ಬ್ಯಾಟ್ ಮೌಸ್‌ಲ್ಲಿ ಕೂಲಾಗಿ ಕೆಲಸ ಮಾಡಿ
ಕಂಪ್ಯೂಟರ್ ಮೌಸ್‌ನಲ್ಲಿ ಪ್ರತಿದಿನ ಕ್ಲಿಕ್ ಮಾಡಿ ಕೈ ನೋಯ್ತಿದೆಯಾ ? ಹಾಗಾದ್ರೆ ನಿಮ್ಮ ನೋವನ್ನು ಪರಿಹಾರ ಮಾಡಲು ಹೊಸ ಮೌಸ್ ಮಾರುಕಟ್ಟೆಗೆ ಬರಲಿದೆ.
ವಾರದಲ್ಲಿ 20 ಗಂಟೆಗಿಂತ ಹೆಚ್ಚು ಸಮಯ ಮೌಸ್ ಬಳಸಿದರೆ ಕೈ ಮಣಿಕಟ್ಟಿಗೆ ನರ ರೋಗ ಲಕ್ಷಣ (carpal tunnel syndrome) ಕಾಣಿಸಿಕೊಳ್ಳುವ ಸಾಧ್ಯತೆ ಇದೆ ಎಂದು ಅಮೆರಿಕದ ವೈದ್ಯ ಡೇವಿಡ್ ನ್ಯೂಯಾರ್ಕ್ ಟೈಮ್ಸ್‌ಗೆ 2008ರಲ್ಲಿ ಸಂದರ್ಶನ ನೀಡಿದ್ದರು. ಈ ಹಿನ್ನೆಲೆಯಲ್ಲಿ ಈ ರೀತಿಯ ರೋಗ ಬರದಂತೆ ಕಿಬರ್ಡ್‌ಡಿನ್ ಡಿಸೈನ್ (kibardindesign) ಕಂಪೆನಿ ಹೊಸ ಮೌಸ್‌ನ್ನು ವಿನ್ಯಾಸ ಪಡಿಸುತ್ತಿದ್ದು ಈ ಮೌಸ್‌ಗೆ ಬ್ಯಾಟ್(BAT)ಮೌಸ್ ಎಂದು ಹೆಸರಿಡಲಾಗಿದೆ.
ಈ ಮೌಸ್ ಕೆಲಸ ಮಾಡುವ ಸಮಯದಲ್ಲಿ ಸಣ್ಣಗೆ ವೈಬ್ರೆಷನ್ ಆಗುವಂತೆ ವಿನ್ಯಾಸ ಮಾಡುತ್ತಿದ್ದಾರೆ. ಅಲ್ಲದೇ ಈಗಾಗ್ಲೇ ಬಳಕೆಯಾಗುವ ಮೌಸ್‌ಗಿಂತ ಈ ಮೌಸ್‌ನಲ್ಲಿ ಮೂರು ಪಟ್ಟು ಹೆಚ್ಚು ಆರಾಮವಾಗಿ ಕೆಲಸ ಮಾಡಬಹುದು ಎಂದು ಬ್ಯಾಟ್ ಮೌಸ್‌ನ್ನು ನಿರ್ಮಾಣ ಮಾಡುತ್ತಿರುವ ಕಿಬರ್ಡ್‌ಡಿನ್ ಡಿಸೈನ್ ಕಂಪೆನಿ ಹೇಳಿದೆ.
ಸದ್ಯ ಈ ಮೌಸ್ ಪ್ರಯೋಗಿಕ ಹಂತದಲ್ಲಿದ್ದು, ಈ ಮೌಸ್ ಹೇಗಿರುತ್ತದೆ ಎನ್ನುವುದಕ್ಕೆ ಇಲ್ಲಿ ಕೆಲ ಚಿತ್ರಗಳಿವೆ. ಒಂದೊಂದೆ ಪುಟ ತಿರುಗಿಸಿ ನೋಡಿಕೊಂಡು ಹೋಗಿ.

ಬ್ಯಾಟ್ ಮೌಸ್‌ಲ್ಲಿ ಕೂಲಾಗಿ ಕೆಲಸ ಮಾಡಿ

ಬ್ಯಾಟ್ ಮೌಸ್‌ಲ್ಲಿ ಕೂಲಾಗಿ ಕೆಲಸ ಮಾಡಿ

ಬ್ಯಾಟ್ ಮೌಸ್‌ಲ್ಲಿ ಕೂಲಾಗಿ ಕೆಲಸ ಮಾಡಿ

ಬ್ಯಾಟ್ ಮೌಸ್‌ಲ್ಲಿ ಕೂಲಾಗಿ ಕೆಲಸ ಮಾಡಿ



Click it and Unblock the Notifications