ಮೈಕ್ರೋಮ್ಯಾಕ್ಸ್ ಫನ್‌ಬುಕ್ ಇನ್ಫಿನಿಟಿ (P275) ಬಿಡುಗಡೆ
ಮೈಕ್ರೋಮ್ಯಾಕ್ಸ್ ಒಂದರ ಹಿಂದೆ ಒಂದರಂತೆ ಕೈಗೆಟಕುವ ದರದಲ್ಲಿ ಅಗ್ಗದ ಬಡಲೆಯ ಟ್ಯಾಬ್ಲೆಟ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿದೆ. ಭಾರತೀಯ ಗ್ರಾಹಕರು ಗಳಿಗಾಗಿಯೇ ಅಗ್ಗದ ಬೆಲೆಯಲ್ಲಿ ನೂತನ ಸಾಧನಗಳನ್ನು ಬಿಡುಗಡೆ ಮಾಡುತ್ತಿರುವತ್ತಿರುವ ಮೈಕ್ರೋಮ್ಯಾಕ್ಸ್ ಈ ಸಾಲಿಗೆ ನೂತನವಾಗಿ ಫನ್‌ಬುಕ್ ಇನ್‌ಫಿನಿಟಿ (P275) ಟ್ಯಾಬ್ಲೆಟ್ ಅನ್ನು 6,999 ರೂ. ಬೆಲೆಗೆ ಬಿಡುಗಡೆ ಮಾಡಿದೆ.
ಅಂದಹಾಗೆ ಈ ಡ್ಯಾಬ್ಲೆಟ್ ಖರೀದಿಸಬೇಕು ಎಂದು ಆಲೋಚಿಸಿದ್ದೀರ ಹಾಗಿದ್ದಲ್ಲಿ ಇದರಲ್ಲಿನ ವಿಶೇಷತೆಗಳಕಡೆ ಒಮ್ಮೆ ಗಮನ ಹರಿಸಿ.
ಗಾತ್ರ ಹಾಗೂ ತೂಕ: ಫನ್‌ಬುಕ್ ಇನ್‌ಫಿನಿಟಿ 122 x 192 x 10 mm ಸುತ್ತಳತೆಯೊಂದಿಗೆ 360 ಗ್ರಾಂ ತೂಕವಿದೆ.
ದರ್ಶಕ: 7 ಇಂಚಿನ ಟಚ್‌ಸ್ಕ್ರೀನ್ ದರ್ಶಕ ಹಾಗೂ 800 x 480 ಪಿಕ್ಸೆಲ್ ರೆಸೆಲ್ಯೂಷನ್ ಹೊಂದಿದೆ..
ಪ್ರೊಸೆಸರ್: 1.2GHz ಕಾರ್ಟೆಕ್ಸ್ A8 ಪ್ರೊಸೆಸರ್.
ಆಪರೇಟಿಂಗ್ ಸಿಸ್ಟಂ: ಅಗ್ಗದ ಬೆಲೆಯ ಟ್ಯಾಬ್ಲೆಟ್ ಆದ್ದರಿಂದ ಆಂಡ್ರಾಯ್ಡ 4.0.4 ಐಸ್‌ಕ್ರೀಮ್ ಸ್ಯಾಂಡ್ವಿಚ್ OS ಹೊಂದಿದೆ.
ಕ್ಯಾಮೆರಾ: 2MP ಹಿಂಬದಿಯ ಕ್ಯಾಮೆರಾ ಹಾಗೂ ವಿಡಿಯೋ ಕರೆಗಾಗಿ ಮುಂಬದಿಯ 0.3MP ಇದೆ.
ಮೆಮೊರಿ: 4GB ಆಂತರಿ ಸ್ಟೋರೇಜ್, 512MB RAM ಹಾಗೂ ಮೈಕ್ರೋ SD ಕಾರ್ಡ್ ಮೂಲಕ 32GB ವರೆಗೆ ಮೆಮೊರಿ ವಿಸ್ತರಿಸಬಹುದಾಗಿದೆ.
ಕನೆಕ್ಟಿವಿಟಿ: Wi-Fi ಹಾಗೂ 3G ಹೊಂದಿದೆ.
ಬ್ಯಾಟರಿ: ಫನ್‌ಬುಕ್ ಇನ್‌ಫಿನಿಟಿ ಯಲ್ಲಿ 4000mAh ಬ್ಯಾಟರಿ ಇದ್ದು 6 ಬ್ಯಾಕಪ್ ನೀಡಬಲ್ಲದು.
ಬೆಲೆ ಹಾಗೂ ಲಭ್ಯತೆ
ಮೈಕ್ರೋಮ್ಯಾಕ್ಸ ತನ್ನಯ ನೂತನ ಫನ್‌ಬುಕ್ ಇನ್‌ಫಿನಿಟಿ ಟ್ಯಾಬ್ಲೆಟ್ ಅನ್ನು 6,999 ರೂ ಬೆಲೆಗೆ ಬಿಡುಗಡೆ ಮಾಡಿದ್ದು ದೇಶದಾದ್ಯಂತ ಇರುವ ಅಧಿಕೃತ ಮಳಿಗೆಗಳು ಹಾಗೂ ಮೈಕ್ರೋಮ್ಯಾಕ್ಸ್‌ನ ಇ-ಸ್ಟೋರ್‌ನಲ್ಲಿ ಖರೀದಿಸ ಬಹುದಾಗಿದೆ.


Click it and Unblock the Notifications
