ಮೈಕ್ರೋಸಾಫ್ಟ್‌ನಿಂದ ಎರಡು ಲ್ಯಾಪ್‌ಟಾಪ್ ಲಾಂಚ್; ಏನಿರಲಿವೆ ಫೀಚರ್ಸ್
ಅತೀ ಹೆಚ್ಚು ಜನಪ್ರೀಯತೆ ಹೊಂದಿರುವ ಮೈಕ್ರೋಸಾಫ್ಟ್ ಸಂಸ್ಥೆಯು ಬಹು ನಿರೀಕ್ಷಿತ ಎರಡು ಲ್ಯಾಪ್‌ಟಾಪ್‌ಗಳನ್ನು ಬಿಡುಗಡೆ ಮಾಡಿದೆ. ಮೇ 20ರಂದು ಸರ್ಫೇಸ್ ಪ್ರೊ ಮತ್ತು ಸರ್ಫೇಸ್ ಲ್ಯಾಪ್‌ಟಾಪ್‌ಗಳನ್ನು ಬಿಡುಗಡೆಗೊಳಿಸುವ ಮೂಲಕ ಗಮನ ಸೆಳೆದಿದೆ.
ಈ ಲ್ಯಾಪ್‌ಟಾಪ್‌ಗಳು ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ X ಸರಣಿಯ ಪ್ರೊಸೆಸರ್‌ಗಳಿಂದ ನಡೆಸಲ್ಪಡುವ ಕಾಪಿಲಾಟ್+ ಪಿಸಿ (Copilot+ PC)ಗಳ ಪ್ಲಾಟ್‌ಫಾರ್ಮ್ ಅನ್ನು ಆಧರಿಸಿರುವ ಮೊದಲ ಡಿವೈಸ್‌ಗಳಾಗಿವೆ. ಇವುಗಳು ಕೃತಕ ಬುದ್ಧಿಮತ್ತೆ (AI) ಸಾಮರ್ಥ್ಯ ಹಾಗೂ ಡೆಡಿಕೇಟೆಡ್ ನ್ಯೂರಲ್ ಪ್ರೊಸೆಸಿಂಗ್ ಯೂನಿಟ್ (NPU) ನಿಂದ ನಡೆಸುವ ಸಾಮರ್ಥ್ಯ ಹೊಂದಿವೆ. ಇದು ಸೆಕೆಂಡಿಗೆ 40 ಟ್ರಿಲಿಯನ್ ನಷ್ಟು ಕಾರ್ಯಾಚರಣೆ ನಡೆಸುವ ಸಾಮರ್ಥ್ಯ ಹೊಂದಿವೆ. ಈ ಎರಡು ಲ್ಯಾಪ್‌ಟಾಪ್‌ಗಳ ಕುರಿತು ಹೆಚ್ಚಿನ ಮಾಹಿತಿ ತಿಳಿಯಲು ಈ ಲೇಖನ ಓದಿ.

ಮೈಕ್ರೋಸಾಫ್ಟ್ ಸರ್ಫೇಸ್ ಪ್ರೊ: ಇದು ಕ್ವಾಲ್ಕಾಮ್ನ ಸ್ನಾಪ್‌ಡ್ರಾಗನ್ ಎಕ್ಸ್ (X) ಎಲೈಟ್ ಮತ್ತು ಸ್ನಾಪ್‌ಡ್ರಾಗನ್ ಎಕ್ಸ್ ಪ್ಲಸ್ ಪ್ರೊಸೆಸರ್‌ಗಳಿಂದ ಕಾರ್ಯ ನಿರ್ವಹಿಸಲಿದೆ. ಇದೀಗ ಬಿಡುಗಡೆ ಮಾಡಿರುವ ಸರ್ಫೇಸ್ ಪ್ರೊ ಈ ಹಿಂದಿನ ಸರ್ಫೇಸ್ ಪ್ರೊ 9 ಗಿಂತ ಶೇ. 90ರಷ್ಟು ವೇಗವಾಗಿದೆ ಎಂದು ಕಂಪನಿ ತಿಳಿಸಿದೆ. ಹಾಗೂ 2880 x 1920 ರೆಸಲ್ಯೂಶನ್ ಹೊಂದಿರುವ 13-ಇಂಚಿನ ಡಿಸ್‌ಪ್ಲೇ, ಹೆಚ್‌ಡಿಆರ್ (HDR) ಜೊತೆಗೆ ಓಲ್‌ಡ್ (OLED) ಡಿಸ್‌ಪ್ಲೇ ಪಡೆಯುವ ಆಯ್ಕೆಯನ್ನೂ ಇರಿಸಲಾಗಿದೆ.
ಸರ್ಫೇಸ್ ಪ್ರೊ ಎರಡು USB-4 ಪೋರ್ಟ್‌ಗಳು, Wi-Fi7 ಸಪೋರ್ಟ್ ಮತ್ತು 5G ಸಂಪರ್ಕ ಹೊಂದಿದೆ. ಕ್ವಾಡ್-ಹೆಚ್‌ಡಿ ಫ್ರಂಟ್ ಕ್ಯಾಮೆರಾ, ಸ್ಟುಡಿಯೋ ಎಫೆಕ್ಟ್ ಪಡೆಯಲು ಎಐ (AI) ಚಾಲಿತ ವಿಂಡೋಸ್ ಹೊಂದಿದೆ.
ವೀಡಿಯೊ ರೆಕಾರ್ಡಿಂಗ್‌ಗಾಗಿ ಹೆಚ್ಚುವರಿ 4K ರೆಸಲ್ಯೂಶನ್, 10MP ಅಲ್ಟ್ರಾ ಹೆಚ್‌ಡಿ (Ultra HD) ಕ್ಯಾಮರಾ ಕೂಡ ಹೊಂದಿದೆ. ಇದಲ್ಲದೆ 16GB / 32GB (LPDDR5x RAM) RAM, 256GB / 512GB / 1TB (Gen 4 SSD) ಸ್ಟೋರೇಜ್, 14 ಗಂಟೆಗಳವರೆಗೆ ವೀಡಿಯೊ ವೀಕ್ಷಿಸುವಷ್ಟು ಚಾರ್ಜಿಂಗ್ ಸಾಮರ್ಥ್ಯದ ಬ್ಯಾಟರಿ ವ್ಯವಸ್ಥೆ ಇರಲಿದೆ.
ಡಾಲ್ಬಿ ಅಟ್ಮಾಸ್‌ನೊಂದಿಗೆ 2W ಸ್ಟೀರಿಯೋ ಸ್ಪೀಕರ್‌ಗಳು, ಧ್ವನಿ ಫೋಕಸ್ ಹೊಂದಿರುವ 2 ಸ್ಟುಡಿಯೋ ಮೈಕ್‌ಗಳು, 2x USB-C (USB4), ಡಿಸ್‌ಪ್ಲೇ ಪೋರ್ಟ್ 2.1, ಸರ್ಫೇಸ್ ಪ್ರೊ ಕೀ ಬೋರ್ಡ್, ಸರ್ಫೇಸ್ ಕನೆಕ್ಟ್ ಪೋರ್ಟ್ ವ್ಯವಸ್ಥೆ ಇರಲಿದೆ.
ಮೈಕ್ರೋಸಾಫ್ಟ್ ಸರ್ಫೇಸ್ ಲ್ಯಾಪ್‌ಟಾಪ್: ಸರ್ಫೇಸ್ ಲ್ಯಾಪ್‌ಟಾಪ್‌ಗೆ 13.8 ಹಾಗೂ 15-ಇಂಚುಗಳ ಎರಡು ರೀತಿಯ ಸ್ಕ್ರೀನ್‌ಗಳನ್ನು ಪಡೆಯುವ ಆಯ್ಕೆಯನ್ನು ಗ್ರಾಹಕರಿಗೆ ನೀಡಿದೆ. ಇದು ಪಿಕ್ಸೆಲ್‌ಸೆನ್ಸ್ ತಂತ್ರಜ್ಞಾನದೊಂದಿಗೆ ಟಚ್‌ಸ್ಕ್ರೀನ್ ಮತ್ತು ಸ್ಲಿಮ್ಮರ್ ಬೆಜೆಲ್‌ಗಳನ್ನು ಹೊಂದಿದೆ.
120Hz ಮತ್ತು ಡಾಲ್ಬಿ ವಿಷನ್ (Dolby vision) IQ ವರೆಗೆ ರಿಫ್ರೆಶ್ ದರವನ್ನು ಹೊಂದಿರಲಿದೆ. ಸರ್ಫೇಸ್ ಪ್ರೊ ರೀತಿಯಲ್ಲೆ ಸರ್ಫೇಸ್ ಲ್ಯಾಪ್‌ಟಾಪ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ ಎಕ್ಸ್-ಸರಣಿಯ ಚಿಪ್‌ಗಳನ್ನು ಹೊಂದಿದೆ. ಸಾಧನದಲ್ಲಿ AI ವರ್ಕ್‌ಲೋಡ್‌ಗಳನ್ನು ನಿಯಂತ್ರಿಸಲು 45 ಟಾಪ್ಸ್ (TOPS) NPU ವನ್ನು ಹೊಂದಿದೆ.
15-ಇಂಚಿನ ಸರ್ಫೇಸ್ ಲ್ಯಾಪ್‌ಟಾಪ್ 22 ಗಂಟೆಗಳವರೆಗೆ ಮತ್ತು 13.8 ಇಂಚಿನ ಲ್ಯಾಪ್‌ಟಾಪ್‌ನಲ್ಲಿ 20 ಗಂಟೆಗಳವರೆಗೆ ಧೀರ್ಘ ಸಮಯದವರೆಗೆ ಕೆಲಸ ನಿರ್ವಹಿಸುವಷ್ಟು ಉತ್ತಮ ಗುಣಮಟ್ಟದ ಬ್ಯಾಟರಿ ವ್ಯವಸ್ಥೆ ಹೊಂದಿದೆ ಎಂದು ಮೈಕ್ರೋಸಾಫ್ಟ್ ತಿಳಿಸಿದೆ.
