ಮೈಕ್ರೋಸಾಫ್ಟ್ ವಿಂಡೋಸ್ 8 ಟ್ಯಾಬ್ಲೆಟ್ ಬಂದ್ಬಿಡ್ತು

By Varun
|
ಮೈಕ್ರೋಸಾಫ್ಟ್ ವಿಂಡೋಸ್ 8 ಟ್ಯಾಬ್ಲೆಟ್ ಬಂದ್ಬಿಡ್ತು

ನೆನ್ನೆ ಮೈಕ್ರೋಸಾಫ್ಟ್ ತನ್ನದೇ ಆದ ವಿಂಡೋಸ್ 8 ಟ್ಯಾಬ್ಲೆಟ್ ಅನ್ನು ಬಿಡುಗಡೆ ಮಾಡುತ್ತೆ ಅಂತ ನಾವು ನಿರೀಕ್ಷೆ ಮಾಡಿದ್ದೂ ನಿಜವಾಗಿದೆ.

ಎಲ್ಲರ ಹುಬ್ಬೇರುವಂತೆ ನೆನ್ನೆ ಹಾಲಿವುಡ್ ನಲ್ಲಿ ವಿಂಡೋಸ್ ಆಧಾರಿತ ಎರಡು ಟ್ಯಾಬ್ಲೆಟ್ ಅನ್ನು ಬಿಡುಗಡೆ ಮಾಡಿದೆ. ಸರ್ಫೇಸ್ ಎಂದು ಹೆಸರಿಡಲಾಗಿರುವ ಟ್ಯಾಬ್ಲೆಟ್ ಆಪಲ್ ನ ಐಪ್ಯಾಡ್ ಗೆ ಟಕ್ಕರ್ ಕೊಡುವ ಎಲ್ಲ ಸಾಧ್ಯತೆ ಇದೆ.

ಟ್ಯಾಬ್ಲೆಟ್ ಗೆಂತಲೇ ಮಾಡಲಾಗಿರುವ ವಿಂಡೋಸ್ 8 ರ ವಿಂಡೋಸ್ RT ಹಾಗು, ವಿಂಡೋಸ್ 8 ಪ್ರೊ ಇರುವ ಇನ್ನೊಂದು ಟ್ಯಾಬ್ಲೆಟ್ ಅನ್ನು ಬಿಡುಗಡೆ ಮಾಡಿದೆ.

ವಿಂಡೋಸ್ RT ಸರ್ಫೇಸ್ ಟ್ಯಾಬ್ಲೆಟ್ ARM ಪ್ರೋಸೆಸರ್ ಹೊಂದಲಿದ್ದು, ವಿಂಡೋಸ್ 8 ಪ್ರೊ ಟ್ಯಾಬ್ಲೆಟ್ ನಲ್ಲಿ ಇಂಟೆಲ್ ಕೋರ್, 3ನೆ ತಲೆಮಾರಿನ ಪ್ರೋಸೆಸರ್ ಇದ್ದು, 3 ತಿಂಗಳಿನ ನಂತರ ಮಾರುಕಟ್ಟೆಗೆ ಬರಲಿದೆ.

ಇವೆರಡರ ಸ್ಪೆಸಿಫಿಕೇಶನ್ ಗಳು ಈ ರೀತಿ ಇವೆ:

1) ಮೈಕ್ರೋಸಾಫ್ಟ್ ಸರ್ಫೇಸ್ RT ಮಾಡಲ್

 • 10.6" ಸ್ಕ್ರೀನ್ ಕ್ಲಿಯರ್ ಟೈಪ್ HD ಡಿಸ್ಪ್ಲೇ

 • USB 2.0 ಪೋರ್ಟ್,ಮೈಕ್ರೋ SD

 • ಮೈಕ್ರೋ HD ವೀಡಿಯೋ

 • ಮೆಗ್ನೀಶಿಯಂ ಕೇಸಿಂಗ್

 • ಮಲ್ಟಿ ಟಚ್ ಕೀಪ್ಯಾಡ್

 • 2x2 MIMO ಆಂಟೆನಾ

 • 32 GB/ 64 GB ಮೆಮೊರಿ

2) ಮೈಕ್ರೋಸಾಫ್ಟ್ ಸರ್ಫೇಸ್ ವಿಂಡೋಸ್ 8 ಪ್ರೊ

 • 10.6" ಸ್ಕ್ರೀನ್ ClearType HD Display,

 • ಮೈಕ್ರೋ SDXC

 • USB 3.0

 • ಮಿನಿ ಡಿಸ್ಪ್ಲೇ ಪೋರ್ಟ್ ವೀಡಿಯೊ

 • 2x2 MIMO ಆಂಟೆನಾ

 • 64 GB/128 GB ಮೆಮೊರಿ
ಇವೆರಡರ ಬೆಲೆಯನ್ನು ಮೈಕ್ರೋಸಾಫ್ಟ್ ಇನ್ನೂ ಘೋಷಣೆ ಮಾಡಿಲ್ಲ.
Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X