Subscribe to Gizbot

ಮೇಕ್ ಮೈ ಟ್ರಿಪ್ ಇನ್ನು ಕನ್ನಡದಲ್ಲೂ!!!

Written By:

ಆನ್‌ಲೈನ್ ಪ್ರಯಾಣ ಸಂಸ್ಥೆ ಮೇಕ್ ಮೈ ಟ್ರಿಪ್ ಗುರುವಾರ ತನ್ನ ಹಿಂದಿ ವೆಬ್‌ಸೈಟ್ ಅನ್ನು ಲಾಂಚ್ ಮಾಡಿದೆ ಮತ್ತು ಇದನ್ನು ತನ್ನ ಸ್ಥಳೀಯ ಭಾಷೆಗಳಾದ ಅಂದರೆ ಗುಜರಾತಿ ಮತ್ತು ತಮಿಳು, ಕನ್ನಡ ಕ್ಕೆ ಮುಂದಿನ ವರ್ಷದಲ್ಲಿ ವಿಸ್ತರಿಸುವ ಯೋಜನೆಯನ್ನು ಹಮ್ಮಿಕೊಂಡಿದೆ.

ಪ್ರಯಾಣದ ಮಾಹಿತಿ ಇನ್ನು ಕನ್ನಡ ಭಾಷೆಯಲ್ಲಿ

ಈ ಯೋಜನೆಯು 78 ಕೋಟಿ ಜನರಿಗೆ ಪ್ರಯೋಜನವನ್ನು ಒದಗಿಸಲಿದ್ದು, ಭಾರತದಲ್ಲಿ ಹೆಚ್ಚು ಸ್ಥಳೀಯ ಭಾಷೆಯನ್ನು ಮಾತನಾಡುವವರಿಗೆ ಇದು ಉಪಕಾರಿಯಾಗಲಿದೆ. ಪ್ರಯಾಣದ ಸಂಪೂರ್ಣ ವಿವರವನ್ನು ಒಳಗೊಂಡಿರುವ ಮಾಹಿತಿಯನ್ನು ಹಿಂದಿ ವೆಬ್‌ಸೈಟ್ ಒಳಗೊಂಡಿದ್ದು ಮೊಬೈಲ್‌ನಲ್ಲಿ ಮಾಹಿತಿಯನ್ನು ಪಡೆದುಕೊಳ್ಳಬಹುದು. ಇದೇ ಕಾರ್ಯವನ್ನು ಇತರ ಭಾಷಾ ಅಪ್ಲಿಕೇಶನ್‌ಗಳಿಗೆ ವಿಸ್ತರಿಸುವ ಮೂಲಕ ಪ್ರಯಾಣದ ಅನುಭವವನ್ನು ಸ್ಥಳೀಯ ಜನರಿಗೂ ಮೇಕ್ ಮೈ ಟ್ರಿಪ್ ನೀಡಲಿದೆ.

ಇದನ್ನೂ ಓದಿ: ಮೋಜಿನ ಸಂತಸಭರಿತ ಚಿತ್ರಗಳ ಮೇಳ

ಪ್ರಸ್ತುತ ಮೇಕ್ ಮೈ ಟ್ರಿಪ್ ಪ್ರಸ್ತುತ ವೆಬ್‌ಸೈಟ್, ಮೊಬೈಲ್ ಸೈಟ್ ಮತ್ತು ಇಂಗ್ಲೀಷ್ ಅಪ್ಲಿಕೇಶನ್ ಅನ್ನು ಒದಗಿಸುತ್ತಿದ್ದು ಬಳಕೆದಾರರು ಹುಡುಕಾಟ, ನೋಂದಾವಣೆ ಮತ್ತು ಅಂತರಾಷ್ಟ್ರೀಯ ಫ್ಲೈಟ್ ಟಿಕೇಟ್‌ಗಳಿಗೆ ಪಾವತಿಯನ್ನು ಮಾಡಬಹುದಾಗಿದೆ ಮತ್ತು ವಿಮಾನ, ಬಸ್ ಹಾಗೂ ಹೋಟೆಲ್ ಟಿಕೇಟ್‌ಗಳನ್ನು ಕೂಡ ಕಾಯ್ದಿರಿಸಬಹುದಾಗಿದೆ.

ಇನ್ನು ಮೊಬೈಲ್ ಪ್ಲಾಟ್‌ಫಾರ್ಮ್‌ಗಳಾದ ಆಂಡ್ರಾಯ್ಡ್, ಐಫೋನ್, ವಿಂಡೋಸ್ ಮತ್ತು ಬ್ಲ್ಯಾಕ್‌ಬೆರ್ರಿಯಾದ್ಯಂತ ಮೇಕ್ ಮೈ ಟ್ರಿಪ್ ಟ್ರಾವೆಲ್ ಅಪ್ಲಿಕೇಶನ್ ನಾಲ್ಕು ಮಿಲಿಯನ್‌ಗಿಂತಲೂ ಹೆಚ್ಚಿನ ಅಪ್ಲಿಕೇಶನ್ ಡೌನ್‌ಲೋಡ್‌ಗಳನ್ನು ದಾಟಿದೆ ಎಂದು ಮೇಕ್ ಮೈ ಟ್ರಿಪ್.ಕಾಮ್ ಮುಖ್ಯಸ್ಥರಾದ ಪ್ರಣವ್ ಭಾಷಿನ್ ತಿಳಿಸಿದ್ದಾರೆ.

ಪ್ರಯಾಣದ ಮಾಹಿತಿ ಮತ್ತು ಬುಕ್ಕಿಂಗ್ ಅನ್ನು ನಮ್ಮೊಂದಿಗೆ ಮಾಡಿಕೊಳ್ಳಲು ಮೊಬೈಲ್ ಸೂಕ್ತ ಮಾಧ್ಯಮವಾಗಿದೆ. 24% ದಷ್ಟು ಬುಕ್ಕಿಂಗ್ ಅನ್ನು ಪ್ರಯಾಣಿಕರು ಮೊಬೈಲ್ ಫೋನ್‌ಗಳಲ್ಲೇ ಮಾಡುತ್ತಿದ್ದು, ಒಟ್ಟಾರೆ 30% ದಷ್ಟು ಟ್ರಾಫಿಕ್ ಮೊಬೈಲ್‌ನಿಂದಲೇ ನಮಗೆ ದೊರೆಯುತ್ತಿದೆ ಎಂದು ಭಾಷಿನ್ ತಿಳಿಸಿದ್ದಾರೆ.

ಮೊಬೈಲ್, ಟ್ಯಾಬ್ಲೆಟ್ ಮತ್ತು ವೆಬ್ ಅನ್ನು ಬಳಸಿಕೊಂಡು ಗ್ರಾಹಕರಿಗೆ ಅತ್ಯುತ್ತಮ ಪ್ರಯಾಣ ಅನುಭವವನ್ನು ನೀಡುವುದು ನಮ್ಮ ಗುರಿಯಾಗಿದೆ ಎಂದು ಅವರು ತಿಳಿಸಿದ್ದಾರೆ. ದೆಹಲಿ, ಮುಂಬೈ ಮತ್ತು ಬೆಂಗಳೂರು 52% ದಷ್ಟು ಮೊಬೈಲ್ ಟ್ರಾಫಿಕ್ ಅನ್ನು ಒದಗಿಸುತ್ತಿದ್ದು, ಅಹಮದಾಬಾದ್, ಜೈಪುರ ಮತ್ತು ಚಂಡೀಗಢ ಮೇಕ್ ಮೈ ಟ್ರಿಪ್‌ನ ಅತ್ಯುತ್ತಮ ಮೆಟ್ರೊ ಟ್ರಾಫಿಕ್ ಅನ್ನು ಒದಗಿಸಿವೆ.

English summary
This article tells about Online travel firm MakeMyTrip on Thursday launched its Hindi website and said it will be expanded to cover other regional languages like Gujarati and Tamil, Kannada by the first half of next year.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot