ರಿಯಲ್ ಪೆನ್ ಫೀಚರ್ ಹೊಂದಿರುವ ಲೆನೊವೋ ಯೋಗ ಲ್ಯಾಪ್‌ಟಾಪ್ ಲಾಂಚ್!!

|

ಪ್ರಪಂಚದಲ್ಲಿಯೇ ಅತಿ ಹೆಚ್ಚು ತೆಳ್ಳಗಿನ ಟು-ಇನ್-ಒನ್ ಲ್ಯಾಪ್‌ಟಾಪ್ ಎಂದು ಹೆಸರು ಪಡೆದಿರುವ ಲೆನೊವೋ ಯೋಗ ಬುಕ್ ಭಾರತದ ಮಾರುಕಟ್ಟೆಗೆ ಬಿಡುಗಡೆಗೊಂಡಿದೆ. ಹೆಚ್ಚು ಫೀಚರ್‌ ಒಳಗೊಂಡಿರುವ ಈ ನೂತನ ಲ್ಯಾಪ್‌ಟಾಪ್ ಅನ್ನು ಟ್ಯಾಬ್ಲೆಟ್ ರೀತಿಯಲ್ಲಿಯೂ ಉಪಯೋಗಿಸುವ ಫೀಚರ್‌ ಹೊಂದಿದೆ!!

ಹಾಲೋ ಕೀ ಬೋರ್ಡ್‌ ಮತ್ತು ರಿಯಲ್ ಪೆನ್ ಅಂತಹ ಅತ್ಯಾಧುನಿಕ ಫೀಚರ್‌ ಹೊಂದಿರುವ ಲೆನೊವೋ ಯೋಗ ಬುಕ್ ಲ್ಯಾಪ್‌ಟಾಪ್ ಇದೀಗ ಫ್ಲಿಪ್‌ಕಾರ್ಟ್‌ನಲ್ಲಿ ಎಸ್‌ಕ್ಲೂಸಿವ್ ದರದಲ್ಲಿ ಮಾರಾಟಕ್ಕಿದ್ದು. ಕಾರ್ಬನ್‌ ಬ್ಲಾಕ್ ಬಣ್ಣದ ಲೆನೊವೋ ಯೋಗ ಬುಕ್ ಲ್ಯಾಪ್‌ಟಾಪ್‌ ಅನ್ನು 49,990 ರೂಪಾಯಿಗಳ ಆಫರ್‌ ಬೆಲೆಯಲ್ಲಿ ಕೊಂಡುಕೊಳ್ಳಬಹುದು

ಶಿಯೋಮಿಯ ಅತ್ಯಾಧುನಿಕ ವಿ ಆರ್ ಹೆಡ್‌ಸೆಟ್‌ ಬೆಲೆ ಕೇವಲ 999 ರೂ.!! ವಿಶೇಷತೆಗಳೇನು?

ವಿಂಡೋಸ್ 10 ಆಪರೇಟಿಂಗ್ ಸಿಸ್ಟಮ್ ಹೊಂದಿರುವ ಲ್ಯಾಪ್‌ಟಾಪ್ ಮಾತ್ರ ಭಾರತೀಯ ಮಾರುಕಟ್ಟೆಗೆ ಬಿಡುಗಡೆಯಾಗಿದ್ದು, ಹಾಗಾಗಿ ಲೆನೆವೋ ನುತನ ಲ್ಯಾಪ್‌ಟಾಪ್ ಯಾವ ಯಾವ ಫೀಚರ್‌ಗಳನ್ನು ಒಳಗೊಂಡಿದೆ ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.

ರಿಯಲ್ ಪೆನ್

ರಿಯಲ್ ಪೆನ್

ಲೆನೊವೋ ಯೋಗ ಬುಕ್ ಲ್ಯಾಪ್‌ಟಾಪ್‌ನ ಪ್ರಮುಖ ಫೀಚರ್‌ ಎಂದರೆ ಅದು ರಿಯಲ್ ಪೆನ್. ಈ ಪೆನ್‌ ಮೂಲಕ ನೀವು ಯಾವುದಾದರೂ ಪೇಪರ್‌ ಮೇಲೆ ಬರೆದರೆ ಲ್ಯಾಪ್‌ಟಾಪ್‌ ಅದನ್ನು ಡಿಜಿಟೈಸ್ ಮೂಲಕ ಮೂಡಿಸುತ್ತದೆ. ಟೈಪ್‌ ಮಾಡುವುದಕ್ಕಿಂತ ಬಹಳ ಸುಲಭವಾಗಿ ನಾವು ಯೋಗ ಬುಕ್‌ನಲ್ಲಿ ಬರೆಯಬಹುದು!!

ಹೊಸ ಲ್ಯಾಪ್‌ಟಾಪ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 ಹ್ಯಾಲೊ ಕೀ ಬೋರ್ಡ್‌.

ಹ್ಯಾಲೊ ಕೀ ಬೋರ್ಡ್‌.

ಲೆನೊವೋ ಯೋಗ ಬುಕ್ ಹ್ಯಾಲೊ ಕೀ ಬೋರ್ಡ್‌ ಹೊಂದಿದ್ದು, ಟಚ್‌ಪ್ಯಾಡ್ ಸ್ಕ್ರೀನ್ ಹೊಂದಿದೆ. ಇದು ಟ್ಯಾಬ್ಲೆಟ್‌ ರೀತಿಯಲ್ಲಿ ಕಾರ್ಯನಿರ್ವಹಿಸುತ್ತದೆ. ಇನ್ನು ಕೀ ಬೋರ್ಡ್ ಬಳಕೆಯಲ್ಲಿದ್ದಾಗ ಮಾತ್ರ ಬೆಳಕು ಮೂಡುತ್ತದೆ.

ಪ್ರೊಸೆಸರ್ ಯಾವುದು?

ಪ್ರೊಸೆಸರ್ ಯಾವುದು?

ಲೆನೊವೋ ಯೋಗ ಬುಕ್ ಇನ್‌ಟೆಲ್ X5-Z8550 ಪ್ರೊಸೆಸರ್ ಹೊಂದಿದ್ದು, ಅತ್ಯುತ್ತಮ ಕಾರ್ಯನಿರ್ವಹಣೆ ನೀಡುತ್ತದೆ ಎಂದು ಲೆನೊವೋ ಕಂಪೆನಿ ತಿಳಿಸಿದೆ.

ಡಿಸ್‌ಪ್ಲೇ ಮತ್ತು ರ್ಯಾಮ್

ಡಿಸ್‌ಪ್ಲೇ ಮತ್ತು ರ್ಯಾಮ್

ಲೆನೊವೋ ಯೋಗ ಬುಕ್ ಟ್ಯಾಬ್ಲೆಟ್ ಗಾತ್ರದಲ್ಲಿ 10.1 ಇಂಚ್ ಟಚ್‌ ಸ್ಕ್ರೀನ್ ಡಿಸ್‌ಪ್ಲೇ ಮತ್ತು 4GB ರ್ಯಾಮ್ ಮತ್ತು 64 GB ಆಂತರಿಕ ಮೆಮೊರಿ ಹೊಂದಿದೆ.

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

English summary
Lenovo's Yoga Book, which is their new 2-in-1 with a Halo Keyboard has been launched in India today.To Know More Visit To Kannada.Gizbot.Com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X