ಅಗ್ಗದ ಸುಂದರ ಆಂಡ್ರಾಯ್ಡ್ ಟ್ಯಾಬ್ಲೆಟಿಗೆ ಜೈಹೋ..

|

ಅಗ್ಗದ ಸುಂದರ ಆಂಡ್ರಾಯ್ಡ್ ಟ್ಯಾಬ್ಲೆಟಿಗೆ ಜೈಹೋ..
ಆಂಡ್ರಾಯ್ಡ್ ಟ್ಯಾಬ್ಲೆಟ್ ಗಳು ಗಾತ್ರ, ವಿನ್ಯಾಸ ಮತ್ತು ಫೀಚರುಗಳ ಮೂಲಕ ಗ್ರಾಹಕರನ್ನು ಸೆಳೆಯುತ್ತವೆ. ಆದರೆ ಸಮಸ್ಯೆಯೆಂದರೆ ಈ ಎಲ್ಲಾ ಟ್ಯಾಬ್ಲೆಟ್ ಗಳ ದರ ಮಾತ್ರ ದುಬಾರಿ. ಆದರೆ ಮೆಡಿಯೊನ್ ಕಂಪನಿಯು ಪರಿಚಯಿಸಿರುವ Medion LifeTab P9514 ಟ್ಯಾಬ್ಲೆಟ್ ದರ ಮಾತ್ರ ಅಗ್ಗ.

ನೂತನ ಮೆಡಿಯೊನ್ ಟ್ಯಾಬ್ಲೆಟ್ ದರ ಕಡಿಮೆಯಿದ್ದರು, ಫೀಚರುಗಳ ವಿಷಯದಲ್ಲಿ ಯಾವುದೇ ಕುಂದು ಉಂಟಾಗಿಲ್ಲ. ಇದು ಇತರ ಟ್ಯಾಬ್ಲೆಟ್ ಗಳಿಗಿಂತ ಯಾವುದೇ ಭಿನ್ನ ವಿಶೇಷ ಹೊಂದಿಲ್ಲ. ಆದರೆ ಸೂಕ್ಷ್ಮವಾಗಿ ನೋಡಿದಾಗ ಫೀಚರು ಮತ್ತು ಕಾರ್ಯಕ್ಷಮತೆಯಲ್ಲಿ ಕೊಂಚ ಭಿನ್ನತೆ ಕಂಡು ಬರುತ್ತದೆ. ಇದು 10.1 ಇಂಚಿನ ಟಿಎಫ್ಟಿ ಟಚ್ ಸ್ಕ್ರೀನ್ ಹೊಂದಿದೆ.

Medion LifeTab P9514 ಫೀಚರುಗಳು

* 10.1 ಇಂಚಿನ ಟಿಎಫ್ ಟಿ ಟಚ್ ಸ್ಕ್ರೀನ್ ಡಿಸ್ ಪ್ಲೇ

* 32 ಜಿಬಿ ಆಂತರಿಕ ಮೆಮೊರಿ

* ಆಕರ್ಷಕ ವಿನ್ಯಾಸ

* ಮೈಕ್ರೋ ಎಸ್ ಡಿ ಮೆಮೊರಿ ಕಾರ್ಡ್ ಮತ್ತು ಸಿಮ್ ಸ್ಲಾಟ್

* ಎಚ್ ಡಿಎಂಐ ಔಟ್

* ಡಕ್ ಕನೆಕ್ಟರ್

* ಗೂಗಲ್ ಆಂಡ್ರಾಯ್ಡ್ ವಿ3.2 ಹನಿಕಾಂಬ್ ಅಪರೇಟಿಂಗ್ ಸಿಸ್ಟಮ್

* ಫ್ಲಾಷ್ ವೆಬ್ ಬ್ರೌಸಿಂಗ್

* ಫೈಲುಗಳ ನಿರ್ವಹಣೆಗಾಗಿ ಇಎಸ್ ಫೈಲ್ ಎಕ್ಸ್ ಪ್ಲೋರರ್ ಅಪ್ಲಿಕೇಷನ್

* ಎಂಎಸ್ ಆಫೀಸಿನಂತಹ ಅಪ್ಲಿಕೇಷನಿನಲ್ಲಿ ಡಾಕ್ಯುಮೆಂಟ್ ಶೇಖರಣೆ

* ಎರಡು ಕ್ಯಾಮರಾ: ಹಿಂಭಾಗದಲ್ಲಿ 5 ಮೆಗಾಪಿಕ್ಸೆಲ್, ಮುಂಭಾಗದಲ್ಲಿ 2 ಮೆಗಾಫಿಕ್ಸೆಲ್ ಕ್ಯಾಮರಾ

* ಮುಂಭಾಗದ ಕ್ಯಾಮರಾ ವಿಡಿಯೋ ಕಾನ್ಫರೆನ್ಸ್ ಬೆಂಬಲ ನೀಡುತ್ತದೆ.

