ಲೆನೊವೊ ಥಿಂಕ್ ಸೆಂಟರ್: ಇದು ಬಿಸಿನೆಸ್ ಕಂಪ್ಯೂಟರ್

By Super
|

ಲೆನೊವೊ ಥಿಂಕ್ ಸೆಂಟರ್: ಇದು ಬಿಸಿನೆಸ್ ಕಂಪ್ಯೂಟರ್
ಗ್ರಾಹಕರ ಬಿಸಿನೆಸ್ ಅಥವಾ ವ್ಯಾಪಾರ ಅವಶ್ಯಕತೆಯನ್ನು ಗಮನದಲ್ಲಿಟ್ಟುಕೊಂಡು ಲೆನೊವೊ ಕಂಪನಿಯು ThinkCentre M71e tower PC ಹೊರತಂದಿದೆ. ಇದು ಆಕರ್ಷಕ ವಿನ್ಯಾಸ ಹೊಂದಿದ್ದು, ಆಫೀಸುಗಳಿಗೆ ಸೂಕ್ತವಾದ ಕಂಪ್ಯೂಟರ್ ಆಗಿದೆ.

ಈ ಕಂಪ್ಯೂಟರ್ ಅತ್ಯುತ್ತಮ ಕನೆಕ್ಟಿವಿಟಿ ಆಯ್ಕೆಗಳಲ್ಲಿ ಬಂದಿದ್ದು, ವೇಗದ ಆಕ್ಸೆಸಿಗೆ ನೆರವಾಗುತ್ತದೆ. ಲೆನೊವೊ ಕಂಪನಿಯ ಥಿಂಕ್ ಸೆಂಟರ್ ಎಂ71ಇ ಟವರ್ ಪಿಸಿ ಆಕರ್ಷಕ ಫೀಚರುಗಳು, ಟೆಕ್ ಮಾಹಿತಿ ಮತ್ತು ವಿಶೇಷತೆಗಳ ಪಟ್ಟಿ ಇಲ್ಲಿದೆ.

ವಿಶೇಷತೆಗಳು ಮತ್ತು ಟೆಕ್ ಮಾಹಿತಿ

* ಕ್ವಾಡ್ ಕೋರ್ ಇಂಟೆಲ್ 3.3 ಗಿಗಾಹರ್ಟ್ಸ್ ಕೋರ್ ಐ5 2500 ಪ್ರೊಸೆಸರ್

* ಡಿಡಿಆರ್3 4ಜಿಬಿ ಎಸ್ಡಿRAM

* ಎಎಂಡಿ ರೇಡಿಯನ್ ಎಚ್ ಡಿ 5440 ಗ್ರಾಫಿಕ್ಸ್ ಪ್ರೊಸೆಸಿಂಗ್ ಯುನಿಟ್, 512ಎಂಬಿ ಮೆಮೊರಿ

* 500ಜಿಬಿ ಸಾಟಾ ಹಾರ್ಡ್ ಡಿಸ್ಕ್ ಡ್ರೈವ್

* ಡಿವಿಡಿ ಬರ್ನರ್

* 4 ಯುಎಸ್ ಬಿ 2.0 ಪೋರ್ಟ್ಸ್

* ಗಿಗಾಬಿಟ್ ಎಥರ್ನೆಟ್ ಪೊರ್ಟ್

* ಡಿವಿಐ ಪೋರ್ಟ್

* ಡಿಸ್ ಪ್ಲೇ ಪೋರ್ಟ್

* ಅನಲಾಗ್ ಆಡಿಯೋ ಪೋರ್ಟ್

* ಎಸ್ ಡಿ ಕಾರ್ಡ್ ರೀಡರ್

ಲೆನೊವೊ ಥಿಂಕ್ ಸೆಂಟರ್ ಎಂ71ಇ ಪವರ್ ಪಿಸಿ ಹೈಎಂಡ್ ಕಂಪ್ಯೂಟರ್ ಅಲ್ಲ. ಆದರೆ ಇದರ ಕಾರ್ಯಕ್ಷಮತೆ ನಿಮಗೆ ಹೈಎಂಡ್ ಕಂಪ್ಯೂಟರುಗಳನ್ನು ನೆನಪಿಸಿದರೂ ನೆನಪಿಸಬಹುದು. ಈ ಕಂಪ್ಯೂಟರ್ ಮೂರು ಇನ್ ಬುಲ್ಟ್ ಫ್ಯಾನ್ ಹೊಂದಿದ್ದು, ಕಂಪ್ಯೂಟರ್ ಹೆಚ್ಚು ಬಿಸಿಯಾಗುವ ತಲೆಬಿಸಿಯಿಲ್ಲ. ಈ ಕಂಪ್ಯೂಟರನ್ನು ಕಂಪನಿ ಔಪಚಾರಿಕವಾಗಿ ಹೊರತಂದಿದ್ದು, ದರದ ಮಾಹಿತಿ ನೀಡಿಲ್ಲ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X