ಹೊಸ ಸರ್ಫೇಸ್ ಲ್ಯಾಪ್‌ಟಾಪ್ ಫುಲ್ ಹೆಚ್‌ಡಿ ಸರ್ಫೇಸ್ ಸ್ಟುಡಿಯೋ ಕ್ಯಾಮೆರಾ ಹೊಂದಿದ್ದು, AI-ಚಾಲಿತ ವಿಂಡೋಸ್ ಸ್ಟುಡಿಯೋ ಎಫೆಕ್ಟ್‌ಗಳಾದ ಆಟೋಮ್ಯಾಟಿಕ್ ಫ್ರೇಮಿಂಗ್, ಪೋರ್ಟ್ರೇಟ್ ಬ್ಲರ್, ಕ್ರಿಯೇಟಿವ್ ಫಿಲ್ಟರ್‌ಗಳು ಮತ್ತು ವಾಯ್ಸ್ ಫೋಕಸ್‌ಗಳ್ನು ಹೊಂದಿದೆ. ಇದು ಡಾಲ್ಬಿ ಅಟ್ಮಾಸ್ ಸರೌಂಡ್ ಸೌಂಡ್‌ನೊಂದಿಗೆ ಓಮ್ನಿಸಾನಿಕ್ ಸ್ಪೀಕರ್‌ಗಳನ್ನು ಸಹ ಒಳಗೊಂಡಿದೆ.
ಜೊತೆಗೆ 16GB / 32GB (LPDDR5x RAM) RAM, 256GB / 512GB / 1TB (Gen 4 SSD) ಸ್ಟೋರೇಜ್, 13.8 ಇಂಚಿನ ಡಿಸ್‌ಪ್ಲೇ ಜೊತೆಗೆ 2304 x 1536 ರೆಸಲ್ಯೂಶನ್ ಹಾಗೂ 15-ಇಂಚಿನ ಡಿಸ್‌ಪ್ಲೇ ಜೊತೆಗೆ 2496 x 1664 ರೆಸಲ್ಯೂಶನ್, 120Hz ರಿಫ್ರೆಶ್ ರೇಟ್, ಡಾಲ್ಬಿ ವಿಷನ್ IQ ಹೊಂದಿದೆ. ಫುಲ್ HD ಫ್ರಂಟ್ ಕ್ಯಾಮೆರಾ, ಸ್ಟುಡಿಯೋ ಕ್ಯಾಮೆರಾ, ಆಡಿಯೋಗಾಗಿ ಡಾಲ್ಬಿ ಅಟ್ಮಾಸ್‌ನೊಂದಿಗೆ ಓಮ್ನಿಸಾನಿಕ್ ಸ್ಪೀಕರ್‌ಗಳು, ಧ್ವನಿ ಫೋಕಸ್ ಹೊಂದಿರುವ ಡ್ಯುಯಲ್ ಸ್ಟುಡಿಯೋ ಮೈಕ್‌ಗಳನ್ನು ಹೊಂದಿದೆ.
2x USB-C (USB4), ಡಿಸ್‌ಪ್ಲೇ ಪೋರ್ಟ್ (DisplayPort) 2.1, USB-A 3.1, 3.5mm ಹೆಡ್‌ಫೋನ್ ಜಾಕ್, ಸರ್ಫೇಸ್ ಕನೆಕ್ಟ್ ಪೋರ್ಟ್, 15-ಇಂಚಿನ ಲ್ಯಾಪ್‌ಟಾಪ್‌ನಲ್ಲಿ ಮೈಕ್ರೋ (Micro) SDXC ಕಾರ್ಡ್ ರೀಡರ್ ಹಾಗೂ ವೈ-ಫೈ (WIFI) 7, ಬ್ಲೂಟೂತ್ 5.4 ನಂತಹ ಫೀಚರ್ಸ್‌ಗಳನ್ನು ಹೊಂದಿದೆ. ಇನ್ನು ಈ ಲ್ಯಾಪ್‌ಟಾಪ್‌ಗಳು ಪ್ಲಾಟಿನಂ, ಕಪ್ಪು, ಡ್ಯೂನ್ ಮತ್ತು ನೀಲಮಣಿ (supphire) ಬಣ್ಣಗಳ ಆಯ್ಕೆಯನ್ನು ಹೊಂದಿದೆ.
ಇನ್ನೂ ಈ ಲ್ಯಾಪ್‌ಟಾಪ್‌ಗಳು $999 ಆರಂಭಿಕ ಬೆಲೆಯಿಂದ ಪ್ರಾರಂಭವಾಗಲಿದ್ದು, ಆಯ್ದ ದೇಶಗಳಲ್ಲಿ ಪ್ರೀ ಬುಕಿಂಗ್ ಲಭ್ಯವಿದ್ದು, ಜೂನ್ 18ರಿಂದ ಮಾರಾಟ ಪ್ರಾರಂಭವಾಗಲಿದೆ.


Click it and Unblock the Notifications








