ಎಂಎಸ್ ಪೈಂಟ್ ಆಧುನಿಕ ಸ್ಪರ್ಶ, ಮತ್ತಷ್ಟು ವೈಶಿಷ್ಟ್ಯತೆಯೊಂದಿಗೆ ಬಳಸಬಹುದು!!

ಎಂಎಸ್ ಪೈಂಟ್ನಲ್ಲಿ ಕ್ಯಾಮೆರಾ ಚಿತ್ರಗಳ ಎಡಿಟ್, ಆಕಾರ ವಿಸ್ಯಾಸ, ವೈವಿಧ್ಯಮಯದಿಂದ ಕೂಡಿದ ಬಣ್ಣ ಲೇಪನ ಸೇರಿದಂತೆ ಇನ್ನೂ ಅನೇಕ ಹೊಸತನ ಆಧುನಿಕ ಸ್ಪರ್ಶ ಕೊಡಲಾಗಿದೆ.

By Prathap T
|

ಕ್ಯಾಮೆರಾದಿಂದ ತೆಗೆದಿರುವ ಚಿತ್ರಗಳ ಆಕರ್ಷಣೆ ಹೆಚ್ಚುವಂತೆ ಮಾಡಬೇಕಾದರೆ ಕಂಪ್ಯೂಟರ್ ನಲ್ಲಿ ಯಾವುದೋ ಅಪ್ಲಿಕೇಶನ್ ಬಗ್ಗೆ ದೀರ್ಘವಾಗಿ ತಿಳಿದುಕೊಳ್ಳಬೇಕಾದ ಅಗತ್ಯವಿಲ್ಲ. ಏಕೆಂದರೆ ಈಗ ಎಲ್ಲವನ್ನೂ ಎಂಎಸ್ ಪೈಂಟ್ ನಲ್ಲ ಮಾಡಬಹುದು!!

ಎಂಎಸ್ ಪೈಂಟ್ ಆಧುನಿಕ ಸ್ಪರ್ಶ, ಮತ್ತಷ್ಟು ವೈಶಿಷ್ಟ್ಯತೆಯೊಂದಿಗೆ ಬಳಸಬಹುದು!!

ಹೌದು, ನಂಬಲು ಆಶ್ಚರ್ಯವಾದರೂ ಸತ್ಯ. ಈಗ ಎಂಎಸ್ ಪೈಂಟ್ ನಲ್ಲಿ ಎಡಿಟ್ ಮಾಡುವ ಸುಲಭ ಉಪಾಯವನ್ನು ಪರಿಚಯಿಸಲಾಗಿದ್ದು, ಮಕ್ಕಳು, ಗೃಹಿಣಿಯರು ಸೇರಿದಂತೆ ಎಲ್ಲರೂ ಆಕರ್ಷಣೆ ಹೆಚ್ಚುವಂತೆ ಮಾಡಿದೆ.

ಮುಂಚೆ ಕಂಪ್ಯೂಟರ್ನಲ್ಲಿ ಬಳಸುವ ಎಂಎಸ್ ಪೈಂಟ್ ನಲ್ಲಿ ಕೇವಲ ಗೆರೆ ಎಳೆಯುವುದು, ಬಣ್ಣ ಹಚ್ಚುವುದು, ಅಳಿಸುವುದು ಅಥವಾ ಹೆಸರು ಬರೆಯುವುದಷ್ಟೆ ಮಾಡಬಹುದಾಗಿತ್ತು. ಆದರೆ ಈಗ ಹೊಸ ಆಧುನಿಕ ಸ್ಪರ್ಶ ನೀಡಲಾಗಿದೆ.

ನಿತಾ ಅಂಬಾನಿ ಬಳಸುವ ಫೋನ್ ಬೆಲೆ ಕೇಳಿದ್ರೆ ಶಾಕ್ ಆಗ್ತಿರಾ!!

ಚಿತ್ರವನ್ನು ರಿಸೈಜ್ ಮಾಡುಬಹುದು.

ಚಿತ್ರವನ್ನು ರಿಸೈಜ್ ಮಾಡುಬಹುದು.

ಚಿತ್ರವನ್ನು ತ್ವರಿತವಾಗಿ ರಿಸೈಜ್ ಮಾಡಲು ನೀವು ಬಯಸಿದರೆ, ನೀವು ಅದನ್ನು ಎಂಎಸ್ ಪೈಂಟ್ ನಲ್ಲೇ ಮಾಡಬಹುದು. ಮೊದಲು ಪೇಂಟ್ ಅಪ್ಲಿಕೇಶನ್ ಅನ್ನು ತೆರೆಯಬೇಕು. ರಿಸೈಜ್ ಬಟನ್ ಕ್ಲಿಕ್ ಮಾಡಿ ಮತ್ತು ಅದನ್ನು ತಿರುಚಿಸಿ. ಇದಲ್ಲದೆ, ನೀವು ಫೈಲ್ ಅನ್ನು ಯಾವುದೇ ಸ್ವರೂಪದಲ್ಲಿ ಉಳಿಸಬಹುದು.

ನಿಖರವಾದ ಸಂಪಾದನೆ

ನಿಖರವಾದ ಸಂಪಾದನೆ

ನಿಮ್ಮ ಫೈಲ್ನಲ್ಲಿ ನಿಖರವಾಗಿ ವಿಷಯಗಳನ್ನು ಜೋಡಿಸಲು ನೀವು ಬಯಸಿದರೆ, ನೀವು ಯಾವಾಗಲೂ ಎಂಎಸ್ ಪೈಂಟ್ ಬಳಸಬಹುದು. ವೀವ್-> ಗ್ರಿಡ್ಲೈನ್ಸ್ ಅಡಿಯಲ್ಲಿ ನೀವು ವಿಷಯಗಳನ್ನು ನಿಖರವಾಗಿ ಹೊಂದಿಸಬಹುದು.

