ಲೆನೊವೊ ಥಿಂಕ್‌ಸೆಂಟರ್‌ ಎಡ್ಜ್‌ ಪಿ.ಸಿ ಮಾರುಕಟ್ಟೆಗೆ

Posted By: Staff
ಲೆನೊವೊ ಥಿಂಕ್‌ಸೆಂಟರ್‌ ಎಡ್ಜ್‌ ಪಿ.ಸಿ ಮಾರುಕಟ್ಟೆಗೆ
ತಾಂತ್ರಿಕ ಸರಕುಗಳ ತಯಾರಿಕೆಯಲ್ಲಿ ಮುಂಚೂಣಿಯಲ್ಲಿರುವ ಲೆನೊವೊ ಸಂಸ್ಥೆಯು ತನ್ನಯ ನೂತನ ಆಲ್‌ ಇನ್‌ ವನ್‌ ಕಂಪ್ಯೂಟರ್‌ ಥಿಂಕ್‌ಸೆಂಟರ್‌ ಎಡ್ಜ್‌ 72z ಹಾಗೂ 92z ಮಾದರಿಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

ಅಂದಹಾಗೆ ಮಾರುಕಟ್ಟೆಗೆ ಇದೀಗ ತಾನೆ ಪ್ರವೇಶಿಸಿರುವ ಲೆನೊವೊ ಥಿಂಕ್‌ಸೆಂಟರ್‌ ಎಡ್ಜ್‌ 72c ಹಾಗೂ 92c ಮಾದರಿಯ ಆಲ್‌ ಇನ್‌ ವನ್‌ ಕಂಪ್ಯೂಟರ್‌ಗಳ ವಿಶೇಷತೆ ಹಾಗು ಲಭ್ಯತೆ ಕುರಿತಾದ ಮಾಹಿತಿಯನ್ನು ಗಿಜ್ಬಾಟ್‌ ನಿಮಗಾಗಿ ತಂದಿದೆ ಒಮ್ಮೆ ಓದಿ ನೋಡಿ.

ಲೆನೊವೊ ಥಿಂಕ್‌ಸೆಂಟರ್‌ ಎಡ್ಜ್‌ 72z:

• ಮೇಯ್ನ್‌ಸ್ಟ್ರೀಮ್‌ AIO ಪವರ್ಡ್‌ ಹಾಗೂ 3 ನೇ ತಲೆ ಮಾರಿನ ಇಂಟೆಲ್‌ ಕೊರ್‌ ಪ್ರೊಸೆಸರ್‌.

• ರ್ಯಾಪಿದ್‌ ಬೂಟ್‌ HDD ಹಾಗೂ 1600 MHz DDR3 ಮೆಮೊರಿ.

• ವಿದ್ಯುತ್‌ ಮಿತಬಳಕೆ ಮಾಡುತ್ತದೆ.

• ಸ್ಪಿಲ್‌ ನಿರೋಧಕ ಕೀಲಿಮಣೆ ಹಾಗು 20 ಇಂಚಿನ ಸ್ಕ್ರೀನ್‌.

• ಸುಲಭವಾಗಿ ಸಾಗಿಸ ಬಹುದಾಗಿದೆ.

ಲೆನೊವೊ ಥಿಂಕ್‌ಸೆಂಟರ್‌ ಎಡ್ಜ್‌ 92z:

• AIO ಹಾಗೂ 3 ನೇ ತಲೆ ಮಾರಿನ ಇಂಟೆಲ್‌ ಕೊರ್‌ ಪ್ರೊಸೆಸರ್‌.

• 21.5 ಇಂಚಿನ LED ಸ್ಕ್ರೀನ್‌ ಹಾಘೂ 1080p HD ದರ್ಶಕ.

• ಹೆಚ್ಚುವರಿ 10 ಪಾಯಿಂಟ್‌ ಮಲ್ಟಿಟಚ್‌ ಸ್ಕ್ರೀನ್‌.

• 2GB ಗ್ರಾಫಿಕ್ಸ್‌.

• ಸುಲಭವಾಗಿ ಸಾಗಿಸ ಬಹುದಾಗಿದೆ.

ಬೆಲೆ ಹಾಗೂ ಲಭ್ಯತೆ

ಲೆನೊವೊ ಥಿಂಕ್‌ಸೆಂಟರ್‌ ಎಡ್ಜ್‌ 72z ಹಾಗೂ 92z ಕೆಲವೇ ದಿನಗಳಲ್ಲಿ ಅಧಿಕೃತ ಮಳಿಗೆಗಳಲ್ಲಿ ಸುಮಾರು 27,500 ರಿಂದ 59,600 ಸಾವಿರ ರೂಪಾಯಿ ದರಲ್ಲಿ ಲಭ್ಯವಾಗಲಿದೆ.

 

Read In English...

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot