ಮೈಕ್ರೋಸಾಫ್ಟ್ ವಿಂಡೋಸ್ 8 ಟ್ಯಾಬ್ಲೆಟ್ ಯಾವಾಗ್ ಬರುತ್ತೆ?

By Varun
|
ಮೈಕ್ರೋಸಾಫ್ಟ್ ವಿಂಡೋಸ್ 8 ಟ್ಯಾಬ್ಲೆಟ್ ಯಾವಾಗ್ ಬರುತ್ತೆ?

ಮೈಕ್ರೋಸಾಫ್ಟ್ ನ ವಿಂಡೋಸ್ ತಂತ್ರಾಂಶ ಅಕ್ಟೋಬರ್ 26 ಕ್ಕೆ ಬರುತ್ತೆ ಅಂತ ಸುಮಾರು ದಿನಗಳ ಹಿಂದೆ ಕಂಪನಿಯು ಪ್ರಕಟಿಸಿತ್ತು.

ಆದರೆ ವಿಂಡೋಸ್ 8 ಆಧಾರಿತ ಮೈಕ್ರೋಸಾಫ್ಟ್ ಸರ್ಫೇಸ್ ಟ್ಯಾಬ್ಲೆಟ್ ಅನ್ನು ಮೈಕ್ರೋಸಾಫ್ಟ್ ಅನಾವರಣ ಮಾಡಿದ ದಿನದಿಂದ, ಅದು ಯಾವಾಗ ಮಾರುಕಟ್ಟೆಗೆ ಬರುತ್ತೆ ಎಂಬ ಕುತೂಹಲ ಎದ್ದಿತ್ತು. ಈಗ ಅದೆಲ್ಲದ್ದಕ್ಕೆ ತೆರೆ ಎಳೆದಿರುವ ಮೈಕ್ರೋಸಾಫ್ಟ್, ಸರ್ಫೇಸ್ ಟ್ಯಾಬ್ಲೆಟ್ ಅನ್ನು ವಿಂಡೋಸ್ 8 ಬಿಡುಗಡೆಯಾಗುವ ದಿನ (ಅಕ್ಟೋಬರ್ 26) ದಂದೇ ಇದನ್ನು ಬಿಡುಗಡೆ ಮಾಡುವುದಾಗಿ ಘೋಷಿಸಿದೆ.

ಮೈಕ್ರೋಸಾಫ್ಟ್ ನ ಮೊದಲ ಟ್ಯಾಬ್ಲೆಟ್ ಆಗಿರುವ ಸರ್ಫೇಸ್ ಎರಡು ಮಾದರಿಯಲ್ಲಿ ಬರಲಿದ್ದು, ಟ್ಯಾಬ್ಲೆಟ್ ಗೆಂತಲೇ ಸಿದ್ದಪಡಿಸಲಾಗಿರುವ ವಿಂಡೋಸ್ RT ಹಾಗು ಲ್ಯಾಪ್ಟಾಪ್ ಹಾಗು PCಗಳಿಗೆ ತಯಾರಾಗಿರುವ ವಿಂಡೋಸ್ 8 ಪ್ರೊ, ಈ ಎರಡು ಟ್ಯಾಬ್ಲೆಟ್ ಗಳು ಬಿಡುಗಡೆಯಾಗಲಿವೆ.

ಮೈಕ್ರೋಸಾಫ್ಟ್ ಸರ್ಫೇಸ್ ಟ್ಯಾಬ್ಲೆಟ್ ನ ವಿಶೇಷತೆ ಏನೆಂದರೆ ಇದನ್ನು ಲ್ಯಾಪ್ಟಾಪ್ ರೀತಿಯಲ್ಲಿ ಅಟ್ಯಾಚ್ ಆಗಿರುವ ಕೀಬೋರ್ಡ್ ಬಳಸಿ ಹಾಗು ಟ್ಯಾಬ್ಲೆಟ್ ನಂತೆ ಟಚ್ ಸ್ಕ್ರೀನ್ ಬಳಸಿಯೂ ಬಳಸಬಹುದಾಗಿದೆ.

ಇವೆರಡರ ಫೀಚರುಗಳು ಈ ರೀತಿ ಇವೆ :

1)Windows RT ತಂತ್ರಾಂಶವಿರುವ ಸರ್ಫೇಸ್ ಟ್ಯಾಬ್ಲೆಟ್

  • 10.6 ಇಂಚ್ HD ಡಿಸ್ಪ್ಲೇ

  • ವಿಂಡೋಸ್ RT ತಂತ್ರಾಂಶ

  • 9.3 mm ದಪ್ಪ, 676 ಗ್ರಾಂ ತೂಕ

  • ಮೈಕ್ರೋ SD, USB 2.0, ಮೈಕ್ರೋ HD ವೀಡಿಯೋ, 2×2 MIMO ಆಂಟೆನಾ

  • ಮೈಕ್ರೋಸಾಫ್ಟ್ 15 ಆಪ್

  • ಟಚ್ ಕವರ್, ಟೈಪ್ ಕವರ್

  • 32 GB ಹಾಗು 64 GB ಮೆಮೊರಿ
2) ವಿಂಡೋಸ್ 8 ಪ್ರೊ ಇರುವ ಸರ್ಫೇಸ್ ಟ್ಯಾಬ್ಲೆಟ್
  • ವಿಂಡೋಸ್ 8 ಪ್ರೊ ತಂತ್ರಾಂಶ

  • 13.5 mm ದಪ್ಪ , 903 ಗ್ರಾಂ ತೂಕ

  • 10.6 ಇಂಚ್ HD ಡಿಸ್ಪ್ಲೇ

  • ಮೈಕ್ರೋ SDXC, USB 3.0, ಮಿನಿ ಡಿಸ್ಪ್ಲೇ ಪೋರ್ಟ್ ವೀಡಿಯೋ, 2×2 MIMO ಆಂಟೆನಾ

  • ಟಚ್ ಕವರ್, ಟೈಪ್ ಕವರ್, ಪಾಮ್ ಬ್ಲಾಕ್

  • 64 GB ಹಾಗು 128 ಗಬ್ ಮೆಮೊರಿ

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X