Subscribe to Gizbot

ಫೆರಾರಿ ಅಭಿಮಾನಿಗಳಿಗೋಸ್ಕರ ಡೇಟಾ ಕಾರ್ಡ್

Posted By: Varun
ಫೆರಾರಿ ಅಭಿಮಾನಿಗಳಿಗೋಸ್ಕರ ಡೇಟಾ ಕಾರ್ಡ್
ವಿಶ್ವವಿಖ್ಯಾತ ಕಾರ್ ಉತ್ಪಾದಕ ಇಟಲಿಯ ಫೆರಾರಿ ಕಂಪನಿ ಅಂದರೇನೇ ಫಾರ್ಮುಲಾ 1 ರೇಸ್ ಹಾಗು ಕಾರ್ ಕ್ರೇಜಿ ಹುಡುಗರ ಮೈನವಿರೇಳುತ್ತದೆ. ಫೆರಾರಿ ಕಂಪನಿಯ ಕಾರ್ ಅಷ್ಟೇ ಅಲ್ಲದೆ ರೇಸಿಂಗ್ ಜ್ಯಾಕೆಟ್, ಕ್ಯಾಪ್, ವಾಚ್ ಹಾಗು ಅನೇಕ ಉತ್ಪನ್ನಗಳನ್ನೂ ಉತ್ಪಾದನೆ ಮಾಡುತ್ತೆ ಅಂತ ಸುಮಾರು ಜನರಿಗೆ ಗೊತ್ತಿಲ್ಲ.

ಅದರ ಬ್ರ್ಯಾಂಡ್ ವ್ಯಾಲ್ಯೂ ಗೊಸ್ಕರವೆ ಅನೇಕ ಜನ ಖರೀದಿ ಮಾಡುತ್ತಾರೆ. ಇದನ್ನು ಗಮನದಲ್ಲಿ ಇಟ್ಟುಕೊಂಡು ಮೈಕ್ರೋಮ್ಯಾಕ್ಸ್ ಮೊಬೈಲ್ ಕಂಪನಿಯು ಸ್ನಾಪ್ ಡೀಲ್ ಜೊತೆ ಸೇರಿಕೊಂಡು ಫೆರಾರಿ ಲೋಗೋ ಇರುವ ಡೇಟಾ ಕಾರ್ಡ್ ಒಂದನ್ನು ಬಿಡುಗಡೆ ಮಾಡಿದೆ.

ಓಪಸ್ MMX144F ಹೆಸರಿನ ಈ ಡೇಟಾ ಕಾರ್ಡ್ , ಫೆರಾರಿ ಲೋಗೋ ಹೊಂದಿದ್ದು 14.4 Mbps ಸ್ಪೀಡ್ ಇಂಟರ್ನೆಟ್ ಸ್ಪೀಡ್ ಇರಲಿದೆ. ಇದು ಸಾಮಾನ್ಯ ಡೇಟಾ ಕಾರ್ಡ್ ಗಿಂತಾ ದುಪ್ಪಟ್ಟು ವೇಗವನ್ನು ಹೊಂದಿದ್ದು, ಫೆರಾರಿ ರೆಡ್ ಬಣ್ಣದಲ್ಲಿ ಬರಲಿದೆ.

ಯಾವುದೇ ಮೊಬೈಲ್ ಸೇವಾದಾರರ GSM ಸಿಮ್ ಕಾರ್ಡ್ ಅನ್ನು ಹಾಕಿ ಇಂಟರ್ನೆಟ್ ಬಳಸಬಹುದಾಗಿದ್ದು 32 GB ವರೆಗೂ ವಿಸ್ತರಿಸಬಹುದಾದ ಮೆಮೊರಿ ಸ್ಲಾಟ್ ಹೊಂದಿದೆ.

ಒಂದು ವರ್ಷ ವಾರಂಟಿ ಹೊಂದಿರುವ ಫೆರಾರಿ ಡೇಟಾ ಕಾರ್ಡಿನ ಬೆಲೆ 2,499 ರೂಪಾಯಿ.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot