Just In
- 43 min ago
ವಾಟ್ಸಾಪ್ನ ಸ್ಟೇಟಸ್ ವಿಭಾಗದಲ್ಲಿ ನೂತನ ಫೀಚರ್ಸ್; ಏನೆಂದು ತಿಳಿಯಿರಿ!
- 1 hr ago
ನೀವು ಏರ್ಟೆಲ್ ಸಿಮ್ ಬಳಕೆ ಮಾಡ್ತೀರಾ?..ಹಾಗಿದ್ರೆ, ಈ ಪ್ಲ್ಯಾನ್ ಬಗ್ಗೆ ತಿಳಿದಿರಿ!
- 2 hrs ago
ಸ್ಯಾಮ್ಸಂಗ್ ಗ್ಯಾಲಕ್ಸಿ F23 5G ಫೋನ್ ಬೆಲೆ ಇಳಿಕೆ!..ಈ ಚಾನ್ಸ್ ಬಿಡಬೇಡಿ!
- 2 hrs ago
ಭಾರತದಲ್ಲಿ ಟೆಕ್ನೋ ಫ್ಯಾಂಟಮ್ X2 ಪ್ರೊ ಸ್ಮಾರ್ಟ್ಫೋನ್ ಲಾಂಚ್; ಶಕ್ತಿಶಾಲಿ ಪ್ರೊಸೆಸರ್ ಆಯ್ಕೆ!
Don't Miss
- Movies
"ರಿಷಬ್, ರಕ್ಷಿತ್ ಇಂಡಸ್ಟ್ರಿಗೆ ದಾರಿ ತೋರಿಸಿದ್ರು, ನನಗೆ ಅವಕಾಶ ಕೊಟ್ರು": ಕೊನೆಗೂ ಒಪ್ಪಿಕೊಂಡ ರಶ್ಮಿಕಾ
- Finance
ಸಿಇಒ ಜೊತೆ ಒಂದು ಸಭೆ, ಮರುದಿನವೇ 3,000 ಉದ್ಯೋಗಿಗಳ ವಜಾ!
- Sports
Ind vs Nz 1st ODI : ಟಿ20 ಕ್ರಿಕೆಟ್ನಲ್ಲಿ ಮಾತ್ರ ನಿನ್ನ ಆಟ! ಸೂರ್ಯ ವಿರುದ್ಧ ಅಭಿಮಾನಿಗಳ ಟೀಕೆ
- Automobiles
ಟಾಟಾ ಪಂಚ್ ಅಬ್ಬರ: 15 ತಿಂಗಳಲ್ಲೇ ಅಪರೂಪದ ದಾಖಲೆ
- News
ಇಂಡಿಗೋ ವಿಮಾನದಲ್ಲಿ Tejasvi Surya ಎಡವಟ್ಟು, ವ್ಯಾಪಕ ಟ್ರೋಲ್
- Lifestyle
ಈ ರೀತಿಯ ಗುಣವಿರುವ ಹುಡುಗ ಒಳ್ಳೆಯ ಲೈಫ್ ಪಾರ್ಟನರ್ ಆಗಲು ಸಾಧ್ಯವೇ ಇಲ್ಲ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಮೈಕ್ರೋಸಾಫ್ಟ್ ನಿಂದ ಸ್ವಂತ ವಿಂಡೋಸ್ 8 ಟ್ಯಾಬ್ಲೆಟ್

ಆಪರೇಟಿಂಗ್ ಸಿಸ್ಟಮ್ ಹಾಗು ತಂತ್ರಾಂಶಗಳ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿರುವ ಮೈಕ್ರೋಸಾಫ್ಟ್ ಕಂಪನಿಯ ವಿಂಡೋಸ್ 8 ತಂತ್ರಾಂಶವನ್ನು ಅಕ್ಟೋಬರ್ ವೇಳೆಗೆ ಬರುತ್ತಿರುವುದು ಎಲ್ಲರಿಗೂ ತಿಳಿದಿರುವ ವಿಷಯ.
ಅಚ್ಚರಿಯ ಬೆಳವಣಿಗೆಯೊಂದರಲ್ಲಿ ಮೈಕ್ರೋಸಾಫ್ಟ್ ಕಂಪನಿ ತನ್ನ ವಿಂಡೋಸ್ RT ತಂತ್ರಾಂಶವನ್ನು ಬಳಸಿಕೊಂಡು ತನ್ನದೇ ಆದ ಟ್ಯಾಬ್ಲೆಟ್ ಹೊರತರಲು ನಿರ್ಧರಿಸಿದ್ದು ಇದರ ಬಗ್ಗೆ ಇಂದು ಲಾಸ್ ಎಂಜಲೀಸ್ ನಲ್ಲಿ ಘೋಷಣೆಯಾಗಲಿದೆ ಎಂಬ ಸುದ್ದಿ ಬಂದಿದೆ.