* ಡಾಕ್ ಕನೆಕ್ಷನ್ ಮೂಲಕ ವೇಗವಾಗಿ ಚಾರ್ಜ್ ಮಾಡಬಹುದು.

Medion LifeTab P9514 ಇಷ್ಟವಾಗದ ಸಂಗತಿಗಳು

* ಹೆಚ್ಚು ಬೆಳಕಿರುವ ಸ್ಥಳದಲ್ಲಿ ಸ್ಕ್ರೀನ್ ವೀಕ್ಷಣೆ ಕಷ್ಟ

* ಪವರ್ ಮತ್ತು ವಾಲ್ಯೂಂ ಬಟನ್ ಗುಣಮಟ್ಟ ಕಳಪೆ. ಗಟ್ಟಿಯಾಗಿ ಒತ್ತಿದರೆ ಮಾತ್ರ ಕೆಲಸ ಮಾಡುತ್ತದೆ.

* ಮಾಮೂಲಿ ಟ್ಯಾಬ್ಲೆಟ್ ಗಿಂತ ತೂಕ ಜಾಸ್ತಿ. ಇದರ ತೂಕ 720 ಗ್ರಾಂ.

* ಹೋಮ್ ಸ್ಕ್ರೀನ್ ನಲ್ಲಿ ಹೆಚ್ಚು ವಿಡ್ಜೆಟ್ ಬಳಸಲು ಸಾಧ್ಯವಿಲ್ಲ

* ಗುಣಮಟ್ಟದ ಚಿತ್ರಗಳನ್ನು ತೆಗೆಯಲು ಕ್ಯಾಮರಾ ಪೂರಕವಾಗಿಲ್ಲ

* 5 ಗಂಟೆ ಬ್ಯಾಟರಿ ಬಾಳಿಕೆ ಇಷ್ಟವಾಗದು.

ಮೆಡಿಯನ್ ಲೈಫ್ ಟ್ಯಾಬ್ ಸಾಕಷ್ಟು ಫೀಚರುಗಳನ್ನು ಹೊಂದಿದ್ದರೂ ಗುಣಮಟ್ಟದ ವಿಷಯದಲ್ಲಿ ಕೊಂಚ ದೂರುಗಳಿವೆ. ಹಾಗಂತ ಈ ಟ್ಯಾಬ್ಲೆಟ್ ಗುಣಮಟ್ಟ ಕೆಟ್ಟದಾಗಿಯೇನು ಇಲ್ಲ. ಇದಕ್ಕಾಗಿ ಆಂಡ್ರಾಯ್ಡ್ ಹನಿಕಾಂಬ್ ಅಪರೇಟಿಂಗ್ ಸಿಸ್ಟಮ್ ಗೆ ಧನ್ಯವಾದ ಹೇಳಬೇಕು.

ಕಂಪನಿಯ ಪ್ರಕಾರ ಈ ಟ್ಯಾಬ್ಲೆಟ್ ಬ್ಯಾಟರಿ ಬಾಳಿಕೆ 8 ಗಂಟೆ. ಆದರೆ ವರದಿಗಳ ಪ್ರಕಾರ ಇದರ ಬ್ಯಾಟರಿ 8 ಗಂಟೆಗಿಂತ ಹೆಚ್ಚು ಕೆಲಸ ಮಾಡುವುದಿಲ್ಲ. ಈ ಕೊರತೆಗಳ ನಡುವೆಯೂ ಈ ಟ್ಯಾಬ್ಲೆಟ್ ಇಷ್ಟಪಡಲು ಬೇಕಾದಷ್ಟು ಫೀಚರುಗಳಿವೆ. ಇಷ್ಟವಾದವರು ಖರೀದಿಸಬಹುದು. ಇದರ ದರ ಸುಮಾರು 25 ಸಾವಿರ ರುಪಾಯಿ ಆಸುಪಾಸಿನಲ್ಲಿದೆ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X