ಅಂಗವಿಕಲತೆಯನ್ನು ಮೆಟ್ಟಿನಿಲ್ಲಲು ಮೈಕ್ರೋಸಾಫ್ಟ್ ದಿಟ್ಟ ಹೆಜ್ಜೆ

ನರದೌರ್ಬಲ್ಯವುಳ್ಳವರಿಗಾಗಿಯೇ ಮೈಕ್ರೋಸಾಫ್ಟ್ ಕಂಪ್ಯೂಟರ್ ಬಳಕೆಯನ್ನು ಸುಲಭಗೊಳಿಸಲು ಐ ಟ್ರ್ಯಾಕಿಂಗ್‌ನಂತಹ ವ್ಯವಸ್ಥೆಯನ್ನು ಜಾರಿಗೆ ತಂದಿದೆ.

By Shwetha Ps
|

ಮೈಕ್ರೋಸಾಫ್ಟ್ ತನ್ನ ಮುಂಬರಲಿರುವ ಆವೃತ್ತಿ ವಿಂಡೋಸ್ 10 ನಲ್ಲಿ ಐ ಟ್ರ್ಯಾಕಿಂಗ್ ಫೀಚರ್ ಅನ್ನು ಪರಿಚಯಿಸುವುದಾಗಿ ದೃಢೀಕರಿಸಿದೆ. ರೆಡ್‌ಮೋಡ್ ಆಧಾರಿತ ಟೆಕ್ ದೈತ್ಯ ಇನ್ನಷ್ಟು ಮಾಹಿತಿಗಳನ್ನು ಖಚಿತಪಡಿಸಿಕೊಂಡಿದ್ದು ಈ ಫೀಚರ್ ಪ್ರಸ್ತುತ ಲಭ್ಯವಿರುವ ಡಿವೈಸ್‌ಗಳನ್ನು ಬೆಂಬಲಿಸಲಿದ್ದು ಟೋಬಿ ತಯಾರಿಸಿರುವ ಟ್ರ್ಯಾಕರ್‌ಗಳನ್ನು ಇದು ಒಳಗೊಂಡಿದೆ.

ಅಂಗವಿಕಲತೆಯನ್ನು ಮೆಟ್ಟಿನಿಲ್ಲಲು ಮೈಕ್ರೋಸಾಫ್ಟ್ ದಿಟ್ಟ ಹೆಜ್ಜೆ

ಈ ಫೀಚರ್ ಇನ್ನೂ ಅಭಿವೃದ್ಧಿ ಹಂತದಲ್ಲಿದ್ದು ನರಸ್ನಾಯು ಸಂಬಂಧಿ ರೋಗಿಗಳಿಗೆ ಅದರಲ್ಲೂ ಎಲ್‌ಎಸ್‌ನಂತಹ ಕಾಯಿಲೆಯಿಂದ ಬಳಲುತ್ತಿರುವವರಿಗೆ ಸಹಕಾರಿಯಾಗಲಿದೆ. ಇಂತಹ ರೋಗಿಗಳಿಗೆ ಕೇವಲ ತಮ್ಮ ಕಣ್ಣುಗಳು ಮತ್ತು ಮುಖದ ಸ್ನಾಯುಗಳನ್ನು ಮಾತ್ರ ಸರಿಸಲು ಸಾಧ್ಯವಾಗುತ್ತದೆ. ಮೈಕ್ರೋಸಾಫ್ಟ್‌ನ ಐ ಟ್ರ್ಯಾಕಿಂಗ್ ವ್ಯವಸ್ಥೆಯಿಂದ ಪಿಸಿಯನ್ನು ತಮ್ಮ ಕಣ್ಣುಗಳಿಂದಲೇ ನಿಯಂತ್ರಿಸಲು ಇವರಿಗೆ ಸಾಧ್ಯವಾಗಲಿದೆ.

ನಡಿಯದ ಏರ್‌ಟೆಲ್ ಆಟ: ವೇಗದ ಇಂಟೆರ್‌ನೆಟ್ ಪಟ್ಟ ಜಿಯೋಗೆನಡಿಯದ ಏರ್‌ಟೆಲ್ ಆಟ: ವೇಗದ ಇಂಟೆರ್‌ನೆಟ್ ಪಟ್ಟ ಜಿಯೋಗೆ

ಮೌಸ್, ಸ್ಕ್ರೀನ್, ಕೀಬೋರ್ಡ್ ಮತ್ತು ಪಠ್ಯ ಭಾಷೆಯಂತಹ ಸೌಲಭ್ಯಗಳನ್ನು ಪಡೆದುಕೊಳ್ಳಲು ಅಸಾಧ್ಯರಾಗಿರುವವರಿಗೆ ಈ ಐ ಟ್ರ್ಯಾಕಿಂಗ್ ವ್ಯವಸ್ಥೆ ಸಹಕಾರಿಯಾಗಲಿದೆ. ಟೋಬಿ 4ಸಿಯಂತಹ ಕಾಂಪಿಟೇಬಲ್ ಐ ಟ್ರ್ಯಾಕರ್ ವ್ಯವಸ್ಥೆ ಇದಕ್ಕೆ ಬೇಕಾಗಿದ್ದು ವಿಂಡೋಸ್ ಪ್ರವೇಶವನ್ನು ಇದು ಅನ್‌ಲಾಕ್ ಮಾಡಲಿದ್ದು ದೈಹಿಕ ಮೌಸ್ ಮತ್ತು ಕೀಬೋರ್ಡ್‌ನಂತೆಯೇ ಈ ವ್ಯವಸ್ಥೆಯ ಮೂಲಕ ಇವುಗಳನ್ನು ಬಳಸಬಹುದಾಗಿದೆ.

ಇದನ್ನು ಬಿಡುಗಡೆ ಮಾಡುವ ದಿನಾಂಕವನ್ನು ಇನ್ನೂ ಮೈಕ್ರೋಸಾಫ್ಟ್ ಖಚಿತಪಡಿಸಿಲ್ಲ ಆದರೆ ತಂತ್ರಜ್ಞಾನವು ಇನ್ನೇನು ಮುಗಿಯುವ ಹಂತದಲ್ಲಿದ್ದು ವಿಂಡೋಸ್ 10 ಬಿಡುಗಡೆಯಾದ ಮೇಲೆ ಇದು ಆವಿಷ್ಕಾರಗೊಳ್ಳಲಿದೆ.

ಅಂಗವೈಕಲ್ಯತೆಯನ್ನು ಹೊಂದಿದವರಿಗಾಗಿ ಇದೇ ಪ್ರಥಮ ಬಾರಿಗೆ ಮೈಕ್ರೋಸಾಫ್ಟ್‌ ಕೆಲಸ ಮಾಡುತ್ತಿದ್ದು ಬಿಲ್ ಗೇಟ್ಸ್ ಹೇಳುತ್ತಾ ಇದ್ದ ಮಾತಿನಂತೆಯೇ ತಂತ್ರಜ್ಞಾನವನ್ನು ಜನರಿಗೆ ಸುಲಭವಾಗಿಸುವ ಹಾದಿಯಲ್ಲಿ ಮೈಕ್ರೋಸಾಫ್ಟ್ ಕಾರ್ಯನಿರತವಾಗಿದೆ.

Best Mobiles in India

Read more about:
English summary
Microsoft is working on a feature for upcoming Windows 10 update that will help patients with neuromuscular diseases control the computer.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X