ಮೈಕ್ರೋಸಾಫ್ಟ್ ಕಂಪನಿ ತನ್ನ 37 ವರ್ಷದ ಇತಿಹಾಸದಲ್ಲಿ ಇದುವರೆಗೂ ತನ್ನದೇ ಆದ ಕಂಪ್ಯೂಟರ್ ಅಥವಾ ಲ್ಯಾಪ್ಟಾಪ್ ಅನ್ನು ತಯಾರಿಸಿಲ್ಲದಿದ್ದರೂ, ಆಪಲ್ ನ ಐಪ್ಯಾಡ್ ಬಂದಮೇಲೆ ವಿಂಡೋಸ್ ತಂತ್ರಾಂಶವಿರುವ ಲ್ಯಾಪ್ಟಾಪುಗಳಿಗೆ ಹೊಡೆತ ಬಿದ್ದಿದ್ದು, ಅದೂ ಅಲ್ಲದೆ ಆಂಡ್ರಾಯ್ಡ್ ತಂತ್ರಾಂಶವಿರುವ ಟ್ಯಾಬ್ಲೆಟ್ ಗಳು ಬೇಡಿಕೆಯಲ್ಲಿರುವುದರಿಂದ ಇವೆಲ್ಲವನ್ನೂ ಒಟ್ಟಿಗೆ ಎದುರಿಸಲು ಮೈಕ್ರೋಸಾಫ್ಟ್ ಈ ನಿರ್ಧಾರ ಕೈಗೊಂಡಿದೆ ಎನ್ನಲಾಗಿದೆ.
ತನ್ನ ವಿಂಡೋಸ್ 8 ತಂತ್ರಾಂಶವಿರುವ ಟ್ಯಾಬ್ಲೆಟ್ ಮಾದರಿಯನ್ನು ಡೆಲ್, ಏಸರ್, ಅಸುಸ್ ನಂತಹ ಕಂಪನಿಗಳು ಕಂಪ್ಯೂಟೆಕ್ಸ್ 2012 ನಲ್ಲಿ ಅನಾವರಣಗೊಳಿಸಿದ್ದು ಕೂಡ ಮೈಕ್ರೋಸಾಫ್ಟ್ ಗೆ ಪ್ರೇರಣೆಯಾಗಿದೆ ಎನ್ನಲಾಗಿದೆ.
ಹಾರ್ಡ್ವೇರ್ ಕ್ಷೇತ್ರದಲ್ಲಿ ಅಷ್ಟೇನೂ ಅನುಭವವಿಲ್ಲದ ಅದು ಈಗಾಗಲೇ Zune ಹಾಗು Xbox 360 ಉತ್ಪಾದನೆ ಮಾಡಿ ಅಷ್ಟೇನೂ ಸಫಲತೆ ಕಂಡಿಲ್ಲವಾದ್ದರಿಂದ ಟ್ಯಾಬ್ಲೆಟ್ ಅನ್ನು ಹೇಗೆ ಉತ್ಪಾದನೆ ಮಾಡಿ ಸ್ಪರ್ಧೆ ಮಾಡಲಿದೆ ಎಂಬುದು ದೊಡ್ಡ ಪ್ರಶ್ನೆ.
ಮೈಕ್ರೋಸಾಫ್ಟ್ ಟ್ಯಾಬ್ಲೆಟ್ ಅನ್ನು ಮಾಡುತ್ತದೋ ಇಲ್ಲವೋ ಗೊತ್ತಿಲ್ಲ, ಆದರೆ ಆಂಡ್ರಾಯ್ಡ್ ಟ್ಯಾಬ್ಲೆಟ್ ಹಾಗು ಆಪಲ್ ನ ಐಪ್ಯಾಡ್ ಗಳಿಗೆವಿಂಡೋಸ್ 8 ತಂತ್ರಾಶದ ಟ್ಯಾಬ್ಲೆಟ್ ಗಳುಇವುಗಳಿಗೆ ಸಡ್ಡು ಹೊಡೆಯಲು ಸಜ್ಜಾಗಿದೆ.
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470