಿಮಾನ್ ಕಂಪ್ಯೂಟರ್

Posted By: Super
ಲೆನೊವೊ ಕಂಪನಿಯಿಂದ ಎರಡು ಶಕ್ತಿಮಾನ್ ಕಂಪ್ಯೂಟರ್
ಅತ್ಯಧಿಕ ಗುಣಮಟ್ಟ ಮತ್ತು ಹೆಚ್ಚುಶಕ್ತಿಶಾಲಿ ಲ್ಯಾಪ್ ಟಾಪ್ ಹೊರತರುವಲ್ಲಿ ಲೆನೊವು ಮುಂಚೂಣಿಯಲ್ಲಿದೆ. ಲ್ಯಾಪ್ ಟಾಪ್ ಗಳ ಕಾರ್ಯಕ್ಷಮತೆ ಮತ್ತು ದರದಿಂದಾಗಿ ಜಾಗತಿಕವಾಗಿ ಹೆಚ್ಚು ಗ್ರಾಹಕರು ಲೆನೊವೊ ಕಂಪನಿಯ ಉತ್ಪನ್ನಗಳನ್ನು ಇಷ್ಟಪಡುತ್ತಿದ್ದಾರೆ.

ಲೇಟೆಸ್ಟ್ ಸುದ್ದಿಯೆಂದರೆ ಲೆನೊವೊ ಎರಡು ಶಕ್ತಿಶಾಲಿ ಬಿಸಿನೆಸ್ ಕಂಪ್ಯೂಟರ್ ಹೊರತಂದಿದೆ. ಅದರ ಹೆಸರು Lenovo ThinkCentre Edge 71z ಮತ್ತು Lenovo ThinkCentre Edge 91z. ಇದು ಸಾಕಷ್ಟು ಗ್ರಾಹಕ ಸ್ನೇಹಿ ಫೀಚರು ಮತ್ತು ವಿಶೇಷತೆಗಳನ್ನು ಹೊಂದಿದೆ.

ಇದರಲ್ಲಿ 71ಝಡ್ ಕಂಪ್ಯೂಟರ್ ಇಂಟೆಲ್ ಕೋರ್ ಐ3 ಪ್ರೊಸೆಸರ್ ಹೊಂದಿದೆ. ಇದರಲ್ಲಿರುವ ಜೀನಿಯಸ್ ವಿಂಡೋಸ್ 7 ಪ್ರೊಫೆಷನಲ್ 32 ಕಾರ್ಯಕ್ಷಮತೆ ಹೆಚ್ಚಳು ನೆರವಾಗಿದೆ. ಇಂಟೆಲ್ ಕಂಪನಿಯ ಹೈಡೆಫಿನೇಷನ್ ಗ್ರಾಫಿಕ್ಸ್ ಕಾರ್ಡ್ ಕೂಡ ಇದರಲ್ಲಿದೆ. ಇದರ ಡಿಸ್ ಪ್ಲೇ ಗಾತ್ರ 20.0 ಇಂಚು ದೊಡ್ಡದಾಗಿದೆ. ಇದರ ರೆಸಲ್ಯೂಷನ್ 1600 x 900 ಪಿಕ್ಸೆಲ್.

ಇದರಲ್ಲಿ 500 GB 7200 ಹಾರ್ಡ್ ಡ್ರೈವ್ ಇದೆ. ಇದು 2 ಜಿಬಿಯ PC3-10600 ಪಿಸಿ ಎಸ್ ಡಿ RAM ಹೊಂದಿದ್ದು 1333 ಮೆಗಾಹರ್ಟ್ಸ್ ಪವರ್ ನೀಡುತ್ತದೆ. ಈ ಕಂಪ್ಯೂಟರಿಗೆ ಕಂಪನಿಯು ಮೂರು ವರ್ಷದ ವಾರೆಂಟಿ ನೀಡುತ್ತದೆಯಂತೆ.

ಲೆನೊವೊ ಥಿಂಕ್ ಸೆಂಟರ್ ಎಡ್ಜ್ 91ಝಡ್ ಕೂಡ ಮತ್ತೊಂದು ಶಕ್ತಿಮಾನ್ ಕಂಪ್ಯೂಟರ್. ಇದರು ಎರಡನೇ ತಲೆಮಾರಿನ ಇಂಟೆಲ್ ಕೋರ್ ಐ7 ಪ್ರೊಸೆಸರ್ ಹೊಂದಿದೆ. ಇದು ವಿಂಡೋಸ್ 7 ಪ್ರೊಫೆಷನಲ್ ಅಪರೇಟಿಂಗ್ ಸಿಸ್ಟಮ್ ಹೊಂದಿದೆ. ಡಿಸ್ ಪ್ಲೇ ಗಾತ್ರ 21.5 ಇಂಚಿದ್ದು, ಇದು ಹೈಡೆಫಿನೆಷನ್ ಎಲ್ ಇಡಿ ಡಿಸ್ ಪ್ಲೇ ಆಗಿದೆ,

ಝಡ್91 ಕಂಪ್ಯೂಟರ್ 8ಜಿಬಿಯ ಡಿಡಿಆರ್3 RAM ಹೊಂದಿದ್ದು, ಒಂದು ಟಿಬಿ ಎಚ್ ಡಿಡಿ ಹಾರ್ಡ್ ಡ್ರೈವ್ ಸಂಗ್ರಹ ಸಾಮರ್ಥ್ಯ ಹೊಂದಿದೆ. ಈ ಕಂಪ್ಯೂಟರ್ 6-in-1 ಕಾರ್ಡ್ ರೀಡರ್ ಹೊಂದಿದೆ. ಜೊತೆಗೆ 2 ಮೆಗಾಫಿಕ್ಸೆಲ್ ವೆಬ್ ಕ್ಯಾಮರಾ ಇತ್ಯಾದಿ ಫೀಚರುಗಳನ್ನು ಹೊಂದಿದೆ.

ಇವೆರಡು ಟ್ಯಾಬ್ಲೆಟ್ ಕಂಪ್ಯೂಟರ್ ದರ ಕೂಡ ಆಕರ್ಷಕವಾಗಿದೆ. ಇದರಲ್ಲಿ ThinkCentre Edge 71z ದರ ಸುಮಾರು 28 ಸಾವಿರ ರು. ಮತ್ತು ThinkCentre 91z ದರ ಸುಮಾರು 45 ಸಾವಿರ ರುಪಾಯಿ.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot