30,990 ರೂ.ದರದಲ್ಲಿ ಲೆನೊವೊ ಐಡಿಯಾಪ್ಯಾಡ್‌ ಬರಲಿದೆ

Posted By: Vijeth

30,990 ರೂ.ದರದಲ್ಲಿ ಲೆನೊವೊ ಐಡಿಯಾಪ್ಯಾಡ್‌ ಬರಲಿದೆ

2012 ರ ಐಎಫ್‌ಎ ಸಮಾರಂಭದಲ್ಲಿ ಲೆನೊವೊ ತನ್ನಯ ನೂತನ S300, S400 ಹಾಗೂ S405 ಐಡಿಯಾ ಪ್ಯಾಡ್‌ಗಳನ್ನು ಶೀಘ್ರದಲ್ಲೇ ಹೊರತರುವುದಾಗಿ ತಿಳಿಸಿತ್ತು. ಅದರಂತೆ ಲೆನೋವೋ ಇದೀಗ ತನ್ನಯ ನೂತನ ಐಡಿಯಾಪ್ಯಾಟ್‌ಗಳನ್ನು ಭಾರತೀಯ ಮಾರುಕಟ್ಟೆಗೆ ಬಿಡುಗಡೆ ಮಾಡಲು ಮುಂದಾಗಿದ್ದು ನೂತನ S300 ಹಾಗೂ S400 ಮಾದರಿಯ ಐಡಿಯಾಪ್ಯಾಡ್‌ಗಳನ್ನು ಬಜೆಟ್‌ ಕುರಿತು ಯೋಚಿಸುವ ಭಾರತೀಯ ಮಾರುಕಟ್ಟೆಯಲ್ಲಿನ ಗ್ರಾಹಕರುಗಳನ್ನು ಗಮನದಲ್ಲಿರಿಸಿ 29,990 ಹಾಗೂ 30,990 ರೂ.ದರದಲ್ಲಿ ಹೊರತರುವ ಸಾಧ್ಯತೆಗಳಿವೆ. ಅಂದಹಾಗೆ ನೂತನ ಐಡಿಯಾ ಪ್ಯಾಡ್‌ಗಳ ಕುರಿತಾಗಿ ಹೇಳುವುದಾದರೆ 21.9mm ದಪ್ಪವಿದ್ದು ಕೇವಲ 1.8 kg ತೂಕ ಹೊಂದಿದೆ.

ಹಾಗಿದ್ದಲ್ಲಿ ಬನ್ನಿ ಲೆನೊವೊ ಹೊರತರಲಿರಿವ ನೂತನ S300 ಹಾಗೂ S400 ಮಾದರಿಯ ಐಡಿಯಾಪ್ಯಾಡ್‌ಗಳಲ್ಲಿ ಏನೆಲ್ಲಾ ವಿಶೇಷತೆಗಳನ್ನು ಹೊಂದಿದೆ ಎಂಬುದನ್ನು ತಿಳಿದುಕೊಳ್ಳೋಣ.

1-ಲೆನೊವೊ S300 ನಲ್ಲಿ 13.3 ಇಂಚಿನ ಸ್ಕ್ರೀನ್‌ ಹೊಂದಿದ್ದರೆ S400 ನಲ್ಲಿ 14 ಇಂಚಿನ ಸ್ಕ್ರೀನ್‌ಇದೆ. ಹಾಗೂ ಬಳಕೆದಾರರು ತಮ್ಮ ಬಳಕೆಗೆ ತಕ್ಕಂತೆ 500 ಜಿಬಿ, 750 ಜಿಬಿ ಹಾಗೂ 1ಟಿಬಿ ಮಾದರಿಯಲ್ಲಿನ ಲ್ಯಾಪ್‌ಟಾಪ್‌ ಖರೀದಿಸ ಬಹುದಾಗಿದೆ.

2-ಎಸ್‌ 300 ನಲ್ಲಿ 3 ಜೆನೆರೇಷನ್‌ನ ಇಂಟೆಲ್‌ ಕೋರ್‌ ಐ3 ಪ್ರೊಸೆಸರ್‌ ಹೊಂದಿದ್ದರೆ, ಎಸ್‌400 ನಲ್ಲಿ ಐ5 ಪ್ರೊಸೆಸರ್‌ ನೀಡಲಾಗಿದೆ ಹಾಗೂಎರಡೂ ಮಾದರಿಗಳಲ್ಲಿ 500 ಜಿಬಿಯ ಹಾರ್ಡ್‌ಡಿಸ್ಕ್‌ ಇದೆ. ಇದಲ್ಲದೆ ಸಂಸ್ಥೆಯು ತನ್ನಯ ನೂತನ ಮಾದರಿ ಲ್ಯಾಪ್‌ ಟಾಪ್‌ಗಳನ್ನು ಸಿಲ್ವರ್‌ ಗ್ರೀನ್‌, ಕ್ರಿಂಸನ್‌ ರೆಡ್‌ ಹಾಗೂ ಕಾಟನ್‌ ಕ್ಯಾಂಡೀ ಪಿಂಕ್‌ ಬಣ್ಣಗಳಲ್ಲಿ ಹೊರತರಲಿದೆ.

3-ಅಂದಹಾಗೆ ಸಂಸ್ಥೆ ತಿಳಿಸಿರುವ ವಿವರಗಳ ಪ್ರಕಾರ S300, S400 ಐಡಿಯಾಪ್ಯಾಡ್‌ನಲ್ಲಿ ವಿಂಡೋಸ್‌ 7 ಹೋಮ್‌ ಪ್ರೊಫೆಷನಲ್‌ ಆಪರೇಟಿಂಗ್‌ ಸಿಸಸ್ಟಂ ಹೊಂದಿದ್ದು, ವಿಂಡೋಸ್‌ 8 ಆಪರೇಟಿಂಗ್‌ ಸಿಸ್ಟಂಗೆ ಅಪ್ಗ್ರೇಡ್‌ ಮಾಡಿಕೊಳ್ಳ ಬಹುದಾಗಿದೆ.

Read In English...

1ಟಿಬಿ ಹೆಚ್‌ಡಿಡಿ ಸಾಮರ್ತ್ಯದ ಟಾಪ್‌ 5 ಲ್ಯಾಪ್‌ಟಾಪ್ಸ್‌

 

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot