ಲಿನೋವೋ ಕಾನ್ಸೆಪ್ಟ್ ಲಾಪ್ ಟಾಪ್: ಹಾಳೆಯಂತೆ ಮಡಚಬಹುದಂತೆ ಗೊತ್ತಾ..?

By: Precilla Dias

ನ್ಯೂಯಾರ್ಕ್ ನಲ್ಲಿ ನಡೆದಂತಹ ಲಿನೋವೋ ಟ್ರಾನ್ಫರ್ಮ್ ಕಾರ್ಯಕ್ರಮದಲ್ಲಿ ಮಡಚ ಬಹುದಾಂತಹ ಲಾಪ್ ಟಾಪ್ ಕಾನ್ಸೆಪ್ಟ್ ಅನ್ನು ಪರಿಚಯಿಸಿದ್ದು, ಇದು ಮುಂದಿನ ತಲೆ ಮಾರಿನ ಲಾಪ್ ಟಾಪ್ ಆಗಲಿದ್ದು, ಈ ಲ್ಯಾಪ್ ಟಾಪ್ ಅನ್ನು ಮಧ್ಯಭಾಗದಲ್ಲಿ ಹಾಳೆಯ ಮಾದರಿಯಲ್ಲಿ ಮಡಚಬಹುದಾಗಿದೆ.

ಲಿನೋವೋ ಕಾನ್ಸೆಪ್ಟ್ ಲಾಪ್ ಟಾಪ್: ಹಾಳೆಯಂತೆ ಮಡಚಬಹುದಂತೆ ಗೊತ್ತಾ..?

ಈ ಮಡಚಬಹುದಾದ ಲಾಪ್ ಟಾಪ್ ಕಾನ್ಸೆಪ್ಟ್ ಅನ್ನು ಪರಿಚಯಿಸಿರುವ ಲಿನೋವೋ ಕಂಪನಿ, ಈ ನೂತನ ಮಾದರಿಯ ಲಾಪ್ ಟಾಪ್ ನ ಹೈಲೆಟ್ಸ್ ಗಳ ಬಗ್ಗೆ ಮಾಹಿತಿಯನ್ನು ನೀಡಿದೆ. ಇದರಲ್ಲಿ ಹೊಸ ಮಾದರಿಯ ಸ್ಕ್ರಿನ್ ಟೆಕ್ನಾಲಜಿಯನ್ನು ಹೊಂದಿದ್ದು, ವಾಯ್ಸ್ ಕಂಟ್ರೋಲ್ ಮತ್ತು ಆಡ್ವಾನ್ಸ್ ಮೆಟೆಲಿಯಲ್ಸ್.

ನೂತನ ಮಾದರಿಯ ಮಡಚಬಹುದಾದ ಸ್ಕ್ರಿನ್ ಹೊಂದಿರುವ ಲ್ಯಾಪ್ ಟಾಪ್ ಅನ್ನು ಟ್ವಿಟರ್ ಮೂಲಕ ಲಿನೋವೋ ಎಲ್ಲರಿಗೂ ತಿಳಿಸುವ ಕಾರ್ಯವನ್ನು ಮಾಡಿದೆ. ಈ ಕಾನ್ಸೆಪ್ಟ್ ಲಾಪ್ ಟಾಪ್ ನಲ್ಲಿ ಮೇಲ್ಭಾಗದಿಂದ ಕೆಳಭಾಗದವರೆಗೂ ಸ್ಕ್ರಿನ್ ಅನ್ನು ಕಾಣಬಹುದಾಗಿದೆ. ಲಾಪ್ ಟಾಪ್ ನ ಕೆಳಭಾಗದಲ್ಲಿ ಕೀಬೋರ್ಡ್ ಕಾಣಬಹುದಾಗಿದ್ದು, ಸ್ಕ್ರಿನ್ ಮತ್ತು ಕೀಬೊರ್ಡ್ ನಡುವೆ ಯಾವುದೇ ವ್ಯತ್ಯಾಸವಿಲ್ಲ ಎನ್ನಲಾಗಿದೆ.

ಈ ಕೀಬೊರ್ಡ್ ನಲ್ಲಿ ಟ್ರಾಕ್ ಪ್ಯಾಡ್ ವಿಸಿಬಲ್ ಇಲ್ಲ ಎನ್ನಲಾಗಿದೆ. ಇದಲ್ಲದೇ ವಾಯ್ಸ್ ಕಾಮೆಂಡಿಗ್ ಕಾಣಬಹುದಾಗಿದೆ. ಅದುವೇ ಅಡ್ವಾಸ್ ಆಗಿದೆ ಎನ್ನಲಾಗಿದೆ. ಇದರೊಂದಿಗೆ ಪೆನ್ಸಿಲ್ ವೊಂದಿದ್ದು, ಇದು ಚಿತ್ರಗಳನ್ನು ಡ್ರಾ ಮಾಡಲು ಸಹಾಯ ಮಾಡಲಿದೆ.

ಲಿನೋವೋ ಈ ಮಡಚ ಬಹುದಾದ ಲಾಪ್ ಟಾಪ್ ನ ಈ ಹೈಲೆಟ್ ಗಳನ್ನು ಬಿಟ್ಟರೇ ಬೇರೆ ವಿಶೇಷತೆಗಳ ಬಗ್ಗೆ ಯಾವುದೇ ಮಾಹಿತಿಯನ್ನು ಹೊರ ಹಾಕಿಲ್ಲ. ಇದು ಕಾನ್ಸೆಪ್ಟ್ ಹಂತದಲ್ಲಿದ್ದೂ ಮುಂದಿನ ದಿನಗಳಲ್ಲಿ ಇದು ಮಾರುಕಟ್ಟೆಯಲ್ಲಿ ಕಾಣಿಸಿಕೊಂಡರೂ ಆಚ್ಚರ್ಯ ಪಡೆಯಬೇಕಾಗಿಲ್ಲ.

Read more about:
English summary
At the Lenovo Transform event on Tuesday, the company has showcased the concept of a foldable laptop.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot