Subscribe to Gizbot

ಸಾವಿರ ನಿರೀಕ್ಷೆಯ ಲೆನೊವೊ ಎಕ್ಸ್130ಇ ಲ್ಯಾಪ್ ಟಾಪ್

Posted By: Staff
ಸಾವಿರ ನಿರೀಕ್ಷೆಯ ಲೆನೊವೊ ಎಕ್ಸ್130ಇ ಲ್ಯಾಪ್ ಟಾಪ್
ಎಕ್ಸ್ ಸರಣಿ ಥಿಂಕ್ ಪ್ಯಾಡ್ ಲ್ಯಾಪ್ ಟಾಪ್ ಗಳಲ್ಲಿ ಲೆನೊವೊ ಹೆಚ್ಚು ಯಶಸ್ವಿಯಾಗಿದೆ. ಇದೀಗ ಈ ಯಶದಿಂದ ಉತ್ತೇಜನ ಪಡೆದು ಲೆನೊವೊ ಹೊಸ ಲ್ಯಾಪ್ ಟಾಪ್ ಆವೃತ್ತಿ ಹೊರತರಲು ಸಿದ್ಧತೆ ನಡೆಸಿದೆ.

ಈಗಾಗಲೇ ಲೆನೊವೊ ಎಕ್ಸ್100 ಇ, ಎಕ್ಸ್120ಇ ಮತ್ತು ಎಕ್ಸ್121ಇ ಲ್ಯಾಪ್ ಟಾಪ್ ಗಳು ಮಾರುಕಟ್ಟೆಯಲ್ಲಿವೆ. ಈ ಕುಟುಂಬಕ್ಕೆ ಬರಲಿರುವ ಹೊಸ ಸದಸ್ಯ ಲೆನೊವೊ ಎಕ್ಸ್130ಇ ಲ್ಯಾಪ್ ಟಾಪ್.

ಎಕ್ಸ್ ಸರಣಿಯ ಲ್ಯಾಪ್ ಟಾಪ್ ಎಂದರೆ ಅಲ್ಟ್ರಾ ಪೊರ್ಟೆಬಿಲಿಟಿ ಮತ್ತು ಕೈಗೆಟುಕುವ ದರಗಳ ಯುಗಳ ಗೀತೆ. ಕಡಿಮೆ ದರ ಮತ್ತು ಸಣ್ಣ ಗಾತ್ರ ಇವುಗಳ ವಿಶೇಷತೆ. ನೂತನ ಲೆನೊವೊ ಎಕ್ಸ್130ಇ ಲ್ಯಾಪ್ ಟಾಪ್ ಕೂಡ ಮನೆಗೆ ಮತ್ತು ಆಫೀಸಿಗೂ ಸಲ್ಲುವ ಗ್ಯಾಡ್ಜೆಟ್.

ಆದರೆ ಈ ಲ್ಯಾಪ್ ಟಾಪ್ ಇನ್ನೂ ಮಾರುಕಟ್ಟೆಗೆ ಬಂದಿಲ್ಲ. ಆದರೆ ಇದರ ವಿಶೇಷತೆ ಮತ್ತು ಟೆಕ್ ಮಾಹಿತಿಗಳು ನಮಗೆ ದೊರಕಿವೆ. ಇದರ ಇಮೇಜ್ ಕೂಡ ಇಂಟರ್ನೆಟಿನಲ್ಲಿ ಹರಿದಾಡುತ್ತಿದೆ.

ನೂತನ ಲೆನೊವೊ ಎಕ್ಸ್130ಇ ಲ್ಯಾಪ್ ಟಾಪ್ ಸುಮಾರು 11.6 ಇಂಚು ವಿಸ್ತಾರದ ಸ್ಕ್ರೀನ್ ಹೊಂದಿರುವ ನಿರೀಕ್ಷೆಯಿದೆ. ಇದರ ರೆಸಲ್ಯೂಷನ್ ಕುರಿತು ಯಾವುದೇ ಮಾಹಿತಿಯಿಲ್ಲ.

ನಿರೀಕ್ಷೆಗಳು: ಇದರ ತೂಕ 1.8 ಕೆಜಿ. ಬ್ಯಾಟರಿ ಬ್ಯಾಕಪ್ 8 ಗಂಟೆ. ಪ್ರೊಸೆಸರ್ ಮಾಹಿತಿಯಿಲ್ಲ. ಆದರೆ ಇಂಟೆಲ್ ಎರಡನೇ ತಲೆಮಾರಿನ ಪ್ರೊಸೆಸರ್ ಹೊಂದಿರುವ ನಿರೀಕ್ಷೆಯಿದೆ. ಐ3 ಅಥವಾ ಐ5 ಪ್ರೊಸೆಸರ್ ಇದ್ದರೂ ಇರಬಹುದು ಎಂದು ಗ್ಯಾಡ್ಜೆಟ್ ಗುರು ಹೇಳುತ್ತಾರೆ.

ಉಳಿದಂತೆ 4 ಜಿಬಿ ಸಂಗ್ರಹ ಸಾಮರ್ಥ್ಯದ ಇನ್ ಬುಲ್ಟ್ RAM, 320 ಜಿಬಿ ಹಾರ್ಡ್ ಡಿಸ್ಕ್, ಎಚ್ ಡಿ ಗ್ರಾಫಿಕ್ಸ್ 3000 ಜಿಪಿಯು ಇತ್ಯಾದಿಗಳಿರುವ ನಿರೀಕ್ಷೆಯಿದೆ. ಈ ಲ್ಯಾಪ್ ಟಾಪ್ ಡಿಸೆಂಬರ್ ವೇಳೆಗೆ ಮಾರುಕಟಟೆಗೆ ಆಗಮಿಸುವ ನಿರೀಕ್ಷೆಯಿದೆ. ದರದ ಕುರಿತು ಯಾವುದೇ ಮಾಹಿತಿಯಿಲ್ಲ.

Read more about:
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot