ಸ್ಕೈಪ್‌ನ ವೆಬ್ ಆವೃತ್ತಿ ಮೈಕ್ರೋಸಾಫ್ಟ್‌ನಿಂದ ಶೀಘ್ರದಲ್ಲಿಯೇ!!!

Written By:

ಏನನ್ನೂ ಡೌನ್‌ಲೋಡ್ ಮಾಡಿಕೊಳ್ಳದೆಯೇ ಬ್ರೌಸರ್‌ನಿಂದ ಸ್ಕೈಪ್ ಅನ್ನು ಬಳಸಲು ಇನ್ನು ಬಳಕೆದಾರರಿಗೆ ಸದ್ಯದಲ್ಲೇ ಸಾಧ್ಯವಾಗಲಿದೆ. ಮೈಕ್ರೋಸಾಫ್ಟ್ ವೆಬ್ - ಆಧಾರಿತ ವೀಡಿಯೊ ಕಾನ್ಫರೆನ್ಸಿಂಗ್ ಪ್ಲಾಟ್‌ಫಾರ್ಮ್ ಅನ್ನು ಸದ್ಯದಲ್ಲೇ ಲಾಂಚ್ ಮಾಡಲಿದೆ.

ಸ್ಕೈಪ್‌ನ ಹೊಸ ಆವೃತ್ತಿಯಾಗಿರುವ ಇದು, ಕ್ರೋಮ್, ಫೈರ್‌ಫಾಕ್ಸ್, ಸಫಾರಿ ಮತ್ತು ಇಂಟರ್ನೆಟ್ ಎಕ್ಸ್‌ಪ್ಲೋರರ್ ಅನ್ನು ಬಳಸುತ್ತಿರುವಾಗ ಸ್ಕೈಪ್ ವೆಬ್‌ಸೈಟ್‌ನಿಂದ ತಮ್ಮ ಪ್ರಸ್ತುತ ಖಾತೆಗಳಿಗೆ ಲಾಗಿನ್ ಮಾಡಲು ಬಳಕೆದಾರರನ್ನು ಅನುಮತಿಸುತ್ತದೆ. ತ್ವರಿತ ಸಂದೇಶವು ನೀವು ಲಾಗಿನ್ ಮಾಡಿದ ಕೂಡಲೇ ಬೆಂಬಲವನ್ನು ಒದಗಿಸಲಿದ್ದು, ವಾಯ್ಸ್ ಮತ್ತು ವೀಡಿಯೊ ಕರೆಗಳಿಗೆ ಬ್ರೌಸರ್ ಪ್ಲಗಿನ್ ಅನ್ನು ಸ್ಥಾಪಿಸುವ ಹೆಚ್ಚುವರಿ ಹಂತದ ಅಗತ್ಯವಿದೆ. ಮೈಕ್ರೋಸಾಫ್ಟ್ ಹೇಳುವಂತೆ ಈ ಹೆಚ್ಚುವರಿ ಹಂತವು ಕೇವಲ ತಾತ್ಕಾಲಿಕ ಅಗತ್ಯತೆಯನ್ನು ಆಧರಿಸಿರುತ್ತದೆ ಎಂದಾಗಿದೆ.

ಸ್ಕೈಪ್‌ನ ವೆಬ್ ಆವೃತ್ತಿ ಮೈಕ್ರೋಸಾಫ್ಟ್‌ನಿಂದ ಶೀಘ್ರದಲ್ಲಿಯೇ!!!