ಉತ್ತಮ ಸಂಪಾದನೆ ಪರಿಕರಗಳು

ಉತ್ತಮ ಸಂಪಾದನೆ ಪರಿಕರಗಳು

ಎಂಎಸ್ ಪೈಂಟ್ ಯಾವಾಗಲೂ ಕೆಲವು ಉತ್ತಮ ಎಡಿಟಿಂಗ್ ಉಪಕರಣಗಳನ್ನು ಹೊಂದಿದೆ, ಅದರಲ್ಲಿ ನೀವು ಕೆಂಪು-ಕಣ್ಣಿನ ಸಮಸ್ಯೆಯನ್ನು ಸರಿಪಡಿಸಬಹುದು, ಚಿತ್ರ ಬ್ಯಾಕ್ ಗ್ರೌಂಡ್ ಅನ್ನು ತೆಗೆದು ಹಾಕಬಹುದು, ಜೂಮ್ ಮಾಡಬಹುದು ಮತ್ತು ಚಿತ್ರದ ಅಂದವನ್ನು ಹೆಚ್ಚಿಸಬಹುದು.

ಚಿತ್ರ ಸ್ಥಾನೀಕರಣ

ಚಿತ್ರ ಸ್ಥಾನೀಕರಣ

ನಾವು ಇಮೇಜ್ ಅನ್ನು ವರ್ಗಾವಣೆ ಮಾಡುವಾಗ, ಅದು ಸರಿಯಾದ ಸ್ಥಾನದಲ್ಲಿ ಇರುವುದಿಲ್ಲ. ಈ ಸಂದರ್ಭದಲ್ಲಿ ಎಂಎಸ್ ಪೈಂಟ್ ಗೆ ಹೋಗುವುದರ ಮೂಲಕ ನೀವು ಅದನ್ನು ತ್ವರಿತವಾಗಿ ಬದಲಾಯಿಸಬಹುದು. ಇಮೇಜ್ ರೋಟೇಶನ್ ಸಹಾಯದಿಂದ, ನೀವು ಚಿತ್ರದ ಸ್ಥಾನವನ್ನು ಬದಲಾಯಿಸಬಹುದು.

ಚಿತ್ರ ಸ್ವರೂಪಗಳು

ಚಿತ್ರ ಸ್ವರೂಪಗಳು

ಎಂಎಸ್ ಪೈಂಟ್ನಿಂದ ಯಾವುದೇ ತೊಂದರೆಗಳಿಲ್ಲದೆಯೇ ನೀವು ಫೈಲ್ ಸ್ವರೂಪಗಳನ್ನು ಬದಲಾಯಿಸಬಹುದು. ಒಂದು ವೇಳೆ, ನೀವು ಜೆಪಿಸಿ ಗೆ ಜಿಫ್ ಫೈಲ್ ಅನ್ನು ಬದಲಾಯಿಸಲು ಬಯಸಿದರೆ, ಪೇಂಟ್ನಲ್ಲಿ ಫೈಲ್ ಅನ್ನು ಕಾಪಿ ಪಾಸ್ಟಿಂಗ್ ಮಾಡುವ ಮೂಲಕ ಜೆಪಿಸಜಿ ನಲ್ಲಿ ಸೇವ್ ಮಾಡಬಹುದು.

ಕಲರ್ ರಿಪ್ಲೇಸರ್

ಕಲರ್ ರಿಪ್ಲೇಸರ್

ವಾಸ್ತವವಾಗಿ, ಎಮ್ಎಸ್ ಪೈಂಟ್ನಲ್ಲಿ ಎರೇಸರ್ ಉಪಕರಣದ ಸಹಾಯದಿಂದ ನೀವು ಒಂದು ಬಣ್ಣವನ್ನು ಮತ್ತೊಂದನ್ನು ಬದಲಾಯಿಸಬಹುದು. ಎರೇಸರ್ ಟೂಲ್ ಮತ್ತು ನೀವು ಅದನ್ನು ಬದಲಾಯಿಸಲು ಬಯಸುವ ಬಣ್ಣವನ್ನು ಆಯ್ಕೆ ಮಾಡುವುದು ನೀವು ಮಾಡಬೇಕಾಗಿರುವುದು.

ಬ್ರಷ್ ಗಾತ್ರಗಳು

ಬ್ರಷ್ ಗಾತ್ರಗಳು

ಎಂಎಸ್ ಪೈಂಟ್ನಲ್ಲಿ ನೀವು ಕುಂಚಗಳ ವೈವಿಧ್ಯತೆಗಳನ್ನು ಪಡೆಯುತ್ತೀರಿ - ಮೈಕ್ರೋ, xxxx- ಸಣ್ಣ, ಮತ್ತು xxx- ಸಣ್ಣ. CTRL ಮತ್ತು +/- ಸಂಕೇತಗಳನ್ನು ಬಳಸಿಕೊಂಡು ನೀವು ಅದನ್ನು ದೊಡ್ಡದಾಗಿ / ಸಣ್ಣದಾಗಿ ಮಾಡಬಹುದು.

Best Mobiles in India

Read more about:
English summary
The well known MS Paint has more tools than you think apart from helping you with drawing and coloring.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X