85 ಸಾವಿರಕ್ಕೆ ಲೆನೊವೊ ಥಿಂಕ್‌ಪ್ಯಾಡ್ X1 ಅಲ್ಟ್ರಾಬುಕ್
ಲೆನೊವೊ ತನ್ನಯ ಥಿಂಕ್‌ಪ್ಯಾಡ್ ವಿಭಾಗದ 20ನೇ ವಾರ್ಷಿಕೋತ್ಸವದ ಅಂಗವಾಗಿ ಲೆನೊವೊ ಥಿಂಕ್‌ಪ್ಯಾಡ್ X1 ಕಾರಬನ್ ಅಲ್ಟ್ರಾಬುಕ್ ಬಿಡುಗಡೆ ಮಾಡಿದೆ. ನೂತನ ಅಲ್ಟ್ರಾಬುಕ್ 85 ಸಾವಿರ ರೂಪಾಯಿಗಳಿಗೆ ಲಭ್ಯವಿದ್ದು ವಿಶ್ವದ ಅತೀ ತೆಳ್ಳನೆಯ ಅಲ್ಟ್ರಾಬುಕ್ ಎಂಬ ಹಣೆಪಟ್ಟಿ ಪಡೆದಿದೆ. 14 ಇಂಚಿನ ಪರದೆ ಹೋದಿರುವ ಅಲ್ಟ್ರಾಬುಕ್ ಕೊಂಚ ದುಬಾರಿ ಎನಿಸಿದರೂ ಕೊಟ್ಟ ಹಣಕ್ಕೆ ತಕ್ಕ ವಸ್ತು ಇದಾಗಿದೆ. ಸಂಸ್ಥೆಯ ಪ್ರಕಾರ ಈ ಸಾದನವು ಕೇವಲ 8mm ದಪ್ಪ ಹಾಗೂ ಕೇವಲ 1.36 ಕೆ.ಜಿ ತೂಕವಿದೆ ಎಂದು ಹೇಳಿದೆ.
ತಯಾರಕರು ಕಾರ್ಬನ್ ಫೈಬರ್ ಬಳಸುವ ಮೂಲಕ ತೂಕ ಕಡಿಮೆಯಾಗುವಂತೆ ಮಾಡಿದ್ದಾರೆ. ಕಾರ್ಬನ್ ಫೈಬರ್ ಫಾರ್ಮುಲಾ 1 ಕಾರು ತಯಾರಿಕೆಯಲ್ಲಿ ಬಳಸಲಾಗು ಕಚ್ಚಾ ವಸ್ತುವಾಗಿದ್ದು, ಅಂತಿಮವಾಗಿ ವಿಶ್ವಾಸಾರ್ಹ, ಭದ್ರತೆಯ ಹಾಗೂ ಸುಲಭವಾಗಿ ಸಾಗಿಸಲು ಸಹಾಯವಾಗುವ ರೀತಿಯಲ್ಲಿ ಉತ್ಪನ್ನವನ್ನು ಸಿದ್ಧ ಪಡಿಸಲಾಗಿದೆ.
ಲೆನೊವೊ ಥಿಂಕ್‌ಪ್ಯಾಡ್ X1 ಕಾರಬನ್ ಅಲ್ಟ್ರಾಬುಕ್ HD ಚಾಲಿತ 14 ಇಂಚಿನ ಪರದೆ ಹೊಂದಿದೆ. ಉತ್ತಮ ದರ್ಜೆಯ ಬ್ಯಾಟರಿ ಬಳಸಿರುವುದರಿಂದ ಅಲ್ಟ್ರಾಬುಕ್ 6.3 ಗಂಟೆಗಳ ಕಾಲ ಬ್ಯಾಕಪ್ ನೀಡಬಲ್ಲದು. ಡ್ಯುಬ್ಲಿ ಸರೌಂಡ್ ಸೌಂಡ್ ತಂತ್ರಜ್ಞಾನ ಬಳಸಿ ಬಳಕೆದಾರು ವರ್ಧಿತ ಬಾಸ್ ಪರಿಣಾಮ ಗಳಿಂದಾಗಿ ವಿವಿಧ ಬಗೆಗಳಲ್ಲಿ ಹಾಡುಗಳನ್ನು ಕೇಳಿ ಆನಂದಿಸಬಹುದಾಗಿದೆ. ಸಂಸ್ಥೆಯು ಬಳಕೆದಾರರ ಆಯ್ಕೆ ಅನುಗುಣವಾಗಿ 3G ಕನೆಕ್ಟಿವಿಟಿ SIM ಸ್ಲಾಟ್ ವಿಶೇಷ ಫೀಚರ್ ಕೂಡಾ ಒದಗಿಸುತ್ತದೆ. ಇದಲ್ಲದೆ ಲೇಟೆಸ್ಟ್ ಜೆನೆರೇಷನ್ Intel Ivy Bridge ಪ್ರೊಸೆಸರ್ ನೊಂದಿಗೆ 256GB SSD ಡ್ರೈವ್ ನಂತಹ ವಿಶೇಷತೆಗಳಿಂದ ಕೂಡಿದೆ.
ಅಲ್ಟ್ರಾಬುಕ್‌ನಲ್ಲಿನ ಗ್ರಾಫಿಕ್ ಫೀಚರ್‌ಗಳಾದ GPU ಹಾಗೂ RAM ಸಾಮರ್ತ್ಯದ ಕುರಿತಾಗಿ ಸಂಸ್ಥೆ ಯಾವುದೇ ವಿವರ ನೀಡಿಲ್ಲ. ಮೂಲಗಳ ಪ್ರಕಾರ ಲೆನೊವೊ ಥಿಂಕ್‌ಪ್ಯಾಡ್ X1 ಕಾರಬನ್ ಅಲ್ಟ್ರಾಬುಕ್ ಅಕ್ಟೋಬರ್‌ನಲ್ಲಿ ಮಾರುಕಟ್ಟೆಗೆ ಬರಲಿರುವ ಬಹು ನಿರೀಕ್ಷಿತ ವಿಂಡೋಸ್ 8 ಆಪರೇಟಿಂಗ್ ಸಿಸ್ಟಂಗೆ ಅಪ್ಗ್ರೇಡ್ ಆಗಲಿದೆ ಎಂದು ತಿಳಿಸಿವೆ. ಆದರೆ ಅಲ್ಲಿಯ ವರೆಗೂ ಬಳಕೆದಾರರು ವಿಂಡೋಸ್ 7 ಆಪರೇಟಿಂಗ್ ಸಿಸ್ಟಂ ಉಪಯೋಗಿಸ ಬಹುದಾಗಿದೆ. ಇದಲ್ಲದೆ 6 ಸಾಲಿನ ಬ್ಯಾಕ್‌ಲೈಟ್ ಕೀಬೋರ್ಡ್ ಹಾಗೂ ಮಲ್ಟಿಟಚ್ ಟ್ರಾಕ್‌ಪ್ಯಾಡ್ ಹೋಂದಿದೆ. ಈಗಾಗಲೇ ಲೆನೊವೊ ಥಿಂಕ್‌ಪ್ಯಾಡ್ X1 ಕಾರಬನ್ ಅಲ್ಟ್ರಾಬುಕ್ ಭಾರತೀಯ ಮಾರುಕಟ್ಟೆಯಲ್ಲಿ ಲಭ್ಯವಿದ್ದು ಆಸಕ್ತರು ಖರೀದಿಸಬಹುದಾಗಿದೆ.Read in English


Click it and Unblock the Notifications