ಇದನ್ನೂ ಓದಿ: ಖರೀದಿಯ ವ್ಯಾಮೋಹವನ್ನು ಹೆಚ್ಚಿಸಲಿರುವ ಸೂಪರ್ ಫೋನ್ಸ್

ಭವಿಷ್ಯದಲ್ಲಿ, ವೆಬ್‌ನಲ್ಲಿ ಸ್ಕೈಪ್ ಅನ್ನು ಬಳಸುವುದು ಹೆಚ್ಚು ಸುಲಭ ಮತ್ತು ಆರಾಮದಾಯಕ ವಿಧಾನವಾಗಿದೆ ಎಂದು ಕಂಪೆನಿ ಬ್ಲಾಗ್ ಪೋಸ್ಟ್‌ನಲ್ಲಿ ತಿಳಿಸಿದೆ. "ನಿಮ್ಮ ಮಗುವಿನ ಶಿಕ್ಷಕಿಯನ್ನು ಭೇಟಿಯಾಗಬೇಕೆಂದು ನೀವು ಬಯಸಿದ್ದೀರಾ, ಇಲ್ಲದಿದ್ದಲ್ಲಿ ಅಭ್ಯರ್ಥಿಗೆ ಸಂದರ್ಶನವನ್ನು ನಡೆಸಬೇಕೆಂದಿದ್ದೀರಾ ಆ ಸಮಯದಲ್ಲಿ ಒಂದೇ ಕ್ಲಿಕ್‌ನಲ್ಲಿ ಸ್ಕೈಪ್ ಮುಖಾಂತರ ನೇರವಾಗಿ ನಿಮಗೆ ಮಾತನಾಡಬಹುದಾಗಿದೆ.

ಈ ಸೇವೆಗಳು ಇನ್ನೂ ಬೇಟಾದಲ್ಲಿದ್ದು, ಸ್ಕೈಪ್‌ನ ಪ್ರಸ್ತುತ ವೆಬ್ ಆಧಾರಿತ ಆವೃತ್ತಿಯೊಂದಿಗೆ ಹಲವಾರು ಸಮಸ್ಯೆಗಳಿವೆ. ಇನ್ನು ಬ್ಯಾಟರಿ ಬಾಳ್ವಿಕೆಯಲ್ಲಿ ಮ್ಯಾಕ್ ಬಳಕೆದಾರರು ಕೆಲವೊಂದು ಸಮಸ್ಯೆಗಳನ್ನು ಅನುಭವಿಸುತ್ತಿರಬಹುದು. ಮತ್ತು ಹೊರಹೋಗುವ ವೀಡಿಯೊ ಕರೆಗಳು ಎಲ್ಲಾ ವೆಬ್ ಬಳಕೆದಾರರಿಗೆ ಸಂಪರ್ಕ ಹೊಂದಲು ಸಾಮಾನ್ಯಕ್ಕಿಂತ ಹೆಚ್ಚು ಸಮಯವನ್ನು ತೆಗೆದುಕೊಳ್ಳುತ್ತಿದೆ. ಮುಂತಾದ ಸಮಸ್ಯೆಗಳನ್ನು ಕಂಪೆನಿ ಪಟ್ಟಿಮಾಡಿದೆ.

ಸೀಮಿತ ಸಂಖ್ಯೆಯ ಬಳಕೆದಾರರಿಗೆ ಮಾತ್ರವೇ ಮೈಕ್ರೋಸಾಫ್ಟ್ ಸೇವೆಯನ್ನು ಬಿಡುಗಡೆ ಮಾಡುತ್ತಿದ್ದು, ಈ ಯೋಜನೆಯನ್ನು ವಿಸ್ತರಿಸುವ ಯೋಜನೆ ಕೂಡ ಇದೆ. ಪ್ರಾರಂಭ ಹಂತದಲ್ಲಿ ಎಷ್ಟು ಜನ ಬಳಕೆದಾರರನ್ನು ಇದು ಗಣನೆಗೆ ತೆಗೆದುಕೊಳ್ಳುತ್ತದೆ ಎಂಬುದನ್ನು ತಿಳಿಸಿಲ್ಲ ಸ್ಕೈಪ್ ಡಾಟ್‌ ಕಾಮ್‌ನಿಂದ ತಮ್ಮ ಸ್ಕೈಪ್ ಖಾತೆಗೆ ಅವರು ಲಾಗಿನ್ ಮಾಡಿದಾಗ ಮೈಕ್ರೋಸಾಫ್ಟ್ ಯಾರನ್ನು ಆಹ್ವಾನಿಸಿದೆ ಎಂಬುದು ತಿಳಿಯುತ್ತದೆ.

English summary
This article tells about Microsoft to launch web version of Skype.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot