ಮೈಕ್ರೊಸಾಫ್ಟ್ ನಿಂದ ಆಲ್ವೇಸ್ ಕನೆಕ್ಟ್ ಪಿಸಿ ಬಿಡುಗಡೆ: ವಿಶೇಷತೆಗಳೇನು..?
ಹವಾಯಿಯಲ್ಲಿ ನಡೆದ ಕ್ವಾಲ್ಕಮ್ ಸ್ನಾಪ್ ಡ್ರಾಗನ್ ಟೆಕ್ ಸಬ್ಮಿಟ್ ನಲ್ಲಿ ಮೈಕ್ರೋಸಾಫ್ಟ್ ವಿಶ್ವದ ಮೊದಲ ಆಲ್ವೇಸ್ ಕನೆಕ್ಟ್ ಪಿಸಿಗಳನ್ನು ಬಿಡುಗಡೆ ಮಾಡಿದ್ದು, ಇದು ವಿಂಡೋಸ್ 10ನಲ್ಲಿ ಕಾರ್ಯನಿರ್ವಹಿಸಲಿದ್ದು, ARM-ಕ್ವಾಲ್ಕಮ್ ಚಿಪ್ ಸೆಟ್ ಅನ್ನು ಈ ಪಿಸಿಗಳಲ್ಲಿ ಕಾಣಬಹುದಾಗಿದೆ.

ಅಸುಸ್ ಮತ್ತು ಹೆಚ್ ಪಿ ಸದ್ಯಕ್ಕೆ ಆಲ್ವೇಸ್ ಕನೆಕ್ಟ್ ಪಿಸಿಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿವೆ, ಉಳಿದ ಕಂಪನಿಗಳು ಈ ಮಾದರಿಯ ಪಿಸಿಗಳನ್ನು ನಿರ್ಮಿಸಲು ಮುಂದಾಗಿವೆ. ಸದ್ಯ ಬಿಡುಗಡೆ ಗೊಂಡಿರುವ ಪಿಸಿಗಳು ಕ್ವಾಲ್ಕಮ್ ಸ್ನಾಪ್ ಡ್ರಾಗನ್ ಚಿಪ್ ಸೆಟ್ ಹೊಂದಿದ್ದು, ವಿಂಡೋಸ್ 10ನಲ್ಲಿ ಕಾರ್ಯನಿರ್ವಹಿಸಲಿವೆ.

ಇದೇ ಮಾದರಿಯಲ್ಲಿ ಲಿನೊವೊ ಸಹ ತನ್ನದೇ ಆದ ಆಲ್ವೇಸ್ ಕನೆಕ್ಟ್ ಪಿಸಿ ಗಳನ್ನು ನಿರ್ಮಾಣ ಮಾಡುತ್ತಿದೆ ಎನ್ನಲಾಗಿದೆ. ಈ ಸ್ಮಾರ್ಟ್ ಫೋನ್ ಗಳಲ್ಲಿ ಬಿಲ್ಟ್ ಇನ್ LTE ಟೆಕ್ನಾಲಜಿಯನ್ನು ಕಾಣಬಹುದಾಗಿದ್ದು, ಇದರಿಂದ ಪಿಸಿಗಳು ಯಾವಗಲು ಕನೆಕ್ಟ್ ಆಗಿರುತ್ತವೆ. ಈ ಪಿಸಿಗಳಲ್ಲಿ ಕ್ವಾಲ್ಕಮ್ ಸ್ನಾಪ್ ಡ್ರಾಗನ್ 835 ಚಿಪ್ ಸೆಟ್ ಕಾಣಬಹುದಾಗಿದೆ.

ಆಸುಸ್ ನೊವಾ ಗೋ:
ಆಸುಸ್ ನೊವಾ ಗೋ ವಿಶ್ವದ ಮೊದಲ ಗಿಗಾಬೈಟ್ LTE ಲ್ಯಾಪ್ ಟಾಪ್ ಆಗಿದ್ದು, ಸೂಪರ್ ಫಾಸ್ಟ್ ಡೌನ್ ಲೋಡ್ ಸ್ಫಿಡ್ ಅನ್ನು ಹೊಂದಿದ್ದು, 2 ಗಂಟೆಗಳ ಚಿತ್ರವನ್ನು 10 ನಿಮಿಷದಲ್ಲಿ ಡೌನ್ ಲೋಡ್ ಮಾಡಲಿದೆ. ಇದಕ್ಕಾಗಿ ಇದರಲ್ಲಿ ಕ್ವಾಲ್ಕಮ್ ಸ್ನಾಪ್ ಡ್ರಾಗನ್ 835 ಚಿಪ್ ಸೆಟ್ ನೀಡಲಾಗಿದೆ. ಅಲ್ಲದೇ ಈ ಲಾಪ್ ಟಾಪ್ 22 ಗಂಟೆಗಳ ಚಾರ್ಜ್ ಹೊಂದಿರಲಿದೆ. 4GB/8GB RAM ಇದರಲ್ಲಿ ಕಾಣಬಹುದಾಗಿದ್ದು, 64GB, 128GB, ಮತ್ತು 256GB ಫ್ಲಾಷ್ ಡೈವ್ ನೀಡಲಾಗಿದೆ. ನ್ಯಾನೋ ಸಿಮ್ ಹಾಕಬಹುದಾಗಿದೆ.
ಹೆಚ್ ಪಿ ENVY x2:
ಹೆಚ್ ಪಿ ENVY x2 ಸ್ಮಾರ್ಟ್ ಬಳಕೆಯನ್ನು ನೆನಪು ಮಾಡಲಿದೆ. ಇದು 4G LTE2 ಮತ್ತು ವೈ-ಫೈ ಸೇವೆಯನ್ನು ನೀಡಲಿದ್ದು, ಇದು 20 ಗಂಟೆ ಗಳ ಚಾರ್ಜ್ ಹೊಂದಿರಲಿದೆ. ಅಲ್ಲದೇ ಇದರಲ್ಲಿಯೂ 4GB/8GB RAM ಮತ್ತು 64GB/ 256GB ಸ್ಟೋರೆಜ್ ಕಾಣಬಹುದಾಗಿದ್ದು, ಬೆಲೆಯಲ್ಲಿ ಹೆಚ್ಚಿನ ವ್ಯತ್ಯಾಸವಿಲ್ಲ ಎನ್ನಲಾಗಿದೆ. 2018ರ ಆರಂಭದಲ್ಲಿ ಮಾರುಕಟ್ಟೆಯನ್ನು ಪ್ರವೇಶಿಸಲಿದೆ.


Click it and Unblock the Notifications