ಲೆನೊವೊ ಮೋಟೋ ಟ್ಯಾಬ್ ಶೀಘ್ರದಲ್ಲೇ ಬಿಡುಗಡೆ
ಲಿನೊವೊ ಈ ಹಿಂದೆ ವರದಿ ಮಾಡಿದಂತೆ ಮೋಟೋರಾಲಾ ಬ್ರ್ಯಾಂಡ್ ಉಳ್ಳ ಟ್ಯಾಬ್ಲೆಟ್‌ನಲ್ಲಿ ಕಾರ್ಯನಿರ್ವಹಿಸಲಿದೆ ಎಂದಾಗಿತ್ತು, ಆದರೆ ಈ ಕುರಿತು ಯಾವುದೇ ಅಧಿಕೃತ ಘೋಷಣೆಯನ್ನು ಮಾಡಿರಲಿಲ್ಲ. ಆದರೆ ಇದೀಗ ಬಂದ ಸುದ್ದಿಯಂತೆ ಕಂಪನಿಯು ಲೆನೊವೊ ಮೋಟೋ ಟ್ಯಾಬ್ ಹೆಸರಿನ ಟ್ಯಾಬ್ಲೆಟ್‌ನಲ್ಲಿ ಕೆಲಸ ಮಾಡಲಿದ್ದು ಇದು ಯುಎಸ್‌ನಲ್ಲಿ ನವೆಂಬರ್ 17 ರಂದು ಲಾಂಚ್ ಆಗಲಿದೆ.

ಇದರ ಬೆಲೆ ಅಂದಾಜು ರೂ 19,650 ಆಗಿದೆ. ಇದುವರೆಗೆ ಕಂಪನಿಯು ಟ್ಯಾಬ್ಲೆಟ್ ಕುರಿತು ಹೆಚ್ಚಿನ ಮಾಹಿತಿಯನ್ನು ವರದಿ ಮಾಡಿಲ್ಲ ಆದರೆ ಬಿಡುಗಡೆ ಮಾಡಿರುವ ಪ್ರೊಮೊ ವೀಡಿಯೊದಲ್ಲಿ ಟ್ಯಾಬ್ಲೆಟ್ ಕುರಿತಂತೆ ವಿಶೇಷ ಮಾಹಿತಿ ದೊರೆಯಲಿದೆ.
ಮನರಂಜನೆಗಾಗಿ ಸಿದ್ಧಪಡಿಸಲಾದ ಟ್ಯಾಬ್ಲೆಟ್ ಇದು ಎಂಬುದಾಗಿ ಇದು ತಿಳಿಸಿದ್ದು 10.1 ಇಂಚಿನ ಪೂರ್ಣ ಎಚ್‌ಡಿ ಡಿಸ್‌ಪ್ಲೇಯನ್ನು ಇದು ಹೊಂದಿದೆ. ಡ್ಯುಯಲ್ ಸ್ಪೀಕರ್‌ನೊಂದಿಗೆ ಡಾಲ್ಬಿ ಆಟಮ್ಸ್ ಸೌಂಡ್ ಅನ್ನು ಇದು ಪಡೆದುಕೊಂಡಿದೆ ಅಂತೆಯೇ 7 ಕಸ್ಟಮೈಸ್ ಮಾಡಬಹುದಾದ ಪ್ರೊಫೈಲ್‌ಗಳಿಗೆ ಇದು ಬೆಂಬಲವನ್ನು ನೀಡುತ್ತದೆ. ಇದು ಉತ್ಪಾದನಾ ಮೋಡ್‌ನಲ್ಲಿ ಬರುತ್ತಿದ್ದು ಇದು ಬಹು ಕಾರ್ಯಗಳನ್ನು ನೆರವೇರಿಸಲಿದೆ ಅಂತೆಯೇ ಅಪ್ಲಿಕೇಶನ್‌ಗಳ ನಡುವೆ ಬದಲಿಸಬಹುದಾಗಿದೆ.

ಟ್ಯಾಬ್ಲೆಟ್ ಅನ್ನು ಇನ್ನಷ್ಟು ಮೋಜುದಾಯಕವನ್ನಾಗಿ ಮಾಡುವ ಇತರ ಆಕ್ಸೆಸರೀಸ್‌ಗಳನ್ನು ಕೂಡ ಬಳಕೆದಾರರು ಬಳಸಿಕೊಳ್ಳಬಹುದಾಗಿದೆ. ಇದು ಪೂರ್ಣ ಗಾತ್ರದ ಕೀಬೋರ್ಡ್ ಅನ್ನು ಹೊಂದಿದ್ದು 400mAh ಬ್ಯಾಟರಿಯನ್ನು ಇದು ಪಡೆದುಕೊಂಡಿದೆ ಮತ್ತು ಲೆನೊವೊ ಸಹಾಯಕ ಡಾಕ್ ಅನ್ನು ಇದು ಹೊಂದಿದೆ.
ಇದು ಟಿವಿ ಮೋಡ್ ಅನ್ನು ಒಳಗೊಂಡಿದ್ದು ಕಿಡ್ಸ್ ಮೋಡ್ ಇದರಲ್ಲಿದೆ. ಟ್ಯಾಬ್ಲೆಟ್ ದೊಡ್ಡದಾದ 7000mAh ಬ್ಯಾಟರಿಯನ್ನು ಹೊಂದಿದೆ. ಅಂತೆಯೇ ಫಿಂಗರ್‌ಪ್ರಿಂಟ್ ಸ್ಕ್ಯಾನರ್‌ಗೂ ಬೆಂಬಲವನ್ನು ನೀಡಲಿದೆ. ಲೆನೊವೊ ಮೋಟೋ ಟ್ಯಾಬ್ ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರ್ಯಾಗನ್ 625 ಪ್ರೊಸೆಸರ್ ಅನ್ನು ಹೊಂದಿದ್ದು 2 ಜಿಬಿ RAM ಇದರಲ್ಲಿದೆ ಮತ್ತು 32 ಜಿಬಿ ಸಂಗ್ರಹಣೆಯನ್ನು ಪಡೆದಿದ್ದು ಇದನ್ನು 128 ಜಿಬಿಗೆ ವಿಸ್ತರಿಸಬಹುದಾಗಿದೆ. ಆಂಡ್ರಾಯ್ಡ್ 7.1 ನಾಗಟ್ ಆಪರೇಟಿಂಗ್ ಸಿಸ್ಟಮ್ ಇದರಲ್ಲಿದೆ.


Click it and Unblock the Notifications